ಸಾರ್ವಜನಿಕ ಸ್ಥಳದಲ್ಲಿ ತನ್ನ ಮಗುವಿಗೆ ಎದೆ ಹಾಲು ಉಣಿಸುತ್ತಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ಸ್ತನ ಮುಚ್ಚಿಕೋ ಎಂದಿದ್ದಾನೆ. ಆಗ ಆಕೆ ಮುಖ ಮುಚ್ಚಿಕೊಂಡಿದ್ದಾರೆ…!
ಈ ಘಟನೆ ನಡೆದಿರುವುದು ಮೆಕ್ಸಿಕೋದ ಕ್ಯಾಬೋ ಸನ್ ಲುಕಾಸ್ ನಲ್ಲಿ. ಮೆಲಾನಿ ಡ್ಯೂಡ್ಲಿ ಎಂಬಾಕೆ ತನ್ನ ನಾಲ್ಕು ತಿಂಗಳ ಮಗುವಿಗೆ ಎದೆ ಹಾಲು ಉಣಿಸುತ್ತಿದ್ದರು.ಆಗ ಅಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಸ್ತನ ಮುಚ್ಚಿಕೋ ಎಂದು ಸಲಹೆ ನೀಡಿದ್ದಾನೆ.
ಅವನ ಮಾತಿಗೆ ಪ್ರತಿಕ್ರಿಯಿಸದೇ ಮೆಲಾನಿ ಸ್ತನ ಮುಚ್ಚಿಕೊಳ್ಳುವ ಬದಲು ತನ್ನ ಮುಖವನ್ನು ಮುಚ್ಚಿಕೊಂಡಿದ್ದಾರೆ…! ಈ ವೇಳೆ ಮೆಲಾನಿ ಜೊತೆಗಿದ್ದ ವ್ಯಕ್ತಿಯೊಬ್ಬ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ…!
https://www.facebook.com/carol.lockwood.58/posts/10215738847931572
ನನ್ನ ಸ್ನೇಹಿತನ ಸೊಸೆ ತನ್ನ ಮಗುವಿಗೆ ಸ್ತನಪಾನ ಮಾಡಿಸುತ್ತಿದ್ದರು. ಆಗ ಅಲ್ಲಿದ್ದ ವ್ಯಕ್ತಿಯೊಬ್ಬ ಆಕೆಗೆ ತನ್ನ ಸ್ತನವನ್ನು ಮುಚ್ಚಿಕೊಳ್ಳುವಂತೆ ಸಲಹೆ ನೀಡಿದ್ದನು. ಆ ವ್ಯಕ್ತಿಯ ಮಾತಿಗೆ ಮೆಲಾನಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಅವರನ್ನು ಎಂದಿಗೂ ಭೇಟಿ ಆಗಿಲ್ಲ. ಆದರೆ ಅವರು ಅದ್ಭುತ ಎಂದು ನನಗೆ ಅನಿಸುತ್ತಿದೆ ಎಂದು ಮೆಲಾನಿ ಕುಟುಂಬದ ಆಪ್ತ ಕಾರೋಲ್ ಲಾಕ್‍ವುಡ್ ಫೋಟೋ ಹಾಕಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಾನು ರಜೆ ಕಳೆಯಲು ನನ್ನ ಇಡೀ ಕುಟುಂಬದ ಜೊತೆ ಕ್ಯಾಬೋ ಸನ್ ಲುಕಾಸ್ ಗೆ ಹೋಗಿದ್ದೇವು. ಆಗ ಅಲ್ಲಿದ್ದ ವ್ಯಕ್ತಿಯೊಬ್ಬ ನನ್ನ ಸ್ತನ ಮುಚ್ಚಿಕೋ ಎಂದು ಸಲಹೆ ನೀಡಿದ್ದನು. ಆಗ ನಾನು ನನ್ನ ದುಪಟ್ಟಾದಿಂದ ನನ್ನ ಮುಖವನ್ನು ಮುಚ್ಚಿಕೊಂಡೆ. ಆದರೆ ರೆಸ್ಟೋರೆಂಟ್‍ನಲ್ಲಿ ನಾವು ಹಿಂದಿನ ಸೀಟ್‍ನಲ್ಲಿ ಕುಳಿತ್ತಿದ್ದೇವು ಎಂದು ಮೆಲಾನಿ ತಿಳಿಸಿದ್ದಾರೆ.
