ಮುಂಬೈನ ವಾಸಾಯಿ ಹೌಸಿಂಗ್ ಸೊಸೈಟಿಯ ಕಟ್ಟಡದ ಒಂದು ಮನೆಯನ್ನು ಮುಸ್ಲೀಂ ಕುಟುಂಬಕ್ಕೆ ಮಾರಾಟ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಅಲ್ಲಿನ ನಿವಾಸಿಗಳು ಮುಸ್ಲೀಮರಿಗೆ ಕಟ್ಟಡದಲ್ಲಿ ಮನೆ ನೀಡದಂತೆ ಮಾಲಿಕನಿಗೆ ಎಚ್ಚರಿಕೆ ನೀಡಿದ್ದಾರೆ..!
ಗುಜರಾತಿ ಮಾತನಾಡುವ ಜನರಿರುವ ಈ ಅಪಾರ್ಟ್‍ಮೆಂಟ್ನಲ್ಲಿ ಸೆ.4 ರಂದು ನಡೆಸಿದ್ದ ಸಭೆಯಲ್ಲಿ ಮುಸ್ಲೀಮರಿಗೆ ಮನೆ ನೀಡದಿರಲು ನಿರ್ಣಯ ಕೈಗೊಂಡಿದ್ದಾರೆ. ನೀವು ಮುಸ್ಲೀಂ ವ್ಯಕ್ತಿಗೆ ಇಲ್ಲಿನ ಮನೆಯನ್ನು ಮಾರಾಟ ಮಾಡಲು ಹೊರಟಿರುವುದು ನಮ್ಮ ಗಮನಕ್ಕೆ ಬಂದಿದ್ದು, ಈ ಹೌಸಿಂಗ್ ವಾರ್ಡ್‍ನಲ್ಲಿ ಮುಸ್ಲೀಮರಿಗೆ ಮನೆ ನೀಡಬಾರದು ಎಂಬುದು ನಮ್ಮೆಲ್ಲರ ಅಭಿಪ್ರಾಯವಾಗಿದೆ. ಬೇರೆ ಸಮುದಾಯಗಳಿಗೆ ಇಲ್ಲಿರುವ ಮನೆ ಮಾರಾಟ ಮಾಡುವುದರಲ್ಲಿ ನಮ್ಮ ಅಭಿಮತವೇನು ಎಲ್ಲ ಎಂಬ ಸಲಹೆಯೊಂದಿಗೆ 11 ಜನರ ಸಹಿ ಹಾಕಿದ ಪತ್ರವನ್ನು ಹ್ಯಾಪಿ ಜೀವನ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಮನೆ ಮಾಲಿಕ ಕಾಂತಬೇನ್ ಪಟೇಲ್ ಅವರಿಗೆ ನೀಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಪಟೇಲ್ ಹೌಸಿಂಗ್ ಸೊಸೈಟಿಗಳ ಉಪ ನೊಂದಣಾಧಿಕಾರಿ ಹಾಗೂ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. 710 ಚದರ ಅಡಿಗಳ ತಮ್ಮ ಮನೆಯನ್ನು ಮಾರಾಟದ ಒಪ್ಪಂದಕ್ಕೆ ನಿರ್ಧರಿಸಿದ್ದು, 1 ಲಕ್ಷ ರೂ. ಮುಂಗಡ ಹಣವನ್ನು ಪಡೆದುಕೊಂಡಿದ್ದಾರೆ. ಸಾಲಕ್ಕೆ ಅರ್ಜಿ ಹಾಕುವ ಉದ್ದೇಶದಿಂದ ಮನೆಯನ್ನು ಕೊಳ್ಳಲು ಮುಂದಾಗಿರುವ ವಿಕರ್ ಅಹಮ್ಮದ್ ಖಾನ್‍ಗೆ ಸೊಸೈಟಿಯಿಂದ ನಿರಾಪೇಕ್ಷಣಾ ಪತ್ರವನ್ನು ಕೇಳಿದ್ದು, ಅವರಿಗೆ ನಿರಾಪೇಕ್ಷಣೆ ಪತ್ರವನ್ನು ನೀಡಲು ಸೊಸೈಟಿ ನಿರಾಕರಿಸುತ್ತಿದೆ ಎಂದು ಜಿಗ್ನೇಶ್ ದೂರಿದ್ದಾರೆ.
ಸೊಸೈಟಿಯ ಬಹುತೇಕ ಜನರು ಹಿಂದು ಆದ್ದರಿಂದ ಇಲ್ಲಿನ ಮನೆಯನ್ನು ಹಿಂದೂಯೇತರಿಗೆ ನೀಡಲು ಅನುಮತಿ ನೀಡುತ್ತಿಲ್ಲ. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹೌಸಿಂಗ್ ಸೊಸೈಟಿಯ ಕಾರ್ಯದರ್ಶಿ ಜಿತೇಂದ್ರ ಜೈನ್ ಹೇಳಿದ್ದಾರೆ. ಹೌಸಿಂಗ್ ಸೊಸೈಟಿಯ ಐದನೇ ಫ್ಲಾಟ್‍ನಲ್ಲಿ ಎಲ್ಲರೂ ಸಸ್ಯಹಾರಿಯಾಗಿದ್ದರಿಂದ ಅಲ್ಲಿ ಮಾಂಸಹಾರಿಗಳಿಗೆ ಪ್ರವೇಶ ನಿರಾಕರಿಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
POPULAR STORIES :
ನಿಜವಾದ ಪ್ರೀತಿಗೆ ಎಂದೂ ಸಾವಿಲ್ಲ..! ಎಂದೂ ಅವನನ್ನು ಬಿಟ್ಟಿರದ ಅವಳೇಕೆ ದೂರಾದಳು..?!
ಹಸಿದರಿಗಾಗಿ `ರೋಟಿ ಬ್ಯಾಂಕ್’..! ಶ್ರೀಮಂತರು ದಿನಕ್ಕೆ ಎರಡು ರೊಟ್ಟಿಯನ್ನು ಈ ಬ್ಯಾಂಕಿಗೆ ಡೆಪಾಸಿಟ್ ಮಾಡ್ತಾರೆ..!
ನೀವೂ ಸಂಚಾರಿ ನಿಯಮ ಪಾಲಿಸೋದಿಲ್ವಾ ಹಾಗಾದ್ರೆ ಈ ವೀಡಿಯೋ ನೋಡಿ..!
ಒಂದು ಕಾಲದ ವಿಜ್ಞಾನಿ ಇಂದು ಭಿಕ್ಷುಕ..! ಭಾರತದ ಐನ್ ಸ್ಟೀನ್ ನ ದುರಂತ ಕಥೆ ಇದು..!