ಮಂಡ್ಯ ರಾಜಕೀಯ ಅತಿರೇಕಕ್ಕೆ ಹೋಗುತ್ತಿದೆ ಎಂದು ಅನಿಸುತ್ತಿದೆ. ರಾಜಕೀಯ ಕೆಸರೆರೆಚಾಟ ತುಂಬಾ ಅಸಹ್ಯವಾಗುತ್ತಿದೆ.
ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಹೇಳುವ ಪ್ರಕಾರ ಅಂಬರೀಶ್ ಅವರ ಕುಟುಂಬದ ವಿರುದ್ಧ ಬಾಯಿಗೆ ಬಂದಂಗೆ, ಕೆಟ್ಟದಾಗಿ ಮಾತನಾಡಿದ್ರೆ ಫಾರಿನ್ ಟ್ರಿಪ್ ಆಫರ್ ನೀಡಿದ್ದಾರೆ. ಸೈಟ್ ಮಾಡಿ ಕೊಡ್ತೀವಿ ಎಂದು ಆಮಿಷ ಒಡ್ಡಿದ್ದಾರೆ. 10-15 ಲಕ್ಷ ರೂ ನಗದು ಕೊಡೋದಾಗಿ ತಮ್ಮವರಿಗೆ ತಿಳಿಸಿದ್ದಾರೆ ಎಂದು ಸುಮಲತಾ ಅಂಬರೀಶ್ ಗಂಭೀರ ಆರೋಪ ಮಾಡಿದ್ದಾರೆ. ಅಂಬಿ ಆಪ್ತರಿಗೇ ಜೆಡಿಎಸ್ ನವರು ಆಫರ್ ನೀಡಿದ್ದು ಎನ್ನುವುದು ಸುಮಲತಾ ಆರೋಪವಾಗಿದೆ. ಸುಮಲತಾ ಅವರ ಮಾತಿಗೆ ಸಚಿವ ಸಿ.ಎಸ್ ಪುಟ್ಟರಾಜು ಅವರು ತಿರುಗೇಟು ಕೊಟ್ಟಿದ್ದಾರೆ. ಸುಮಲತಾ ಅವರು ಸುಳ್ ಹೇಳೋದನ್ನು ಬಿಡಲಿ ಎಂದಿದ್ದಾರೆ.
ಅಂಬರೀಶ್ ಕುಟುಂಬದ ವಿರುದ್ಧ ಮಾತನಾಡಿದ್ರೆ ಫಾರಿನ್ ಟೂರ್ + 15 ಲಕ್ಷ..!
Date: