ಬ್ರಿಟೀಷ್ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಷನ್ (ಬಿಬಿಸಿ) ಪಟ್ಟಿ ಮಾಡಿರೋ ವಿಶ್ವದ 100 ಸ್ಪೂರ್ತಿದಾಯಕ ಮಹಿಳೆಯರಲ್ಲಿ ನಮ್ಮ ಭಾರತದ ಜನಪ್ರೀಯ ಮಹಿಳೆಯರೂ ಸ್ಥಾನಪಡೆದಿದ್ದಾರೆ..! ವಿಶ್ವದ ನೂರು ಸ್ಪೂರ್ತಿದಾಯಕ ಮಹಿಳೆಯರಲ್ಲಿ ಏಳು ಮಹಿಳೆಯರು ಭಾರತೀಯರೇ ಆಗಿದ್ದಾರೆ..! ಈ ನಮ್ಮ ಸ್ಪೂರ್ತಿದಾಯಕ ವ್ಯಕ್ತಿತ್ವಗಳಲ್ಲಿ ಗಾಯಕಿ, ಆಟಗಾರ್ತಿ, ನಟಿ, ಉದ್ಯಮಿ ಎಲ್ಲರೂ ಇದ್ದಾರೆ..! ವಿವಿಧ ಕ್ಷೇತ್ರಗಳಲ್ಲಿಯೂ ನಮ್ಮ ಮಹಿಳೆಯರು ಪ್ರಜ್ವಲಿಸುತ್ತಿದ್ದಾರೆ ಎಂಬುದು ಮತ್ತೆ ಮತ್ತೆ ಗೊತ್ತಾಗುತ್ತಲೇ ಇದೆ..!
ಅಂದಹಾಗೆ, ಪ್ರತಿವರ್ಷದಂತೆ ಈ ವರ್ಷವೂ 100 ಸ್ಪೂರ್ತಿದಾಯಕ ಮಹಿಳೆಯರನ್ನು ಪರಿಚಯಿಸಿರುವ ಬಿಬಿಸಿ ಸ್ಪೂರ್ತಿದಾಯಕ ಮಹಿಳಾಮಣಿಯರ ಪಟ್ಟಿಯಲ್ಲಿ ಇರುವ ಆ ಏಳುಜನ ನಮ್ಮವರ್ಯಾರು ಅನ್ನೋದರ ಪಟ್ಟಿ ಇಲ್ಲಿದೆ. ನೋಡಿ, ಅವರಿಗೆ ಶುಭವಾಗಲಿ ಅಂತ ಹರಸಿ.. ಅವರ ಸಾಧನೆಯನ್ನು ನೆನಪಿಸಿಕೊಂಡು ಮನದಲ್ಲೇ ಅವರಿಗೆ ಕೃತಜ್ಞತೆ ತಿಳಿಸಿಬಿಡಿ..! ಇಂಥಾ ಮಹಿಳೆಯರು ನಮ್ಮ ಭಾರತೀಯರು ಅನ್ನೋದಕ್ಕೆ ನಿಜಕ್ಕೂ ಖಷಿ ಆಗುತ್ತೆ..!
ಸ್ಪೂರ್ತಿದಾಯಕ ಭಾರತೀಯ ಮಹಿಳೆಯರು..
1. ಸಾನಿಯಾ ಮಿರ್ಜಾ : ಜನಪ್ರೀಯ ಟೆನಿಸ್ ಆಟಗಾರ್ತಿ, ನಮ್ಮ ಭಾರತೀಯರಾದ ಈ ಮೂಗುತಿ ಸುಂದರಿ ಬಿಬಿಸಿ ಪಟ್ಟಿ ಮಾಡಿರೋ 100 ಸ್ಪೂರ್ತಿದಾಯಕ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಇವರು ಈ ವರ್ಷ ವಿಂಬಲ್ಡನ್ ಡಬಲ್ಸ್ ಗೆಲುವೂ ಸೇರಿದಂತೆ ಪ್ರಮುಖ ಅನೇಕ ಪ್ರಮುಖ ಟೂರ್ನಿಗಳಲ್ಲಿ ಗೆಲ್ಲುವುದರ ಮೂಲಕ ದೇಶಕ್ಕೆ ಹೆಸರು ತಂದುಕೊಟ್ಟಿರುವುದು ಸ್ಮರಣೀಯ..!
2. ಆಶಾ ಬೋಸ್ಲೆ : ದೇಶದ ಹೆಸರಾಂತ ಗಾಯಕಿ `ಆಶಾಬೋಸ್ಲೆ’ಯವರು ಈ ಪಟ್ಟಿಯಲ್ಲಿರೋ ಅಗ್ರಮಾನ್ಯ ಭಾರತೀಯ ಮಹಿಳೆ. ಸಂಗೀತ ಲೋಕದ ದಂತಕತೆ ಆಶಾಬೋಸ್ಲೆಯವರು 1943ರಲ್ಲಿ ಬಾಲಿವುಡ್ಗೆ ಎಂಟ್ರಿಕೊಟ್ಟವರು. ಇವರು ಸರಿ ಸುಮಾರು 1000 ಸಿನಿಮಾಗಳಿಗೆ ಹಾಡಿದ್ದಾರೆ..!
3. ಕಾಮಿನ್ ಕೌಶಲ್ : ಬಾಲಿವುಡ್ ನ ಹೆಸರಾಂತ ನಟಿ. ಪ್ರಶಸ್ತಿ ಪುರಸ್ಕೃತ ಸಿನಿಮಾವಾದ ನೀಚ ನಗರ್ ನಲ್ಲಿ ಪ್ರಮುಖ ನಟಿಯಾಗಿ ನಟಿಸಿದ್ದಂತವರು..! ಈ ಭಾರತೀಯ ಸಿನಿಮಾ 1946 ರಲ್ಲಿ ಕ್ಯಾನೆಸ್ ಚಲನ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಎಂದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹದುದಾಗಿದೆ..!
4. ರಂಪಿ ಮತ್ತು ಅವರ ಸೋದರಿ ಕರ್ಮಜಿತ್ : ತಂದೆಯ ಮರಣದ ನಂತರ 32 ಎಕರೆ ಕೃಷಿ ಭೂಮಿಯನ್ನು ನೋಡಿಕೊಳ್ಳುತ್ತಿರೋ ರಾಜಸ್ಥಾನದ ಹೆಮ್ಮೆಯ ರೈತೆಯರು..!
5. ಸ್ಮೃತಿ : ಭಾರತದಲ್ಲಿ ಕಿವುಡರಿಗಾಗಿ ಸಾಂಕೇತಿಕ ಭಾಷೆಯನ್ನು ಅಭಿವೃದ್ಧಿಪಡಿಸಿ ಅತುಲ್ಯಕಾ ಎಂಬ ಎನ್ಜಿಒ ಮೂಲಕ ಕಿವಿಕೇಳದ ಕಲಾವಿದರ ಸಬಲೀಕರಣಕ್ಕೆ ಶ್ರಮಿಸುತ್ತಿರುವವರು.
6. ಮಮ್ತಾಝ್ : ಮಹಿಳೆಯರು ಉಚಿತ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ರೈಟ್ ಟು ಪೀ ನೆಟ್ ವರ್ಕ್ ಮೂಲಕ ಹೋರಾಟ ಮಾಡಿದಂತವರು. ಮುಂಬೈಯಲ್ಲಿ 96 ಶೌಚಾಯಲಗಳನ್ನೂ ಮತ್ತು ಮಹಿಳೆಯರಿಗಾಗಿಯೇ ಇರುವ ಆ ಶೌಚಾಲಯಗಳಿಗೆ 50ಮಿಲಿಯನ್ ರೂಪಾಯಿಗಳನ್ನು ಸರ್ಕಾರ ಒದಗಿಸಬೇಕೆಂದು ಹೋರಾಟ ಮಾಡಿದಂತ ದಿಟ್ಟ ಮಹಿಳೆ..!
7. ಕನಿಕಾ : ಇಪ್ಪತ್ತನೇ ವರ್ಷಕ್ಕೆ ಕ್ಯಾನ್ಸರ್ಗೆ ತುತ್ತಾಗುವ ಮೊದಲೇ ತನ್ನನ್ನು ತಾಯಿ ಗುರುತಿಸಿಕೊಂಡವರಿವರು. ಭಾರತದಲ್ಲೇ ಮೊಟ್ಟಮೊದಲನೆಯದಾದ ಹಾಗೂ ಏಕೈಕವಾದ ಖಾಸಗಿ ಜೆಟ್ ಹಾಗೂ ಹೆಲಿಕ್ಯಾಪ್ಟರ್ಸ್ ಹಕ್ಕುಪತ್ರಗಳ ಮಾರುಕಟ್ಟೆಯನ್ನು ಸ್ಥಾಪಿಸಿದವರು.
ಈ ನಮ್ಮ ಭಾರತೀಯ ಮಹಿಳೆಯರ ಬಗ್ಗೆ ಹೆಮ್ಮೆಪಡುತ್ತಾ.. ವಿಶ್ವದ ಸ್ಪೂರ್ತಿದಾಯಕ ಮಹಿಳೆಯರ ಸಾಲಿನಲ್ಲಿ ಇನ್ನೂ ಹೆಚ್ಚು ಹೆಚ್ಚು ಭಾರತೀಯ ಮಹಿಳೆಯರು ಬರಲಿ ಅಂತ ಆಶಿಸೋಣ.
ಒಟ್ಟಾರೆ ನೂರು ಜನ ಸ್ಪೂರ್ತಿದಾಯಕ ಮಹಿಳೆಯರ ಪಟ್ಟಿಯನ್ನು ನೋಡಬೇಕೆಂದು ಅನಿಸಿದರೆ ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ
- ಶಶಿಧರ ಡಿ ಎಸ್ ದೋಣಿಹಕ್ಲು
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
1 ರೂಪಾಯಿ ನೋಟಿನ ಬೆಲೆ 99 ರೂಪಾಯಿ..! ಆನ್ ಲೈನ್ ತಾಣದಲ್ಲಿ ಮಾರಾಟಕ್ಕಿದೆ ನೋಟು
ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!
ಕನ್ನಡಿಗರು ನೋಡಲೇಬೇಕಾದ ಕಿರುಚಿತ್ರ `ಪ್ರೆಸೆಂಟ್ ಸಾರ್’ ಕನ್ನಡದ ಶಾಲೆಗಳ ಪರಿಸ್ಥಿತಿ ಏನಾಗಿದೆ ಅಂತ ನೀವೇ ನೋಡಿ..!
ನಾನು ಹೆಮ್ಮೆಯ ಕನ್ನಡಿಗ ತಂಡ ನಮ್ಮ ಮೆಟ್ರೋಗೆ ಶಂಕರ್ ನಾಗ್ ರವರ ಹೆಸರಿಡಬೇಕೆಂದು ಪಿಟಿಷನ್ ಶುರು ಮಾಡಿದೆ..!
ಈ ಗ್ರಾಮ ಇಡೀ ಜಗತ್ತಿಗೇ ಮಾದರಿ..! ಹೆಣ್ಣನ್ನು ದ್ವೇಷಿಸುವವರು ಇದನ್ನು ಓದಲೇಬೇಕು..!
ವರುಣರಾಯ ನಿಲ್ಲಿಸು ನಿನ್ನ ಆರ್ಭಟವ..! ತಮಿಳುನಾಡಿನ ಪರಿಸ್ಥಿತಿ ಹೇಗಿದೆ ಅಂತ ನೀವೆ ನೋಡಿ..!
ಅವನಿಗೆ ಉಗ್ರನೆಂಬ ಹಣೆಪಟ್ಟಿ ಕಟ್ಟುತ್ತಿದ್ದರು..! ಟೈಮ್ ಸರಿ ಇಲ್ಲ ಅಂದ್ರೆ ಅಷ್ಟೇ….