ಅಂದು ರಾತ್ರಿ ಭವ್ಯಾ, ತ್ರಿವಿಕ್ರಮ್ ನಡುವೆ ಅದು ನಡೆದದ್ದು ನಿಜಾನಾ!? ಸಂಭಾಷಣೆಯಲ್ಲಿ ಏನಿತ್ತು?

Date:

ಅಂದು ರಾತ್ರಿ ಭವ್ಯಾ, ತ್ರಿವಿಕ್ರಮ್ ನಡುವೆ ಅದು ನಡೆದದ್ದು ನಿಜಾನಾ!? ಸಂಭಾಷಣೆಯಲ್ಲಿ ಏನಿತ್ತು?

ಪ್ರತಿ ಬಿಗ್‌ಬಾಸ್‌ ಸೀಸನ್‌ನಲ್ಲೂ ಒಂದೊಂದು ಲವ್‌ ಸ್ಟೋರಿ ಇದ್ದೇ ಇರುತ್ತದೆ.. ಅದರಂತೆ ಸೀಸನ್‌ ೧೧ರಲ್ಲೂ ಒಂದು ಪ್ರೇಮಕಥೆ ಶುರುವಾಗಿದೆ.. ಅದು ಬೇರಾರೂ ಅಲ್ಲ ಭವ್ಯ ಗೌಡ ಹಾಗೂ ತ್ರಿವಿಕ್ರಮ್‌ ಲವ್‌ ಸ್ಟೋರಿ.. ಈ ಜೋಡಿ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ.

ʼಬಿಗ್‌ ಬಾಸ್‌ ಕನ್ನಡ 11ʼ ಮನೆಯಲ್ಲಿ ತ್ರಿವಿಕ್ರಮ್‌ ಅವರು ಭವ್ಯಾ ಗೌಡಗೆ ಪ್ರೇಮ ನಿವೇದನೆ ಮಾಡಿದ್ದಾರೆ ಅಂತ ಸಂದರ್ಶನವೊಂದರಲ್ಲಿ ಚೈತ್ರಾ ಕುಂದಾಪುರ ಅವರು ಹೇಳಿದ್ದರು. ಆದರೆ ತ್ರಿವಿಕ್ರಮ್‌ ಮಾತ್ರ ಭವ್ಯಾ ಗೌಡಗೆ ನಾನು ಪ್ರಪೋಸ್‌ ಮಾಡಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಅಂದು ರಾತ್ರಿ ಏನು ಸಂಭಾಷಣೆ ನಡೆಯಿತು ಎನ್ನೋದು ದೊಡ್ಡ ಪ್ರಶ್ನೆ ಆಗಿದೆ. ಇದಕ್ಕೆ ತ್ರಿವಿಕ್ರಮ್‌ ಉತ್ತರ ಏನು? ಇಲ್ಲಿದೆ ನೋಡಿ.

ಒಂದು ರಾತ್ರಿ ಎಲ್ಲರೂ ಮಲಗಿರುವಾಗ ಭವ್ಯಾ ಗೌಡ ಹಾಗೂ ತ್ರಿವಿಕ್ರಮ್‌ ಅವರು ಮಾತನಾಡಿದ್ದಾರೆ. ಆ ವೇಳೆ ತ್ರಿವಿಕ್ರಮ್‌ ಅವರು “ನಿನ್ನ ಉತ್ತರ ಏನು?” ಎಂದು ಪ್ರಶ್ನೆ ಮಾಡಿದ್ದರು. ಆಗ ಭವ್ಯಾ ಅವರು, “ಇಲ್ಲಿ ಬೇಡ, ಎರಡು ದಿನ ಟೈಮ್‌ ಕೊಡಿ. ನೀವು ಗೆದ್ದು ಬಂದು ಈ ಪ್ರಶ್ನೆ ಕೇಳಿದ್ರೆ ನಾನು ಹು ಹೇಳುತ್ತಿದ್ದೆನೋ ಏನೋ!” ಎಂದು ಹೇಳಿದ್ದರು. ಬಹುಶಃ ತ್ರಿವಿಕ್ರಮ್‌ ಅವರು ಭವ್ಯಾ ಗೌಡಗೆ ಪ್ರಪೋಸ್‌ ಮಾಡಿರುತ್ತಾರೆ. ಇದಕ್ಕೆ ಭವ್ಯಾ ಗೌಡ ಅವರು ಹೊರಗಡೆ ಉತ್ತರ ಕೊಡುತ್ತಾರೆ. ಇದನ್ನು ʼಬಿಗ್‌ ಬಾಸ್ʼ‌ ಪ್ರಸಾರ ಮಾಡಿಲ್ಲ. ಆದರೆ ಮುಂದುವರೆದ ಸಂಭಾಷಣೆಯನ್ನು ಪ್ರಸಾರ ಮಾಡಿದ್ದಾರೆ ಎಂದು ವೀಕ್ಷಕರು ಅಂದುಕೊಂಡಿದ್ದಾರೆ

ಅಂದು ರಾತ್ರಿ ಎಲ್ಲರೂ ನಿದ್ದೆ ಮಾಡುತ್ತಿದ್ದರು. ನಾವು ಮಾತನಾಡುತ್ತಿರೋದು ಬೇರೆಯವರಿಗೆ ತೊಂದರೆ ಆಗಬಾರದು ಅಂತ ಸಣ್ಣದಾಗಿ ಮಾತನಾಡಿದ್ದೆವು. ಪ್ರಪೋಸ್‌ ಮಾಡೋದಿದ್ರೆ ನಾನು ಬಚ್ಚಿಟ್ಟು ಹೇಳಬೇಕು ಅಂತಿರಲಿಲ್ಲ, ಇಡೀ ಮನೆಯವರ ಮುಂದೆ ಹೇಳುತ್ತಿದ್ದೆ. ನಾನು ಈ ವಿಷಯದಲ್ಲಿ ಹೆದರುವ ಅಗತ್ಯ ಇಲ್ಲ.‌ ಪ್ರಪೋಸ್‌ ಮಾಡೋದಿದ್ರೆ ಲೈಟ್‌ ಆಗಿ ಮಾಡುತ್ತಿರಲಿಲ್ಲ, ಇಡೀ ಮನೆಗೆ ಹೇಳಿಕೊಂಡು ಮಾಡ್ತಿದ್ದೆ, ಇಲ್ಯಾರೋ ಡಾಮಿನೇಟ್‌ ಮಾಡ್ತಾರೆ ಅಂತೆಲ್ಲ ನನಗೆ ಇರಲಿಲ್ಲ. ನನ್ನ ಅಪ್ಪ-ಅಮ್ಮ ಬಯ್ತಾರೆ ಅಂತನೂ ಇರಲಿಲ್ಲ. ನಾನು ಚಿಕನ್‌ ತಿನ್ನೋದು, ಸಿಗರೇಟ್‌ ಸೇದೋದು ಕೂಡ, ಕೆಟ್ಟ ಮಾತು ಹೇಳೋದನ್ನು ಕೂಡ ಮುಚ್ಚಿಟ್ಟಿಲ್ಲ. ನಾನು ಒಪನ್‌ ಆಗಿ ಮಾತಾಡುವ ವ್ಯಕ್ತಿ” ಎಂದು ತ್ರಿವಿಕ್ರಮ್‌ ಅವರು ಹೇಳಿದ್ದಾರೆ.

ಬೇರೆ ವಿಷಯಗಳ ಬಗ್ಗೆ ಮಾತನಾಡುವಾಗ ಬಂದಿರುವ ವಿಷಯ ಅಷ್ಟೇ. ಚೈತ್ರಾ ಕುಂದಾಪುರ ಅವರು ಏನು ಹೇಳಿದ್ದಾರೆ ಎನ್ನೋದನ್ನು ನಾನು ಅವರ ಹತ್ರ ಮಾತಾಡಿ ತಿಳಿದುಕೊಳ್ತೀನಿ. ನನಗೆ ಯಾವ ಗರ್ಲ್‌ಫ್ರೆಂಡ್‌ ಇಲ್ಲ. ಅನುಷಾ ಮನೆಯೊಳಗಡೆ ಬಂದಾಗ ನನ್ನ ಫ್ರೆಂಡ್ಸ್‌ ಬಗ್ಗೆ ಕೇಳಿದ್ದೆ, ನನ್ನ ಫ್ರೆಂಡ್ಸ್‌ ಮಚ್ಚು ಹಿಡ್ಕೊಂಡು ಕೂತಿದ್ದಾರೆ ಎಂದು ಅವಳು ಹೇಳಿದ್ದಾಳೆ. ಅನುಷಾ ತುಮಕೂರಿನವರು, ನನಗೆ ಅವಳು ಚಿಕ್ಕ ವಯಸ್ಸಿನಿಂದಲೂ ಗೊತ್ತಿದೆ” ಎಂದು ತ್ರಿವಿಕ್ರಮ್‌ ಹೇಳಿದ್ದಾರೆ.

ಭವ್ಯಾ ಗೌಡ ನನ್ನ ಜ್ಯೂನಿಯರ್.‌ ನನಗೂ, ಅವಳಿಗೂ ವಯಸ್ಸಿನ ಅಂತರ ಇದೆ, ನನಗಿಂತ ಅವಳು ಚಿಕ್ಕವಳು. ನಾನು ಭವ್ಯಾಳನ್ನು ಮದುವೆ ಆಗೋದಿಲ್ಲ. ಯಾರು ಏನೇ ಅಂದುಕೊಂಡ್ರೂ ಪರವಾಗಿಲ್ಲ. ನಾವಿಬ್ಬರೂ ಸ್ನೇಹಿತರು ಅಷ್ಟೇ” ಎಂದು ತ್ರಿವಿಕ್ರಮ್‌ ಅವರು ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ! ನವದೆಹಲಿ:- ದೇಶದಲ್ಲಿ ಪ್ರತಿ...

ಇಂಗ್ಲೀಷ್, ಹಿಂದಿ ಭಾಷೆಗಳ ದಾಳಿಯಿಂದ ಕನ್ನಡ‌‌ ಕಾಪಾಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್

ಇಂಗ್ಲೀಷ್, ಹಿಂದಿ ಭಾಷೆಗಳ ದಾಳಿಯಿಂದ ಕನ್ನಡ‌‌ ಕಾಪಾಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಇಡೀ...

ಆಂಧ್ರದ ಶ್ರೀಕಾಕುಳಂನಲ್ಲಿ ಕಾಲ್ತುಳಿತ: ದೇವರ ದರ್ಶನಕ್ಕೆ ಬಂದ 9 ಭಕ್ತಾದಿಗಳ ಸಾವು

ಆಂಧ್ರದ ಶ್ರೀಕಾಕುಳಂನಲ್ಲಿ ಕಾಲ್ತುಳಿತ: ದೇವರ ದರ್ಶನಕ್ಕೆ ಬಂದ 9 ಭಕ್ತಾದಿಗಳ ಸಾವು ಆಂಧ್ರಪ್ರದೇಶದ...

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಣ ಹವೆ! ಆದ್ರೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಣ ಹವೆ! ಆದ್ರೆ ಬೆಂಗಳೂರಿನಲ್ಲಿ ಮೋಡ ಕವಿದ...