ಬೆಂಗಳೂರು: ನಮ್ಮ ಮೆಟ್ರೋ ಸ್ಟೇಷನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್- 2 ರೀತಿ ಕಂಗೊಳಿಸಲಿದೆ̤. ದೇಶದಲ್ಲೇ ನಮ್ಮ ಮೆಟ್ರೋ ವಿಶೇಷ ರೀತಿಯಲ್ಲಿ ಕಂಗೊಳಿಸೋದಕ್ಕೆ ಸಿದ್ದವಾಗ್ತಿದೆ. ಹೌದು ಸಂಪೂರ್ಣ ಬಿದಿರಿನ ಅಲಂಕಾರ ದ ಮೆಟ್ರೋ ರೈಲು ನಿಲ್ದಾಣ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ. ಬಂಬೂ ಸೊಸೈಟಿ ಆಫ್ ಇಂಡಿಯಾ ಬೆಂಗಳೂರಿನ ಬಂಬೂ ಬಜಾರ್ ಮೆಟ್ರೋ ನಿಲ್ದಾಣವನ್ನು ಬಿದಿರಿನ ಅಲಂಕಾರದೊಂದಿಗೆ ವಿನ್ಯಾಸಗೊಳಿಸುವ ಪ್ರಸ್ತಾವನೆಯನ್ನು ಬಿಎಂಆರ್‌ಸಿಎಲ್ ಆಡಳಿತದ ಮುಂದಿಟ್ಟಿದೆ.
ಈ ರೀತಿ ಬಂಬೂ ಥೀಮ್ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡುವಾಗ, ಮೆಟ್ರೋ ರೈಲುಗಳು ಮತ್ತು ನಿಲ್ದಾಣಗಳ ಉದ್ದಕ್ಕೂ ಹಸಿರನ್ನು ಹೆಚ್ಚಿಸಲು ಸ್ಥಳೀಯ ಮತ್ತು ಭಾರತೀಯ ಬಿದಿರನ್ನು ಬಳಸಲಾಗುತ್ತದೆ. ತ್ರಿಪುರಾದ ಬಂಬುಸಾ ತುಲ್ಡಾ ಮರವನ್ನು ನಿಲ್ದಾಣದ ನಿರ್ಮಾಣಕ್ಕೆ ಭೂದೃಶ್ಯ, ತೆರೆದ ಪ್ರದೇಶಗಳು ಮತ್ತು ಕರಕುಶಲ ವಸ್ತುಗಳನ್ನು ಅಲಂಕಾರಕ್ಕೆ ಬಳಸಲಾಗುವುದು ಎಂದು ಬಿಎಸ್‌ಐನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಕೆ.ಎನ್.ಮೂರ್ತಿ ತಿಳಿಸಿದ್ದಾರೆ.