ಇಲ್ಲೊಬ್ಬ ಕಾಮುಕ ಶಿಕ್ಷಕ ತನ್ನ ಹೆಂಡ್ತಿ ಸ್ನಾನ ಮಾಡೋ ದೃಶ್ಯವನ್ನು ವೀಡಿಯೋ ಮಾಡ್ಕೊಂಡು ತನ್ನ ವಿದ್ಯಾರ್ಥಿಗಳಿಗೆ ತೋರಿಸಿ ವಿಕೃತಿ ಮೆರೆದಿರೋದು ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ವಡ್ಡರಕುಪ್ಪೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ದಯಾನಂದ ಮೂರ್ತಿ ಕಾಮಿ ಮೇಷ್ಟ್ರು.
ಈತ ತನ್ನ ಹೆಂಡ್ತಿ ಸ್ನಾನ ಮಾಡುವ ವೀಡಿಯೋವನ್ನು ಸೆರೆಹಿಡಿದು ಅದನ್ನು ಶಾಲೆಗೆ ತಂದು ಮಕ್ಕಳಿಗೆ ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಇವನ ಈ ಕಾಮಚೇಷ್ಟೆ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ. ಆ ಆಸಾಮಿ ಹೀಗೆ ಪೆಟ್ಟು ತಿನ್ತಾ ಇರೋದು ಇದೇ ಮೊದಲಲ್ಲ…! ಕುಣಿಗಲ್ ಪಟ್ಟಣದ ಕೋ ಟೆ ಬಡಾವಣೆ ಶಾಲೆಯಲ್ಲೂ ಇಂತಹದ್ದೇ ಕಾಮಚೇಷ್ಟೆ ಮಾಡಿ ಗೂಸ ತಿಂದು ವರ್ಗಾವಣೆ ಗೊಂಡಿದ್ದನಂತೆ.