ಅಂಗವೈಕಲ್ಯಕ್ಕೆ ಸೆಡ್ಡು ಹೊಡೆದು ಐಎಎಸ್ ಅಧಿಕಾರಯಾದ್ರು!

Date:

ಉಮ್ಮುಲ್ ಖೇರ್. ಅಂಗವೈಕಲ್ಯವನ್ನೂ ಮೀರಿ ಐಎಎಸ್ ಪರೀಕ್ಷೆಯಲ್ಲಿ ಮಹತ್ತರ ಸಾಧನೆ ಮಾಡಿ, ಈಗ ನವದಹೆಲಿಯಲ್ಲಿ ದೊಡ್ಡ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ಬಾಲ್ಯ ಮತ್ತು ಬದುಕಿನ ಬಗ್ಗೆ ಹೇಳಬೇಕೆಂದರೆ, ಉಮ್ಮುಲ್ ಖೇರ್ ಅವರದು ಮೂಲತಃ ರಾಜಸ್ಥಾನ ಮೂಲದ ಕುಟುಂಬ. ಉಮ್ಮುಲ್ 5ನೇ ತರಗತಿಯಲ್ಲಿ ಇರುವಾಗಲೇ ಇವರ ಕುಟುಂಬ ದಿಲ್ಲಿಗೆ ಬಂದಿತ್ತು. ಇವರ ತಂದೆ ಬಟ್ಟೆ ಮಾರಾಟಗಾರರಾಗಿದ್ದರು.
ಉಮ್ಮುಲ್ ಮೊದಲು ಅವರು ಕುಟುಂಬದ ಜೊತೆ ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣ ಸಮೀಪದ ಕೊಳಗೇರಿಯಲ್ಲಿ ವಾಸಿಸುತ್ತಿದ್ದರು. ಮಗುವಾಗಿದ್ದಾಗ, ಇವರು ದುರ್ಬಲ ಮೂಳೆಗೆ ಸಂಬಂಧಿಸಿದ ಅಸ್ವಸ್ಥತೆಯನ್ನು ಹೊಂದಿದ್ದರು. ಈ ರೋಗದಿಂದಾಗಿ ಅವರು 16 ಮೂಳೆಗಳು ಮುರಿತಕ್ಕೊಳಗಾದವು. ಅಷ್ಟೇಅಲ್ಲ, ಎಂಟು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.


ಉಮ್ಮುಲ್ ಅವರು ತನ್ನ ಆರೋಗ್ಯ ಸಮಸ್ಯೆಯ ಹೊರತಾಗಿಯೂ ಎಂಟನೇ ತರಗತಿ ನಂತರವೂ ಕಲಿಯ ಬಯಸಿದಾಗ ಅವರ ಬಡ ಪೋಷಕರು ನಿರಾಕರಿಸಿದರು. 5ನೇ ತರಗತಿಯಿಂದ 8ನೇ ತರಗತಿ ತನಕ ಅಮರ್ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮೂಲಕ ಉಮ್ಮುಲ್ .
ಶಿಕ್ಷಣ ಪಡೆದ್ರು. ಮುಂದೆ ಸ್ಕಾಲರ್ ಶಿಪ್ ದೊರೆತ ಕಾರಣ ಶಿಕ್ಷಣ ಮುಂದುವರಿಸಲು ನಿರ್ಧರಿಸಿದಳಾದರೂ ಹೆತ್ತರು ವಿರೋಧಿಸಿದ್ರು. ಹೀಗಾಗಿ ಬೇರೆ ದಾರಿ ಇಲ್ಲದೇ ದೆಹಲಿಯ ತ್ರಿಲೋಕಪುರಿಯ ಜೋಪಡಿಯಲ್ಲಿ ಒಬ್ಬಳೇ ವಾಸಿಸುತ್ತ, ನೆರೆಹೊರೆಯ ಮಕ್ಕಳಿಗೆ ಮನೆ ಪಾಠ ಹೇಳಿಕೊಟ್ಟು ಉಮ್ಮುಲ್ ತನ್ನ ಹೈಸ್ಕೂಲ್ ಶಿಕ್ಷಣವನ್ನು ಮುಂದುವರೆಸಿದ್ರು.


ಹೀಗೆ ಕಠಿಣ ಪರಿಶ್ರಮ ಮತ್ತು ಧೃಡ ನಿರ್ಣಯದಿಂದ, ಅವರು ದೆಹಲಿ ವಿಶ್ವವಿದ್ಯಾಲಯದ ಗಾರ್ಗಿ ಕಾಲೇಜಿಗೆ ಪ್ರವೇಶ ಪಡೆದರು. ನಂತರ ಜೆಎನ್ ಯುನಲ್ಲಿ ಮಾಸ್ಟರ್ ಡಿಗ್ರಿ ಪಡೆದ್ರು. ಆಮೇಲೆ ಅಂದರೆ 2016ರಲ್ಲಿ ತನ್ನ ಮೊದಲ ಪ್ರಯತ್ನದಲ್ಲೇ ಸಿವಿಎಲ್ ಸರ್ವೀಸಸ್ ಪರೀಕ್ಷೆಯನ್ನು ಪಾಸು ಮಾಡಿದ್ರು. ಅದರಲ್ಲೂ 420ನೇ ಶ್ರೇಯಾಂಕದೊಂದಿಗೆ ಸಾಧಕರ ಸ್ಥಾನದಲ್ಲಿ ಸ್ಥಾನ ಪಡೆದ್ರು.ಅದೇನೆ ಇರಲಿ. ಜೀವನದಲ್ಲಿ ಬಂದಂತಹ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತ ಉಮ್ಮುರ್ ಖೇರ್ ಎಲ್ಲರಿಗೂ ಮಾದರಿಯಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ನಿಮ್ಮದು ಲೂಟಿ ಮಾಡುವ ಚಪಲ, ನನ್ನದು ಜನರ ಜೊತೆ ನಿಲ್ಲುವ ಚಪಲ: ಹೆಚ್.ಡಿ.ಕುಮಾರಸ್ವಾಮಿ ಟಾಂಗ್

ನಿಮ್ಮದು ಲೂಟಿ ಮಾಡುವ ಚಪಲ, ನನ್ನದು ಜನರ ಜೊತೆ ನಿಲ್ಲುವ ಚಪಲ:...

ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ಕುತಂತ್ರ ನಡೆಸಿದ ಸಿಎಂ: ಬಿ.ವೈ.ವಿಜಯೇಂದ್ರ ವಾಗ್ದಾಳಿ

ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ಕುತಂತ್ರ ನಡೆಸಿದ ಸಿಎಂ: ಬಿ.ವೈ.ವಿಜಯೇಂದ್ರ ವಾಗ್ದಾಳಿ ಬೆಳಗಾವಿ:...

ಮತ್ತೊಮ್ಮೆ ಹದಗೆಟ್ಟ ಬೆಂಗಳೂರಿನ ಗಾಳಿ: ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕರ ಹಂತದಲ್ಲೇ

ಮತ್ತೊಮ್ಮೆ ಹದಗೆಟ್ಟ ಬೆಂಗಳೂರಿನ ಗಾಳಿ: ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕರ ಹಂತದಲ್ಲೇ ಬೆಂಗಳೂರು:...

ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ

ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ ಬೆಂಗಳೂರು:...