ಚುಟುಕು ಕ್ರಿಕೆಟ್ ನಲ್ಲಿ ತನ್ನದೇಯಾದ ಛಾಪು ಮೂಡಿಸುತ್ತಿರುವ ಅಪಘಾನಿಸ್ತಾನ ಇಂದು ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡುತ್ತಿದೆ.
ಯುದ್ಧದ ಭೀಕರತೆ ನಂತರ ಚಿಗುರುತ್ತಿರುವ ಅಪಘಾನಿಸ್ಥಾನ ಟೆಸ್ಟ್ ಕ್ರಿಕೆಟ್ ಗೆ ಎಂಟ್ರಿಕೊಡುತ್ತಿದ್ದು, ಇಂದಿನಿಂದ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ವಿಶ್ವದ ನಂಬರ್ 1 ತಂಡ ಭಾರತದ ವಿರುದ್ಧ ಆಡಲಿದೆ.
ಭಾರತ ಮತ್ತು ಅಪಘಾನಿಸ್ತಾನ್ ವಿರುದ್ಧದ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ವೇದಿಕೆಯಾಗಿದೆ.
ಅಪಘಾನಿಸ್ತಾನದಲ್ಲಿ ತಾಲೀಬಾನ್ ಆಳ್ವಿಕೆಯಲ್ಲಿ ಎಲ್ಲಾ ಕ್ರೀಡೆಗಳಿಗೂ ನಿಷೇಧ ಹೇರಲಾಗಿತ್ತು. 1995ರಲ್ಲಿ ಸ್ಥಾಪನೆಗೊಂಡ ಅಪಘಾನಿಸ್ತಾನ ಕ್ರಿಕೆಟ್ ಒಕ್ಕೂಟಕ್ಕೆ 2000ದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಅಗ್ರಸಂಸ್ಥೆ ಸದಸ್ಯತ್ವ ಪಡೆಯುವಲ್ಲಿ ಯಶಸ್ವಿಯಾಯಿತು.
ಇಂದು ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಬಲಿಷ್ಠ ಭಾರತದ ವಿರುದ್ಧ ಆಡುತ್ತಿದ್ದರೂ ನಿರೀಕ್ಷಗೂ ಮೀರಿದ ಉತ್ತಮ ಆಟವಾಡುವ ನಿರೀಕ್ಷೆಯಂತೂ ಇದ್ದೇ ಇದೆ.
ಟೀಂ ಇಂಡಿಯಾ ಕಾಯಂ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಪಂದ್ಯ ಬೆಳಗ್ಗೆ 9.30 ಕ್ಕೆ ಆರಂಭವಾಗಲಿದೆ.