ಯುವತಿ ಮೇಲೆ ಮೂತ್ರ ತುಂಬಿದ ಬಲೂನು ಎಸೆದರು…!

admin
By admin
0 Min Read

ಹೋಳಿ ಹಬ್ಬದ ಆಚರಣೆ ವೇಳೆ ಯುವತಿ ಮೇಲೆ ದುಷ್ಕರ್ಮಿಗಳು ಮೂತ್ರ ತುಂಬಿದ ಬಲೂನು ಎಸೆದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.


ದೆಹಲಿ ವಿಶ್ವವಿದ್ಯಾಲಯದ 18 ವರ್ಷದ ವಿದ್ಯಾರ್ಥಿನಿ ಅಮರ್ ಕಾಲೋನಿಯಲ್ಲಿನ ತಮ್ಮ ಮನೆಗೆ ಹೋಗುವಾಗ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಕೆಯ ಮೇಲೆ ಬಲೂನು ಎಸೆದ್ದಿದ್ದಾರೆ ಎಂದು ತಿಳಿದುಬಂದಿದೆ.


ಬಲೂನು ಎದೆಯ ಮೇಲೆ ಜೋರಾಗಿ ಬಿದ್ದಿದ್ದರಿಂದ ನೋವು ತಾಳಲಾಗದೆ ಬಿದ್ದೆ. ಎದ್ದು‌ ನೋಡುವಾಗ ಅವರು ಅಲ್ಲಿರಲಿಲ್ಲ. ಬಲೂನು ಹೊಡೆದಾಗ ಅದರಲ್ಲಿ ಮೂತ್ರದ ವಾಸನೆ ಬರುತ್ತಿತ್ತು ಎಂದು ಯುವತಿ ದೂರು ನೀಡಿದ್ದಾರೆ.

Share This Article