ಕಾವೇರಿ ನದಿ ನೀರಿನ ವಿವಾದ ದಿನದಿಂದ ದಿನಕ್ಕೆ ತೀವ್ರವಾಗಿ ಉಲ್ಭಣಗೊಳ್ಳುತ್ತಾ ಹೋಗುತ್ತಿದ್ದು, ಈಗಾಗಲೇ ಪರಿಸ್ಥಿತಿ ಮೀರದಂತೆ ರಾಜ್ಯ ಸರ್ಕಾರ ಬಿಗಿ ಬಂದೋಬಸ್ತ್ ಏರ್ಪಡಿಸಿವೆ. ಆದರೆ ಕಾವೇರಿ ಕಿಚ್ಚು ಎಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಅಂದ್ರೆ ಈ ವೀಡಿಯೋ ನೋಡಿ ನೀವೇ ಒಂದು ಕ್ಷಣ ಶಾಕ್ ಆಗೋದಂತು ಖಂಡಿತ…!
ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಹಲವಾರು ಕನ್ನಡ ಪರ ಸಂಘಟನೆಗಳು ರಾತ್ರಿ ಹಗಲು ಪ್ರತಿಭಟನೆ ನಡೆಸುತ್ತಿದ್ದು, ಇಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ವಿಭಿನ್ನ ರೀತಿಯಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಕರವೇ ಕಾರ್ಯಕರ್ತರಲ್ಲೊಬ್ಬನ ಕೈಯನ್ನು ಬ್ಲೇಡ್‍ನಿಂದ ಕುಯ್ದು, ಆತನ ರಕ್ತದಿಂದ ಹಾಳೆಯ ಮೇಲೆ ಕಾವೇರಿ ಎಂದು ಬರೆದುಕೊಳ್ಳುತ್ತಿರುವ ದೃಶ್ಯ ಎಂತವರ ಮನವನ್ನೂ ಕಲಕಿಸುತ್ತದೆ. ಈ ಮೂಲಕ ಕಾವೇರಿ ನಮ್ಮ ರಕ್ತದ ಕಣದಲ್ಲೂ ಹರಿಯುತ್ತಿದ್ದಾಳೆ. ಅದನ್ನು ಬಿಟ್ಟುಕೊಡಲು ಸಾಧ್ಯವೇ ಇಲ್ಲ ಎಂಬುದನ್ನು ಅವರು ತೋರಿಸಿದ್ದಾರೆ.
POPULAR STORIES :
ಕಾವೇರಿ ಎಫೆಕ್ಟ್: ರಸ್ತೆಯಲ್ಲಿ ಅಡುಗೆ ಮಾಡಿಕೊಂಡ ಪ್ರತಿಭಟನಾಕಾರರು..!
ಶುಕ್ರವಾರ ತಮಿಳು ಚಾನೆಲ್ಸ್ ಬಂದ್…!
ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!
ಸೆಪ್ಟೆಂಬರ್ 9ಕ್ಕೆ ಕರ್ನಾಟಕ ಬಂದ್‍ಗೆ ಕರೆ
ಮುಸ್ಲೀಂ ಮಕ್ಕಳಿಗೆ ಕುರಾನ್ ಹೇಳಿ ಕೊಡ್ತಾಳೆ ಈ ಹಿಂದು ಯುವತಿ..!