ಅಂಬೇಡ್ಕರ್ ಸಂವಿಧಾನ ತಿದ್ದುಪಡಿ ಮಾಡಿದ್ದು ಈ ನೀಚ ಕಾಂಗ್ರೆಸ್: ಮಾಜಿ ಶಾಸಕ ಅನ್ನದಾನಿ
ಬೆಂಗಳೂರು: ಅಂಬೇಡ್ಕರ್ ಸಂವಿಧಾನ ತಿದ್ದುಪಡಿ ಮಾಡಿದ್ದು ಈ ನೀಚ ಕಾಂಗ್ರೆಸ್ ಎಂದು ಜೆಡಿಎಸ್ ಎಸ್‌ಸಿ ಘಟಕದ ಅಧ್ಯಕ್ಷ ಮಾಜಿ ಶಾಸಕ ಅನ್ನದಾನಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್. ಅಂಬೇಡ್ಕರ್ ಸಂವಿಧಾನ ತಿದ್ದುಪಡಿ ಮಾಡಿದ್ದು ಈ ನೀಚ ಕಾಂಗ್ರೆಸ್. ಈ ದೇಶದಲ್ಲಿ ಸಂವಿಧಾನವನ್ನು ಅಪಮಾನ ಮಾಡಿರುವುದು ಕಾಂಗ್ರೆಸ್.
ದೇವೇಗೌಡರನ್ನ, ಅಡ್ವಾಣಿ, ಜೆಪಿ ಅವರನ್ನ ಜೈಲಿಗೆ ಹಾಕಿದ್ದೀರಿ. ಅಂಬೇಡ್ಕರ್ ಸಂವಿಧಾನ ಅಮಾನತು ಮಾಡಿ, ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಜಾರಿ ಮಾಡಿದರು. ಇದನ್ನ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ವಿರುದ್ದ ಆಕ್ರೋಶ ಹೊರಹಾಕಿದರು.
ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣವನ್ನು ಗ್ಯಾರಂಟಿಗೆ ಬಳಕೆ ಮಾಡಿಕೊಂಡಿದ್ದಾರೆ. ಇದನ್ನ ಕೇಳಿದರೆ ಭಂಡ ಮಾತು ಆಡುತ್ತೀರಿ. ಕಾಂಗ್ರೆಸ್‌ನವರು ಮಾನ ಮರ್ಯಾದೆ ಇಟ್ಟುಕೊಂಡು ಮಾತಾಡಬೇಕು. ಡಿಕೆಶಿ ಮನಸಿನಲ್ಲಿ ಇರೋದು ಬಾಯಲ್ಲಿ ಬಂದಿದೆ. ಅವರಿಗೆ ನಾಚಿಕೆ ಆಗಬೇಕು. ಕೂಡಲೇ ಹೇಳಿಕೆ ವಾಪಸ್ ತೆಗೆದುಕೊಂಡು ಕ್ಷಮೆ ಕೇಳಬೇಕು ಎಂದರು.