ಎಚ್ಚರ ಎಚ್ಚರ ಎಚ್ಚರ! ರಾಜ್ಯದಲ್ಲಿ ಮತ್ತೆ ಮಳೆಯ ರುದ್ರತಾಂಡವ!

admin
By admin
1 Min Read

ರಾಜ್ಯದ ನಾನಾ ಕಡೆಗಳಲ್ಲಿ ಮಳೆಯ ಆರ್ಭಟ ಶುರುವಾಗಿದೆ. ಮಳೆ ಮುಂದುವರೆಯಲಿದ್ದು, ಮತ್ತೊಮ್ಮೆ ವರುಣನ ರುದ್ರತಾಂಡವಕ್ಕೆ ರಾಜ್ಯ ನಡುಗಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.

ದಕ್ಷಿಣ ಒಳನಾಡಿನಲ್ಲಿ ಸೆಪ್ಟೆಂಬರ್ 29ವರೆಗೆ, ಕರಾವಳಿ ಭಾಗದಲ್ಲಿ ಸೆಪ್ಟೆಂಬರ್ 28 ರವರೆಗೆ ಭಾರೀ ಮಳೆ ಆಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ , ರಾಮನಗರ ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಸೆ. 29ರವರೆಗೆ ಭಾರೀ ಮಳೆ ಆಗಲಿದೆ.
ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ಹಾವೇರಿ,ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಸೆ.27 ಮತ್ತು ಸೆ.28 ರಂದು ಭಾರೀ ಮಳೆ ಆಗಲಿದೆ ಎಂದು‌ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

Share This Article