ಉಪಚುನಾವಣೆಯಲ್ಲಿ ಬಿಜೆಪಿಗೆ 2, ಕಾಂಗ್ರೆಸ್ ಗೆ 1 ಕ್ಷೇತ್ರದಲ್ಲಿ ಗೆಲುವು..!

admin
By admin
1 Min Read

ಬಿಜೆಪಿಗೆ `ಜೈ’ ಅಂದ ಮತದಾರ ಕಾಂಗ್ರೆಸ್ ಗೆ `ಕೈ’ ಕೊಟ್ಟ..!
Election-Web

ಉಪಚುನಾವಣೆಯಲ್ಲಿ ಬಿಜೆಪಿಗೆ 2, ಕಾಂಗ್ರೆಸ್ ಗೆ 1 ಕ್ಷೇತ್ರದಲ್ಲಿ ಗೆಲುವು..!
ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಪಕ್ಷಗಳ ಪ್ರತಿಷ್ಠಿಯ ಕಣವಾಗಿದ್ದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ ಎರಡು ಕ್ಷೇತ್ರದಲ್ಲೂ ಕಾಂಗ್ರೆಸ್ ಒಂದುಕ್ಷೇತ್ರದಲ್ಲೂ ಗೆಲುವನ್ನು ಪಡೆದಿದೆ. ಇದರೊಂದಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಜುಗರಕ್ಕೊಳಗಾಗಿವೆ.
ಫೆ.13ರಂದು ಹೆಬ್ಬಾಳ, ದೇವದುರ್ಗ ಹಾಗೂ ಬೀದರ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆದಿತ್ತು. ಅದರ ಫಲಿತಾಂಶ ಈಗಷ್ಟೇ ಪ್ರಕಟವಾಗಿದ್ದು ಹೆಬ್ಬಾಳದಲ್ಲಿ ಬಿಜೆಪಿ ಅಭ್ಯರ್ಥಿ ವೈ ಎ ನಾರಾಯಣಸ್ವಾಮಿ ಭರ್ಜರಿ ಗೆಲುವನ್ನು ಪಡೆದಿದ್ದಾರೆ. ಸಿ.ಕೆ ಜಾಫರ್ ಮಗ ರೆಹಮಾನ್ ಷರೀಫ್ (ಕಾಂಗ್ರೆಸ್) ಜೆಡಿಎಸ್ ನ ಇಸ್ಮಾಯಿಲ್ ಷರೀಫ್ ಗೆ ಮುಭಂಗವಾಗಿದೆ.
ದೇವದುರ್ಗದಲ್ಲಿ ಬಿಜೆಪಿಯ ಅಭ್ಯರ್ಥಿ ಶಿವನಗೌಡ ನಾಯಕ್ ಗೆದ್ದಿದ್ದಾರೆ. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ ರಾಜಶೇಖರ್ ನಾಯಕ್ ಹಾಗೂ ಜೆಡಿಎಸ್ ಕರಿಯಮ್ಮ ಸೋತಿದ್ದಾರೆ.
ಇನ್ನುಳಿದಂತೆ ಬೀದರ್ ನಲ್ಲಿ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆಗೆ ಸೋಲಾಗಿದ್ದು, ಆ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಹೀಂಖಾನ್ ಗೆಲ್ಲುವುದರೊಂದಿಗೆ ಕಾಂಗ್ರೆಸ್ ಮರ್ಯಾದೆ ಉಳಿಸಿದ್ದಾರೆ.

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video

ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!

20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?

TAGGED:
Share This Article