ಈ ಘೋರ ಅಪರಾಧ ಮಾಡಿದವರನ್ನು ಎನ್’ಕೌಂಟರ್ ಮಾಡಬೇಕು: ಪ್ರಮೋದ ಮುತಾಲಿಕ್
ಧಾರವಾಡ: ಭಕ್ತಿ-ಭಾವದಿಂದ ತುಂಬಿ ತುಳಕುವ ಪ್ರಸಾದದಲ್ಲಿ ಇಂತಹ ದ್ರೋಹ ಮಾಡಿದ್ದಾರೆ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ. ಈ ಘೋರ ಅಪರಾಧ ಮಾಡಿದವರನ್ನು ಎನ್ಕೌಂಟರ್ ಮಾಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇಡೀ ಜಗತ್ತಿನ ಕೋಟ್ಯಂತರ ಭಕ್ತರು ಅಲ್ಲಿಗೆ ಬರುತ್ತಾರೆ.
ಭಕ್ತಿ-ಭಾವದಿಂದ ತುಂಬಿ ತುಳಕುವ ಪ್ರಸಾದದಲ್ಲಿ ಇಂತಹ ದ್ರೋಹ ಮಾಡಿದ್ದಾರೆ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ. ಈ ಘೋರ ಅಪರಾಧ ಮಾಡಿದವರನ್ನು ಎನ್ಕೌಂಟರ್ ಮಾಡಬೇಕು. ಇದು ಕ್ರಿಮಿನಲ್ ಅಪರಾಧ. ಹಿಂದೂಗಳ ನಂಬಿಕೆ, ವಿಶ್ವಾಸಕ್ಕೆ ಆಘಾತ ಮಾಡುವ ಕೆಲಸ. ಪ್ರಸಾದದ ಪವಿತ್ರತೆಗೆ ಕಳಂಕ ತಂದ ಕೆಲಸ. ತಪ್ಪಿತಸ್ಥರ ಮೇಲೆ ಕೋರ್ಟ್ ಸೆಕ್ಷನ್ ಹಾಕಿದರೆ ಸಾಲದು, ಕಠಿಣ ಕ್ರಮ ಆಗಬೇಕು ಎಂದಿದ್ದಾರೆ.