IPS ಅಧಿಕಾರಿಗಳ ಹೆಸರಿನಲ್ಲಿ ಫೇಸ್‌ಬುಕ್ ನಕಲಿ ಖಾತೆ ಸೃಷ್ಟಿಸಿದ್ದ ಆರೋಪಿ ಅರೆಸ್ಟ್!

tnit editors
1 Min Read

IPS ಅಧಿಕಾರಿಗಳ ಹೆಸರಿನಲ್ಲಿ ಫೇಸ್‌ಬುಕ್ ನಕಲಿ ಖಾತೆ ಸೃಷ್ಟಿಸಿದ್ದ ಆರೋಪಿ ಅರೆಸ್ಟ್!

ಬೆಳಗಾವಿ ಎಸ್ಪಿ ಡಾ ಭೀಮಾಶಂಕರ ಗುಳೇದ್, ಗದಗ ಎಸ್ಪಿ ನೇಮಗೌಡ, ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಅವರುಗಳ ಹೆಸರಿನಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ಸೃಷ್ಟಿ ಮಾಡಿದ್ದ ಆರೋಪಿಯನ್ನು ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ರಾಜಸ್ತಾನ ಮೂಲದ ಅರ್ಬಾಜ್ ಖಾನ್ ಬಂಧಿತ ಆರೋಪಿ, ಬೆಳಗಾವಿ ಎಸ್ಪಿ ಡಾ ಭೀಮಾಶಂಕರ ಗುಳೇದ್, ಗದಗ ಎಸ್ಪಿ ನೇಮಗೌಡ, ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಅವರುಗಳ ಹೆಸರಿನಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ಸೃಷ್ಟಿ ಮಾಡಿದ್ದಾನೆ. ಮೊದಲು, ಬೆಳಗಾವಿ ಜಿಲ್ಲಾ ಎಸ್ಪಿ ಹೆಸರಿನ ನಕಲಿ ಅಕೌಂಟ್‌ನಿಂದ ಎಲ್ಲರಿಗೂ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ಆ ಬಳಿಕ ಬರ್ತ್ ಡೇ ಇದೇ ಅಂತಾ ಪೋಸ್ಟ್ ಹಾಕಿದ್ದಾನೆ. ಪರ್ಸನಲ್ ಆಗಿ ಶುಭಾಶಯ ತಿಳಿಸಿದರನ್ನು ಟಾರ್ಗೆಟ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದನು. ಈ ವಿಚಾರ ಗೊತ್ತಾಗುತ್ತಿದ್ದಂತೆ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ್ ಕೇಸ್ ದಾಖಲಿಸಿದ್ದಾರೆ. ಸಿಇಎನ್ ಸಿಪಿಐ ಸುನೀಲ್ ನಂದೇಶ್ವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share This Article