ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ: ಜಿ.ಪರಮೇಶ್ವರ್

tnit editors
1 Min Read

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ: ಜಿ.ಪರಮೇಶ್ವರ್

 

ಬೆಂಗಳೂರು: ಗುತ್ತಿಗೆದಾರ ಸಚಿನ್​ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಇದೀಗ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಪ್ರಿಯಾಂಕ್ ಖರ್ಗೆಯವರ ಮೇಲೆ ಆರೋಪ ಮಾಡುತ್ತಿದೆ. ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದಿದ್ದಾರೆ.

ಸಚಿವರ ಹೆಸರು ಎಲ್ಲೂ ಡೆತ್‍ನೋಟ್‍ನಲ್ಲಿ ನೇರವಾಗಿ ಇಲ್ಲ. ಇನ್ನೂ ಬಿಜೆಪಿಯವರು ಸಿಬಿಐಗೆ ಕೊಡಲಿ ಎಂದು ಹೇಳುತ್ತಿದ್ದಾರೆ. ಅನಾವಶ್ಯಕ ರಾಜಕೀಯ ಮಾಡುವುದು ಸರಿಯಲ್ಲ. ಎಲ್ಲ ಕೇಸ್‍ಗಳನ್ನು ಸಿಬಿಐಗೆ ಕೊಡೋಕೆ ಸಾಧ್ಯವಿಲ್ಲ. ಸಿಐಡಿ ತನಿಖೆ ನಡೆಸಲು ಸಮರ್ಥವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೀದರ್​ನ ಯುವ ಗುತ್ತಿಗೆದಾರ ಸಚಿನ್​ ಪಂಚಾಳ ಆತ್ಮಹತ್ಯೆ ವಿವಾದ ದಿನದಿಂದ ದಿನದಕ್ಕೆ ತಾರಕಕ್ಕೇರಿತ್ತಿದೆ. ಸಚಿವ ಪ್ರಿಯಾಂಕ್​ ಖರ್ಗೆ ಆಪ್ತನ ಬೆದರಿಕೆಯಿಂದ ಡೆತ್​ನೋಟ್​ ಹರಿಬಿಟ್ಟು, ಸಚಿನ್​ ರೈಲಿಗೆ ತಲೆಕೊಟ್ಟಿದ್ದ.. ಗುತ್ತಿಗೆದಾರನ ಆತ್ಮಹತ್ಯೆ ಹಿಂದೆ ಸಚಿವರ ಹೆಸರು ಕೇಳಿ ಬರ್ತಿದ್ದಂತೆ, ಇದನ್ನೇ ಅಸ್ತ್ರ ಮಾಡಿಕೊಂಡ ಬಿಜೆಪಿ ಸಚಿವ ಪ್ರಿಯಾಂಕ್​ ಖರ್ಗೆ ರಾಜೀನಾಮೆಗೆ ಪಟ್ಟು ಹಿಡಿದೆ.

Share This Article