ಅಂಬರೀಷ್ ಅಭಿಮಾನಿಗಳ ಮೇಲೆ ಕುಮಾರಣ್ಣನಿಗೆ ಕೋಪ..! ಅಂಬಿ ಅಭಿಮಾನಿಗಳಿಗೆ ಸಿ ಎಂ ಏನಂದ್ರು ಗೊತ್ತಾ..?

Date:

‘ಅಂಬರೀಶ್ ಅವರಿಗೆ ನನ್ನ ಹೃದಯದಲ್ಲಿ ಅಣ್ಣನ ಸ್ಥಾನ ನೀಡಿದ್ದೇನೆ. ಆ ಪ್ರೀತಿ, ವಾತ್ಸಲ್ಯ ದೊಡ್ಡದು. ಇದನ್ನು ಅರ್ಥ ಮಾಡಿಕೊಳ್ಳದ ಅವರ ಅಭಿಮಾನಿಗಳು ನನ್ನ, ನಿಖಿಲ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇದು ನನಗೆ ತೀವ್ರ ನೋವು ಉಂಟು ಮಾಡಿದೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಗುರುವಾರ ಮಂಡ್ಯದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, ‘ಅಂಬರೀಶ್ ಮಗ ಅಭಿಷೇಕ್ ಬೇರೆಯಲ್ಲ. ನನ್ನ ಮಗ ನಿಖಿಲ್ ಬೇರೆಯಲ್ಲ. ಅಂಬರೀಶ್ ಅಭಿಮಾನಿಗಳ ಮಾತನಾಡುವ ಮುನ್ನ ಅಂಬರೀಶ್ ಆತ್ಮ ಏನು ಹೇಳುತ್ತದೆ ಎನ್ನುವುದನ್ನು ಯೋಚಿಸಲಿ’ ಎಂದರು. ‘ಅಂಬರೀಶ್ ಅವರು ವಿಧಿವಶರಾದಾಗ ಅವರ ಮಗ ಫೋನ್ ಮಾಡಿ ಆಸ್ಪತ್ರೆಗೆ ಬನ್ನಿ ಎಂದ ನಾನು ರಾತ್ರಿ 12 ಗಂಟೆಗೆ ಅಲ್ಲಿಗೆ ಹೋದೆ. 3 ಗಂಟೆಯ ತನಕ ಅಲ್ಲೇ ಇದ್ದೆ. ಅಂಬರೀಶ್ ಅವರು ಬಾಳಿ ಬದುಕಿದ ಜೆ.ಪಿ.ನಗರದ ಮನೆಯಲ್ಲಿ ಕೆಲಸಗಳು ನಡೆಯುತ್ತಿತ್ತು.

ಆದ್ದರಿಂದ ಪಾರ್ಥಿವ ಶರೀರ ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಎಂಬುದು ತೀರ್ಮಾನ ಆಗಿರಲಿಲ್ಲ’ ಎಂದು ತಿಳಿಸಿದರು. ನಮ್ಮ ಅಧಿಕಾರಿಗಳು 3 ಗಂಟೆಗೆ ಆಸ್ಪತ್ರೆಗೆ ಕರೆಸಿದೆ. ಜೆ.ಪಿ.ನಗರದ ಮನೆಯನ್ನು ಕ್ಲೀನ್ ಮಾಡಿಸಿ. ಪಾರ್ಥಿವ ಶರೀರವನ್ನು ಅಲ್ಲಿಗೆ ತೆಗೆದುಕೊಂಡು ಹೋಗಿ ಪೂಜಾ ಕಾರ್ಯಗಳನ್ನು ಮಾಡಲಿ ಎಂದು ಹೇಳಿದೆ. ಮುಖ್ಯಮಂತ್ರಿಯಾಗಿ ಆವತ್ತು ಅದು ನನ್ನ ಜವಾಬ್ದಾರಿಯಾಗಿತ್ತು’ ಎಂದು ಕುಮಾರಸ್ವಾಮಿ ಹೇಳಿದರು. ಅಂದು ಆಸ್ಪತ್ರೆಯಲ್ಲಿ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗುವುದು ಬೇಡ ಎಂದವರು ಇಂದು ಮಂಡ್ಯದ ಬಗ್ಗೆ, ಮಂಡ್ಯದ ಮಣ್ಣಿನ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಕುಮಾರಸ್ವಾಮಿ ದೂರಿದರು. ‘ನೀವು ಮಂಡ್ಯದ ಗಂಡನ್ನು ಅಂತಿಮವಾಗಿ ನೋಡಲು ಬಯಸಿದಿರಿ. ಅದಕ್ಕೂ ವ್ಯವಸ್ಥೆ ಮಾಡಿಕೊಟ್ಟೆ ಎಂದು ಹೇಳಿದ ಕುಮಾರಸ್ವಾಮಿ .

 

Share post:

Subscribe

spot_imgspot_img

Popular

More like this
Related

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ ಬೇಕು

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ...

World Cup 2025: ವಿಶ್ವ ಗೆದ್ದ ಭಾರತದ ವನಿತಾ ಪಡೆ..! ಇತಿಹಾಸ ಬರೆದ ಸಿಂಹಿಣಿಯರು

ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ 2025ರ...

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು: ರೌಡಿಗಳನ್ನು,...

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ! ಎಲ್ಲಿ ನಡೆಯಲಿದೆ?

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್...