ಕೃಷ್ಣೆಕ್ಯರಾದ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀ ಕಳೆದ ಬಾರಿ ಹರ್ನಿಯಾ ಆಪರೇಷನ್ನಿಗೆ ಒಳಗಾಗಿದ್ದಾಗ ತಮ್ಮ ಕೊನೆಯಾಸೆ ಹೇಳಿಕೊಂಡಿದ್ದರು. ಬೆ0ಗಳೂರಿನ ವಿದ್ಯಾಪೀಠದಲ್ಲಿ ಅಂತಿಮ ವಿಧಿ ವಿಧಾನ ನಡೆಸಬೇಕು ಎಂದು ಬರೆದು ಕಿರಿಯ ಶ್ರೀಗಳಿಗೆ ಆಗಾಗ ಅದನ್ನು ತೋರಿಸುತ್ತಿದ್ದರು. ಅಲ್ಲದೆ ಬೃಂದಾವನ ಮಾಡಬೇಕಾದ ಜಾಗವನ್ನು ಕೂಡ ಸೂಚಿಸಿದ್ದರು ಎಂದು ಶಾಸಕ ರಘುಭಟ್ ತಿಳಿಸಿದ್ದಾರೆ.
ಅಂತೆಯೇ ಡಿಸೆಂಬರ್ 20ರಿಂದ ಮಣಿಪಾಲ ಕೆ ಎಂ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಅಂತಿಮ ಕ್ಷಣಗಳನ್ನು ಮಠದಲ್ಲೇ ಕಳೆಯಬೇಕೆಂಬ ಅವರ ಆಸೆಯಂತೆ ಭಾನುವಾರ ಬೆಳಗ್ಗೆ ವೆಂಟಿಲೇಟರ್ ಸಹಿತ ಅವರನ್ನು ಅಧೋಕ್ಷಜ ಮಠಕ್ಕೆ ಸ್ಥಳಾಂತರ ಮಾಡಲಾಗಿತ್ತು. ಶ್ರೀಮಠಕ್ಕೆ ಆಗಮಿಸಿದ ಕೆಲ ಹೊತ್ತಲ್ಲೇ ಶ್ರೀಗಳು ಹರಿಚರಣ ಸೇರಿದರು. ಬಳಿಕ ಬೆಂಗಳೂರಿನ ವಿದ್ಯಾಪೀಠದಲ್ಲಿ ಹಿಂದೂ ಮಾಧ್ವ ಸಂಪ್ರದಾಯದ0ತೆ ಯತಿ ಶ್ರೇಷ್ಠರನ್ನು ಬೃಂದಾವನಸ್ತಗೊಳಿಸಲಾಯಿತು. 7ನೇ ವರ್ಷಕ್ಕೆ ಸನ್ಯಾಸ ಸ್ವೀಕರಿಸಿದ ಶ್ರೀಗಳು ಜಾತಿ,, ಮತ, ಪಂಥಗಳ ಎಲ್ಲೆ ಮೀರಿದ ಸಂತ. ಅವರ ಅಗಲಿಕೆಯಿಂದ ಇಡೀ ನಾಡು ಅನಾಥವಾಗಿದೆ ಎಂದರೆ ತಪ್ಪಾಗಲಾರದು.
ಅಂದು ಆಪರೇಷನ್ ವೇಳೆ ವಿಶ್ವೇಶ ತೀರ್ಥರು ಕಿರಿಯ ಶ್ರೀಗಳಲ್ಲಿ ಹೇಳಿಕೊಂಡಿದ್ದೇನು?
Date: