ಮಾನವ ಇಂದು ಇಡೀ ಜಗತ್ತಿನ ಮೇಲೆ ತಮ್ಮ ಹಕ್ಕು ಸ್ಥಾಪಿಸಿ ಮೆರೆಯುತ್ತಿದ್ದಾನೆ. ಕಂಡ ಕಂಡ ಪ್ರಾಣಿಗಳನ್ನು ಬೇಟೆಯಾಡಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಆತನ ದಾಳಿಯನ್ನು ಎದುರಿಸಿ ನಿಲ್ಲುವ ಮತ್ತೊಂದು ಜೀವಿ ಇಡೀ ಭೂಲೋಕದಲ್ಲೇ ಇಲ್ಲ. ಆದರೂ ಕೂಡಾ ಕೆಲವು ಪ್ರಾಣಿಗಳು ಮಾತ್ರ ಮಾನವನನ್ನು ಇನ್ನಿಲ್ಲದಂತೆ ಕಾಡುತ್ತಿವೆ. ಮಾನವನ ಜೀವಕ್ಕೆ ಮಾರಕವಾಗಿ ಪರಿಣಮಿಸಿವೆ. ಇಷ್ಟಕ್ಕೂ ಮಾನವನ ಶತ್ರುಗಳೆನಿಸಿದ ಹಾಗೂ ಮನುಷ್ಯನನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಬಲಿ ಪಡೆಯುತ್ತಿರುವ ಜೀವಿಗಳು ಯಾವುವು ಗೊತ್ತಾ ನೀವೇ ನೋಡಿ.
10. ಕರಡಿ
ಮನುಷ್ಯನನ್ನು ಎಲ್ಲಾ ಕರಡಿಗಳು ಕೊಲ್ಲುವುದಿಲ್ಲ. ಬದಲಿಗೆ 8 ಜಾತಿಯ ಕರಡಿಗಳು ಮಾತ್ರ ಕೊಲ್ಲುತ್ತಿವೆ. ಅದರಲ್ಲೂ ಶಕ್ತಿಶಾಲಿ ಕರಡಿಗಳ ದಾಳಿಗೆ ಸಿಲುಕುವ ಮಾನವ ಬದುಕುಳಿಯುವುದು ಕಷ್ಟದ ಸಂಗತಿ. ಕರಡಿಗಳು ಪ್ರತಿ ವರ್ಷ 10ರ ಸರಾಸರಿಯಲ್ಲಿ ಮನುಷ್ಯನನ್ನು ಕೊಲ್ಲುತ್ತಿದ್ದು, ಟಾಪ್ ಟೆನ್ ಪಟ್ಟಿಯಲ್ಲಿ ಹತ್ತನೇ ಸ್ಥಾನ ಪಡೆದಿವೆ.
9. ಶಾರ್ಕ್ ಗಳು
ಪ್ರತಿವರ್ಷ ಶಾರ್ಕ್ ಗಳು ಸುಮಾರು ಕನಿಷ್ಟ 75 ಜನರ ಮೇಲೆ ದಾಳಿ ಮಾಡುತ್ತವೆ. ಅದರಲ್ಲೂ ಬಹುತೇಕ ಎಲ್ಲಾ ದಾಳಿಗಳು ಭೀಕರ ಸ್ವರೂಪದ್ದಾಗಿರುತ್ತವೆ. ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಕ್ಯಾಲಿಫೋರ್ನಿಯಾ, ಅಲಾಸ್ಕಾ, ಅಮೆರಿಕಾ, ಹವಾಯಿ, ಮೆಡಿಟರೇನಿಯನ್ ಸಮುದ್ರ ತೀರ, ಜಪಾನ್, ಚೀನಾ, ರಷ್ಯಾಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಶಾಕರ್್ಗಳು ಮನುಷ್ಯನ ಮೇಲೆ ದಾಳಿ ಮಾಡುತ್ತಿವೆ. ಅಚ್ಚರಿ ಎಂದರೆ ಶಾರ್ಕ್ ಗಳು ದಾಳಿ ಮಾಡಿದರೆ ಬದುಕುಳಿಯುವುದು ಕಷ್ಟವಂತೆ..!
8. ಕಾಡು ಕೋಣ
ಕಾಡು ಕೋಣಗಳು ಅತ್ಯಂತ ಬಲಶಾಲಿ ಎಂಬ ಮಾತಿದೆ. ಅವು 1.5 ಟನ್ ಭಾರ, 1.7 ಮೀಟರ್ ಎತ್ತರ, 2.8 ಮೀಟರ್ ಉದ್ದವಿರುತ್ತವೆ. ಅದರಲ್ಲೂ ದಕ್ಷಿಣ ಆಫ್ರಿಕಾದಲ್ಲಿ ಕಾಡು ಕೋಣಗಳು ಮನುಷ್ಯನನ್ನು ಬಲಿ ಪಡೆದಷ್ಟು ಮತ್ತಿನ್ಯಾವುದೇ ಪ್ರಾಣಿಗಳು ಬಲಿ ಪಡೆಯುವುದಿಲ್ಲವಂತೆ. ಕಾಡು ಕೋಣಗಳ ಕೊಂಬು ಬಲಶಾಲಿಯಾಗಿದ್ದು, ಒಮ್ಮೆ ಗುದ್ದಿದರೆ ಎದ್ದು ಬರುವುದು ಕಷ್ಟ.
7. ಜೆಲ್ಲಿ ಫಿಶ್
ಪ್ರತಿವರ್ಷ ನೂರಾರು ಜನರು ಸಮುದ್ರದಲ್ಲಿ ಈಜಾಡುವಾಗ ಜೆಲ್ಲಿಫಿಶ್ ನ ದಾಳಿಯಿಂದಾಗಿ ಮೃತಪಡುತ್ತಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾದ ಜೆಲ್ಲಿಫಿಶ್ ಗಳು ಇಡೀ ವಿಶ್ವದಲ್ಲೇ ಅತಿ ಹೆಚ್ಚು ವಿಷಕಾರಿಯಾಗಿವೆ. ಇದರ ಬಾಲವು ಮನುಷ್ಯನ ದೇಹಕ್ಕೆ ತಾಗಿದರೆ ಸಾಕು ಆತ ಸಾವನ್ನಪ್ಪಿದಂತೆ..!
6. ಜಿಂಕೆ
ಅಚ್ಚರಿ ಎನಿಸಿದರೂ ಇದು ನಿಜ. ಮಾನವನನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಬಲಿ ಪಡೆಯುತ್ತಿರುವ ಪ್ರಾಣಿಗಳಲ್ಲಿ ಜಿಂಕೆಗೆ ಆರನೇ ಸ್ಥಾನ..! ವಾಹನಗಳು ರಸ್ತೆಯಲ್ಲಿ ರಸ್ತೆಯ ಮೇಲೆ ಚಲಿಸುತ್ತಿರುವಾಗ ಇದ್ದಕ್ಕಿದ್ದಂತೆ ರಸ್ತೆ ದಾಟಲು ಹೋಗುವ ಜಿಂಕೆಗಳು ವಾಹನ ಸವಾರನಿಗೆ ಮುಂದೇನು ಮಾಡುವುದು ಎಂಬುದನ್ನು ಗೊತ್ತಾಗದಂತೆ ಮಾಡುತ್ತವೆ. ಆದ್ದರಿಂದ ವಾಹನಗಳು ಅಪಘಾತಕ್ಕೀಡಾಗುತ್ತವೆ. ಪ್ರತಿ ವರ್ಷ ಜಿಂಕೆಗಳ ಉಪಟಳದಿಂದ ಸುಮಾರು 120ಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ..!
5. ಹಿಪ್ಪೋಪೊಟಮಸ್
ಒಮ್ಮೊಮ್ಮೆ ಮೂರು ಟನ್ ಗಳಷ್ಟು ತೂಗುವ ಹಿಪ್ಪೋಪೊಟಮಸ್ ಗಳು ಪ್ರತಿ ವರ್ಷ 2900ಕ್ಕೂ ಹೆಚ್ಚು ಜನರನ್ನು ಬಲಿ ಪಡೆಯುತ್ತಿವೆ. ವಿಶೇಷವೆಂದರೆ ಇವು ಮನುಷ್ಯನನ್ನು ಆಹಾರದ ಉದ್ದೇಶದಿಂದ ಕೊಲ್ಲುವುದಿಲ್ಲ. ಬದಲಿಗೆ ಅವಗಳಿ ಉಪಟಳ ನೀಡಿದರೆ ದಾಳಿ ಮಾಡುತ್ತವೆ. ಅದರಲ್ಲೂ ಹಿಪ್ಪೋಪೊಟಮಸ್ ಗಳು ಸಸ್ಯಾಹಾರಿಗಳು..!
4. ಮೊಸಳೆ
ಈ ಜೀವಿಯನ್ನು ನೋಡಿದ ಕೂಡಲೇ ಮೈಯೆಲ್ಲಾ ಜುಮ್ ಎನಿಸುತ್ತದೆ. ಅದರ ದೇಹ ಸ್ವರೂಪವೇ ಅದಕ್ಕೆ ಕಾರಣ. ಆಸ್ಟ್ರೇಲಿಯಾದಲ್ಲಿ 18 ಫೀಟ್ ಗಳಷ್ಟು ಉದ್ದವಿರುವ ಮೊಸಳೆಗಳಿವೆಯಂತೆ.
ಫಿಲಿಪ್ಪಿನ್ಸ್ ನಲ್ಲಿ ಸುಮಾರು 20 ಫೀಟ್ ಉದ್ದದ ಮೊಸಳೆ ಇದ್ದುದು ದೊಡ್ಡ ದಾಖಲೆ. ಮೊಸಳೆಗೆ ನೀರನ್ನರಸಿಕೊಂಡು ಬರುವ ಪ್ರಾಣಿಗಳೆ ಆಹಾರ. ಇನ್ನು ಮನುಷ್ಯನ ವಿಚಾರಕ್ಕೆ ಬಂದರೆ ಪ್ರತಿ ವರ್ಷ ಸುಮಾರು 1000ಕ್ಕೂ ಹೆಚ್ಚು ಜನ ಮೊಸಳೆಯ ದಾಳಿಗೊಳಗಾಗಿ ಸಾವನ್ನಪ್ಪುತ್ತಿದ್ದಾರೆ. ಮೀನುಗಾರರೇ ಅತಿ ಹೆಚ್ಚು ಸಂಖ್ಯೆಯಲ್ಲಿ ಸಾವನ್ನಪ್ಪುತಿದ್ದಾರೆ.
3. ಚೇಳು
ವಿಭಿನ್ನ ದೇಹಾಕೃತಿ ಹೊಂದಿರುವ ಚೇಳುಗಳು ಇಡೀ ಜಗತ್ತಿನಾದ್ಯಂತ ಕಾಣಸಿಗುತ್ತವೆ. ಅಲ್ಲದೇ ಭೂಮಿಯ ಮೇಲೆ ಇವುಗಳು ಸಾವಿರಾರು ವರ್ಷಗಳಿಂದ ವಾಸ ಇವೆ. ಅಲ್ಲದೇ ಜಗತ್ತಿನಲ್ಲಿ ಸುಮಾರು 1,300ರಿಂದ 2000 ವಿಧದ ಚೇಳುಗಳಿವೆ. ಆದರೆ ಅವುಗಳಲ್ಲಿ ಕೇವಲ 25 ವಿಧದ ಚೇಳುಗಳಲ್ಲಿ ಮಾತ್ರ ವಿಷದ ಅಂಶವಿದೆ. ಆ 25 ವಿಧದ ಚೇಳುಗಳೇ ಪ್ರತಿ ವರ್ಷ 1,000ದಿಂದ 5,000 ಮನುಷ್ಯರನ್ನು ಬಲಿ ಪಡೆಯುತ್ತಿದ್ದು, ಮಾನವನನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಬಲಿ ಪಡೆಯುತ್ತಿರುವ ಜೀವಿಗಳಲ್ಲಿ ಮೂರನೇ ಸ್ಥಾನ ಪಡೆದಿವೆ.
2. ಹಾವು
ವಿಶ್ವದ ಎಲ್ಲೆಡೆ ಕಾಣ ಸಿಗುವ ಹಾವುಗಳು ಪ್ರತಿ ವರ್ಷ 50,000ಕ್ಕೂ ಹೆಚ್ಚು ಜನರನ್ನು ಬಲಿ ಪಡೆಯುತ್ತಿವೆ..! ಅದರಲ್ಲೂ ಭಾರತದ ಕಿಂಗ್ ಕೋಬ್ರಾ ಕಚ್ಚಿದರೆ ಬದುಕುಳಿಯುವುದು ತೀರಾ ಕಷ್ಟ. ಆದ್ದರಿಂದ ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮಾನವನನ್ನು ಬಲಿ ಪಡೆಯುತ್ತಿರುವ ಹಾವು ಎಂಬ ಕುಖ್ಯಾತಿ ಪಡೆದಿದೆ. ಅದರಲ್ಲೂ ಭಾರತೀಯರೇ ಹೆಚ್ಚು ಸಂಖ್ಯೆಯಲ್ಲಿ ಹಾವಿನ ದಾಳಿಗೊಳಗಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.
1. ಸೊಳ್ಳೆ
ಯೆಸ್.. ಸೊಳ್ಳೆಯೇ ಮನುಷ್ಯನನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಬಲಿ ಪಡೆಯುತ್ತಿರುವ ಜೀವಿ..!ಸೊಳ್ಳೆಗಳು ಪ್ರತಿ ವರ್ಷ 660000 ದಿಂದ 1000000 ಜನರನ್ನು ಬಲಿ ಪಡೆಯುತ್ತಿದೆ. ಮಲೇರಿಯಾ, ಡೆಂಗ್ಯೂ ಸೇರಿದಂತೆ ಹತ್ತಾರು ರೋಗಗಳನ್ನು ಹರಡುತ್ತಿರುವ ಸೊಳ್ಳೆಗಳು ಇಂದು ಅತಿ ಹೆಚ್ಚು ಸಂಖ್ಯೆಯಲ್ಲಿ ಮಾನವನ ಜೀವಕ್ಕೆ ಎರವಾಗುತ್ತಿವೆ. ಆದ್ದರಿಂದ ಸೊಳ್ಳೆಗಳನ್ನೇ ಮಾನವನ ಅತಿ ದೊಡ್ಡ ಶತ್ರು ಎಂದು ಕರೆದರೂ ತಪ್ಪಿಲ್ಲ.
















