ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಸುಮಲತಾ ಅಂಬರೀಶ್ ಅವರ ಪರವಾಗಿ ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಖ್ಯಾತಿಯ ನಟ ದರ್ಶನ್, ರಾಕಿಂಗ್ ಸ್ಟಾರ್, ರಾಕೀಭಾಯ್ ಖ್ಯಾತಿಯ ನಟ ಯಶ್ ಪ್ರಚಾರ ಮಾಡುತ್ತಿದ್ದಾರೆ.
ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿರುವ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ಇಡೀ ಸರ್ಕಾರವೇ ಪಣತೊಟ್ಟಂತಿದೆ. ಅವರಿಗೆ ಅದು ಪ್ರತಿಷ್ಠೆಯ ಕಣವಾಗಿದೆ.
ನಿನ್ನೆ ಸಂಸದ ಶಿವರಾಮೇಗೌಡ ಸುಮಲತಾ ಅವರನ್ನು ಜಯಲಲಿತಾಗಿಂತಾ ಮಾಯಾಂಗನೆ ಎಂದಿದ್ದರು. ಅದರ ಬಗ್ಗೆ ಯಶ್ ಇವತ್ತು ಖಡಕ್ ಆಗಿ ಉತ್ತರ ನೀಡಿದ್ದಾರೆ. ಅಂಬರೀಶ್ ಅಣ್ಣ ಇರುವಾಗ ಇವರಿಗೆಲ್ಲಾ ಬೆರಳು ತೋರಿಸುವ ತಾಕತ್ತು ಇರಲಿಲ್ಲ. ಇವತ್ತು ಅವರಿಲ್ಲ ಅಂತ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ಮಾತನಾಡಿದರೆ ನಾವು ಅದನ್ನು ತಡೆದುಕೊಳ್ಳುವುದಿಲ್ಲ. ಹೇಳೋರಿಲ್ಲ. ಕೇಳೋರಿಲ್ಲ ಎಂದು ಕೊಳ್ಳಬೇಡಿ. ನಾವೆಲ್ಲಾ ಇದ್ದೀವಿ ಸುಮ್ಮನೇ ಇರಲ್ಲ ಎಂದು ಛಾಟಿ ಬೀಸಿದರು. ಮಂಡ್ಯದ ಜನ ದಡ್ಡರಲ್ಲ, ಸ್ವಾಭಿಮಾನಿಗಳು. ಇದಕ್ಕೆ ಉತ್ತರ ಕೊಡುತ್ತಾರೆ. ದುರಂಹಕಾರವನ್ನು ಇಳಿಸುತ್ತಾರೆ ಎಂದರು.
ಅಂಬರೀಶ್ ಇದ್ದಿದ್ರೆ ಬೆರಳು ತೋರಿಸೋಕೆ ತಾಕತ್ತಿಲ್ಲದವರು ಇವತ್ತು ಮಾತಾಡ್ತಾರೆ ಎಂದ ಯಶ್,,!
Date: