Video : ಗಳಗಳನೆ ಅತ್ತ ಕ್ರಿಸ್ ಗೇಲ್!

admin
1 Min Read

ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರು ಅಳುವುದನ್ನು ಬಹುಶಃ ಯಾರೂ ನೋಡಿರೋದಿಲ್ಲ ಎನಿಸುತ್ತದೆ. ಕ್ರೀಡಾಂಗಣದಲ್ಲಿ ಆಗಾಗ ಕೀಟಲೆಗಳನ್ನು ಮಾಡುತ್ತಾ ತಾನಾಯ್ತು ತನ್ನ ಆಟವಾಯ್ತು ಎಂಬ ಗುಣವುಳ್ಳ ಕ್ರಿಸ್ ಗೇಲ್ ನಿನ್ನೆ ವಿಶ್ವ ತಾಯಂದಿರ ದಿನದಂದು ಗಳಗಳನೆ ಅತ್ತಿದ್ದಾರೆ.

 

ಕ್ರಿಸ್ ಗೇಲ್ ಅವರು ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಗೇಲ್ ತಮ್ಮ ತಾಯಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ತಾಯಂದಿರ ದಿನದಂದು ತಮ್ಮ ತಾಯಿ ಇಲ್ಲದ್ದನ್ನು ನೆನೆದು ಕ್ರಿಸ್ ಗೇಲ್ ಗಳಗಳನೆ ಅತ್ತಿದ್ದಾರೆ. ಹೀಗೆ ತಾಯಿಯನ್ನು ನೆನೆದು ಹಾಡೊಂದನ್ನು ಹಾಡುತ್ತಾ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ತಾಯಿ ಇಲ್ಲದ ನೋವನ್ನು ಕ್ರಿಸ್ ಗೇಲ್ ಹಂಚಿಕೊಂಡಿದ್ದಾರೆ.

 

 

ಅಮ್ಮಾ ನಿನ್ನ ಬಗ್ಗೆ ನನಗೆ ತುಂಬಾ ಹೆಮ್ಮೆ ಎನಿಸುತ್ತದೆ, ನೀನು ಇಷ್ಟ ಪಟ್ಟ ಹಾಗೆ ನಾನು ಗರ್ವದಿಂದ ಬದುಕುತ್ತೇನೆ, ನೀನು ಹೋಗುವ ಮುನ್ನ ನನಗೆ ಸಾಕಷ್ಟು ವಿಷಯಗಳನ್ನ ಹೇಳಬೇಕು ಎಂದುಕೊಂಡಿದ್ದೆ ಆದರೆ ಅದು ಸಾಧ್ಯವಾಗಲಿಲ್ಲ,  ನೀನು ನನ್ನ ಗೆಲುವನ್ನು & ಯಶಸ್ಸನ್ನು ನೋಡುತ್ತಾ ನನ್ನ ಬಗ್ಗೆ ಹೆಮ್ಮೆ ಪಡುತ್ತಿರುತ್ತೀಯಾ ಎಂದು ನನಗೆ ಗೊತ್ತು ನಾನು ನಿನ್ನ ತುಂಬ ಪ್ರೀತಿಸುತ್ತೇನೆ, ಅಮ್ಮ ನಿನಗೆ ವಿಶ್ವ ತಾಯಂದಿರ ದಿನದ ಶುಭಾಶಯಗಳು ಎಂದು ಕ್ರಿಸ್ ಗೇಲ್ ಭಾವುಕರಾಗಿ ಬರೆದುಕೊಂಡಿದ್ದಾರೆ.

 

 

Share This Article
Leave a Comment