ಇಂದು ಎಲ್ಲೆಡೆ ಗಣಪತಿ ಹಬ್ಬದ ಸಂಭ್ರಮ. ಗಣೇಶ ತನ್ನ ಹಬ್ಬದ ದಿನ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಜೊತೆ ನಾಟಿ ಮಾಡುವಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರೊಡನೆ 2019ರ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಇದ್ದಾನೆ….! ಅಷ್ಟೇ ಅಲ್ಲದೆ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾನೆ…!
ಹೌದು, ಮೈಸೂರಿನ ಕುಂಬಾರಗೇರಿಯ ಕಲಾವಿದ ಡಿ. ರೇವಣ್ಣ ಅವರ ಕೈಚಳಕದಲ್ಲಿ ಗಣೇಶ ಈ ಅವತಾರಗಳಲ್ಲಿ ಕಾಣಿಕೊಂಡಿದ್ದಾನೆ.
ಸಿಎಂ ಕುಮಾರ ಸ್ವಾಮಿ ಅವರ ಜೊತೆ ನಾಟಿ ಮಾಡುತ್ತಿರುವ ಗಣೇಶನ ವಿಗ್ರಹ, ಪಿಎಂ ಮೋದಿ ಜೊತೆ ಚುನಾವಣಾ ಪ್ರಚಾರ ನಡೆಸುತ್ತಿರುವ ಗಣೇಶನ ವಿಗ್ರಹ ಹಾಗೂ ಅಬ್ದುಲ್ ಕಲಾಂ, ವಾಜಪೇಯಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವ ಗಣೇಶನ ವಿಗ್ರಹಗಳು ಎಲ್ಲರ ಗಮನ ಸೆಳೆದಿವೆ.