ಅಜಾತ ಶತ್ರು , ಭಾರತ ರತ್ನ , ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇನ್ನೂ ನಮ್ಮ ನಡುವೆ ಇದ್ದಾರೆ. ಅವರು ಇನ್ನೂ ಬಹುಕಾಲ ಇರಲಿ. ಅವರು ಬೇಗನೆ ಗುಣಮುಖರಾಗಲಿ ಎಂಬುದು ಎಲ್ಲರ ಪ್ರಾರ್ಥನೆ.
ಕೆಲವೇ ಕೆಲವು ನಿಮಿಷದ ಹಿಂದೆ ವಾಜಪೇಯಿ ಅವರು ಇನ್ನಿಲ್ಲ ಎಂಬ ಸುದ್ದಿ ಹಬ್ಬಿತು. ಆದರೆ, ಅವರ ಸ್ಥಿತಿ ಗಂಭೀರವಾಗಿದೆ ಯಷ್ಟೇ.ಆಸ್ಪತ್ರೆಯಿಂದ, ವೈದ್ಯರು ವಾಜಪೇಯಿ ಅವರ ಸ್ಥಿತಿ ಗಂಭೀರವಾಗಿದೆ ಎಂದಷ್ಟೇ ಹೇಳಿದ್ದಾರೆ. ಅಷ್ಟರಲ್ಲಾಗಲೇ ಕೆಲವರು ಕೆಲವರು ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ಹರಿಬಿಟ್ಟರು. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ಸಹ ವಾಜಪೇಯಿ ವಿಧಿವಶರಾದರು ಎಂದು ಟ್ವೀಟ್ ಮಾಡಿ ಮಹಾ ಯಡವಟ್ಟು ಮಾಡಿದರು. ಬಿಎಸ್ ವೈ ಅವರೇ ನೀವೇ ಡಾಕ್ಟರ್ ಆಗಿ ಬಿಟ್ರಾ?
ವಾಜಪೇಯಿ ಅವರು ಅಗಲುವ ಮುನ್ನವೇ ಬಿಎಸ್ ವೈ ‘ ನನಗೆ ಪ್ರೇರಣೆಯಾಗಿದ್ದ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಅಗಲಿಕೆಯಿಂದ ಮನಸ್ಸು ಭಾರವಾಗಿದೆ. ಶ್ರೇಷ್ಠ ನಾಯಕ ಹಾಗೂ ಅಪ್ರತಿಮ ದೇಶಭಕ್ತರಾಗಿದ್ದ ಅವರ ನಿಧನವು ದೇಶಕ್ಕೆ ಬಹುದೊಡ್ಡ ನಷ್ಟ. ಭಗವಂತನು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ್ದಾರೆ.
ಅಂದಹಾಗೆ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದ್ದು, ಚೇತರಿಕೆ ಕಂಡು ಬರಲಿ, ಗುಣಮುಖರಾಗಲಿ ಎಂಬುದೇ ಎಲ್ಲರ ಆಶಯ.