ರೆಬಲ್ ಸ್ಟಾರ್ ಅಂಬರೀಶ್ ಅವರಿಲ್ಲದ ಅವರ ಜನ್ಮದಿನಕ್ಕೆ ಒಂದು ತಿಂಗಳು ಬಾಕಿ ಇದೆ. ಮೇ 29ಕ್ಕೆ ಅಂಬರೀಶ್ ಹುಟ್ಟುಹಬ್ಬ. ಅಂಬಿ ಹುಟ್ಟುಹಬ್ಬಕ್ಕೆ ಮಂಡ್ಯದ ಜನ 6 ದಿನ ಮೊದಲೇ ಗಿಫ್ಟ್ ಕೊಡಲಿದ್ದಾರೆಯೇ ಎನ್ನುವ ಕುತೂಹಲ ಮೂಡಿದೆ.
ಎಲ್ಲರಿಗೂ ಗೊತ್ತಿರುವಂತೆ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಅವರು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಅವರಿಗೆ ಪ್ರತಿಸ್ಪರ್ಧಿಯಾಗಿ ಸಿಎಂ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಇದ್ದಾರೆ.
ಇಂದು ಬಹಿರಂಗ ಪ್ರಚಾರದ ಕೊನೆಯ ದಿನವಾಗಿತ್ತು. ಸುಮಲತಾ ಬೃಹತ್ ಸಮಾವೇಶ ನಡೆಸಿದರು. ನಟರಾದ ದೊಡ್ಡಣ್ಣ, ದರ್ಶನ್, ಯಶ್ ಮತ್ತಿತರರು ಸಾಥ್ ನೀಡಿದ್ದರು.
ಸುಮಲತಾ ಪರ ಮತಯಾಚನೆ ಮಾಡಿದ ಯಶ್ ಅವರು ಕೊನೆಯಲ್ಲಿ ಮೇ 29ಕ್ಕೆ ನಿಮಗೆ ಗೊತ್ತೇ ಇದೆ ಅಂಬರೀಶಣ್ಣನ ಹುಟ್ಟುಹಬ್ಬ. ನಾವು ಮೇ 23ಕ್ಕೇ ಗಿಫ್ಟ್ ಕೊಡೋಣ. ನಾಡಿದ್ದು ಅದಕ್ಕಾಗಿ ಕೆಲಸ ಮಾಡಿ ಎಂದು ಏಪ್ರಿಲ್ 18ಕ್ಕೆ ಸುಮಲತಾ ಪರ ಮತ ಹಾಕುವಂತೆ ಹೇಳಿದರು.
ಮಂಡ್ಯ ಜನ ಅಂಬಿ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದು, ಸುಮಲತಾ ಅವರ ಕೈ ಹಿಡಿಯುತ್ತಾರಾ ಕಾದುನೋಡಬೇಕಿದೆ.
ಅಂಬಿ ಹುಟ್ಟುಹಬ್ಬಕ್ಕೆ 6 ದಿನ ಮೊದಲೇ ಮಂಡ್ಯ ಜನರಿಂದ ಭರ್ಜರಿ ಗಿಫ್ಟ್?
Date: