ಅಚ್ಚರಿಯಲ್ಲೇ ಅಚ್ಚರಿ, ಈ ಚೀನಾ ಹಿಂಗ್ಯಾಕೆ..!
ಏಷ್ಯಾದ ಬಲಿಷ್ಟ ಹಾಗೂ ಭಾರತದ ಜಾಗತಿಕ ವಿರೋಧಿ ರಾಷ್ಟ್ರ ಚೀನಾ. ಅಲ್ಲಿನ ಜನರು ತುಂಬಾ ವಿಭಿನ್ನ. ಅವರ ಜೀವನ ಶೈಲಿ ವಿಶ್ವದ ಎಲ್ಲೆಡೆಯೂ ಕಾಣಸಿಗದಂತೆ ಭಿನ್ನವಾಗಿರುತ್ತದೆ. ಇಷ್ಟಕ್ಕೂ ಈ ಚೀನಿ ಕುಳ್ಳರು ಮಾಡುವ ಪ್ರತಿಯೊಂದು ಕೆಲಸಗಳು ವಿಶ್ವದ ಗಮನ ಸೆಳೆಯುತ್ತವೆ. ಆದ್ದರಿಂದ ಚೀನಾದತ್ತ ವಿಶ್ವದ ಕಣ್ಣು ಸದಾ ನೆಟ್ಟಿರುತ್ತದೆ. ಆದರೂ ಚೀನಾದ ಬಗೆಗಿನ ಕೆಲವೊಂದು ಸಂಗತಿಗಳು ಯಾರಿಗೂ ತಿಳಿಯುವುದೇ ಇಲ್ಲ. ಅಂತಹ ಕೆಲ ಸಂಗತಿಗಳು ಇಲ್ಲವೆ ನೋಡಿ.
1. ವರ್ಷಕ್ಕೆ 20 ಮಿಲಿಯನ್ ಮರಗಳು ಬೇಕು..!
ಚೀನಾದಲ್ಲಿ ಊಟ ಮಾಡುವಾಗ ಸ್ಪೂನ್ ಬಳಸುವುದು ಸಾಮಾನ್ಯ. ಅದರಲ್ಲೂ ಕಟ್ಟಿಗೆ ಚಾಪ್ ಸ್ಟಿಕ್ ಗಳನ್ನು ಅವರು ಬಳಸುತ್ತಾರೆ. ವಿಶೇಷವೆಂದರೆ ಚಾಪ್ ಸ್ಟಿಕ್ ಗಳನ್ನು ತಯಾರಿಸಲು ಚೀನಾದಲ್ಲಿ ವರ್ಷಕ್ಕೆ ಸುಮಾರು 20 ಮಿಲಿಯನ್ ನಷ್ಟು ಮರಗಳನ್ನು ಕಡಿದುಹಾಕುತ್ತಾರೆ. ಇದು ಸುಮಾರು 80 ಬಿಲಿಯನ್ ಜನರಿಗೆ ವರ್ಷಕ್ಕಾಗುವಷ್ಟು ಚಾಪ್ ಸ್ಟಿಕ್ ತಯಾರಿಸಲು ಬಳಕೆಯಾಗುತ್ತದೆ.
2. ಜೈಲಿನಲ್ಲೂ ಬಾಡಿಗೆ..!
ಯೆಸ್.. ಚೀನಾದಲ್ಲೂ ಅತ್ಯಂತ ಕೆಟ್ಟ ಜೈಲುಗಳಿವೆ. ಆದ್ದರಿಂದ ಹಣವಂತರು ಅವುಗಳ ಬದಲಿಗೆ ಅವರ ಬದಲಿಗೆ ಬೇರೆಯವರನ್ನು ಜೈಲಿನಲ್ಲಿ ಕೂರಿಸಿ ತಮ್ಮ ಜೈಲು ಶಿಕ್ಷೆಯನ್ನು ತಪ್ಪಿಸಿಕೊಳ್ಳುತ್ತಾರೆ. ಇಂತಹ ಕೆಲವೊಂದು ಘಟನೆಗಳು ಚೀನಾದಲ್ಲು ಈಗಾಗಲೇ ನಡೆದಿವೆ.
3. ಅವರು ಬೆಕ್ಕನ್ನೂ ತಿನ್ನುತ್ತಾರೆ.
ನಮ್ಮಲ್ಲಿ ಬೆಕ್ಕಿಗೆ ಹೊಡೆದರೆ ಮಹಾನ್ ಪಾಪ ಬರುತ್ತದೆ ಎನ್ನುತ್ತೇವೆ. ಆದರೆ ಚೀನಾದ ಗುವಾಂಗ್ ಡಾಂಗ್ ಎಂಬಲ್ಲಿ ಪ್ರತಿದಿನ ಸುಮಾರು 10,000 ಬೆಕ್ಕುಗಳನ್ನು ತಿನ್ನಲಾಗುತ್ತದಂತೆ. ಅಲ್ಲದೇ ಕೆಲವೊಮ್ಮೆ ಅವುಗಳನ್ನು ಜೀವಂತವಾಗಿ ಬೇಯಿಸಿ ತಿನ್ನಲಾಗುತ್ತದೆ. ಇದು ಪ್ರಾಣಿದಯಾ ಸಂಗದವರ ಕಣ್ಣಿಗೆ ಬಿದ್ದು, ಅವರು ಎಷ್ಟೇ ಪ್ರತಿಭಟನೆ ಮಾಡಿದರೂ ಕೂಡಾ ನಿಯಂತ್ರಣಕ್ಕೆ ಬಂದಿಲ್ಲವಂತೆ.
4. ಸಾಕು ಪ್ರಾಣಿಗಳಿಗೂ ಬಣ್ಣ ಬಳಿಯುತ್ತಾರೆ.
ನಮ್ಮ ದೇಶದಲ್ಲಿ ಹಬ್ಬ-ಹರಿದಿನ ಬಂದರೆ ಎತ್ತು, ಹಸುಗಳಿಗೆ ಬಣ್ಣ ಬಳಿದು ಹಬ್ಬ ಆಚರಿಸುತ್ತೇವೆ. ಆದರೆ ಚೀನಿಯರು ಮಾತ್ರ ಸ್ವಲ್ಪ ಭಿನ್ನ. ಅವರು ತಮ್ಮ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕುಗಳಿಗೆ ಕಾಡು ಪ್ರಾಣಿಗಳ ಮಾದರಿಯಲ್ಲೇ ಬಣ್ಣ ಬಳಿಯುತ್ತಾರೆ. ಅಚ್ಚರಿ ಎಂದರೆ ಇದು 1999ಕ್ಕೆ ಹೋಲಿಸಿದಲ್ಲಿ ಸುಮಾರು 500 ಪ್ರತಿಶತ ಹೆಚ್ಚಾಗಿದೆಯಂತೆ.
5. ಅಲ್ಲಿ ರೋಬೋ ಹೋಟೆಲ್ ಇವೆ
ಚೀನಾ ತಾಂತ್ರಿಕತೆಯಲ್ಲಿ ಅತ್ಯಂತ ಮುಂದುವರೆದಿರುವ ದೇಶ. ಆದ್ದರಿಂದ ಅಲ್ಲಿ ಕೆಲವೊಂದು ಕೆಲಸಗಳನ್ನು ಯಂತ್ರಗಳ ಮೂಲಕವೇ ಮಾಡಿಸಲಾಗುತ್ತದೆ. ಆದರೆ ಅನ್ಹುಯಿ ಎಂಬ ಪ್ರದೇಶದಲ್ಲಿರುವ ಒಂದು ಹೋಟೆಲ್ ಸಂಪೂರ್ಣವಾಗಿ ಯಂತ್ರ ಮಾನವರನ್ನೇ ನಂಬಿಕೊಂಡಿದೆ. ಏಕೆಂದರೆ ಅಲ್ಲಿ ಅಡುಗೆ ಮಾಡುವುದು, ಅದನ್ನು ಬಡಿಸುವುದು, ಕ್ಲೀನ್ ಮಾಡುವುದು ಸೇರಿದಂತೆ ಎಲ್ಲವನ್ನೂ ಅವುಗಳೇ ಮಾಡಿ ಮುಗಿಸುತ್ತವೆ.
6. ಚೀಸ್ ಬಳಕೆ ಅನಾಗರಿಕವಂತೆ
ಚೀಸನ್ನು ಸಾಮಾನ್ಯವಾಗಿ ವಿವದ ಎಲ್ಲಾ ಕಡೆ ಬಳಕೆ ಮಾಡುತ್ತಾರೆ. ಚೀನಾದಲ್ಲೂ ಕೂಡಾ ಬಳಕೆ ಮಾಡುತ್ತಾರೆ. ಆದರೆ ಚೀಸನ್ನು ಬಳಸುವುದು ಅನಾಗರಿಕೆ ಎಂದು ಚೀನಿಯರು ವಾದಿಸುತ್ತಾರೆ. ಏಕೆಂದರೆ ಅದರಲ್ಲಿ ರುಚಿ ಇಲ್ಲ ಎಂಬುದು ಅವರು ನೀಡುವ ಕಾರಣವಂತೆ..!
7. ಬಹುತೇಕ ಪಾಂಡಾಗಳು ಚೀನಾದಲ್ಲೇ ಇವೆ..!
ವಿಶ್ವದಲ್ಲಿರುವ ಬಹುತೇಕ ಎಲ್ಲಾ ಪಾಂಡಾಗಳು ಚೀನಾದಲ್ಲೇ ಇವೆಯಂತೆ. ಆದರೆ ಅವುಗಳನ್ನು ಅವನತಿಯ ಅಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿಸಲಾಗಿದೆ. ಆದ್ದರಿಂದ ಪಾಂಡಾಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸಬೇಕಾದ ಅನಿವಾರ್ಯತೆ ಚೀನಿಯರ ಮುಂದಿದೆ. ಇಷ್ಟಕ್ಕೂ ಚೀನಾದಲ್ಲಿ ಪಾಂಡಾಗಳ ಸಂಖ್ಯೆ ಹೆಚ್ಚಲು ಕಾರಣವೇನೆಂದರೆ ಶೀತಲ ಸಮರ ನಡೆಯುತ್ತಿದ್ದ ವೇಳೆಯಲ್ಲಿ ಎಲ್ಲಾ ದೇಶಗಳು ತಮ್ಮಲ್ಲಿನ ಮರಿ ಪಾಂಡಾಗಳನ್ನು ಫೆಡೆಕ್ಸ್ ನ ಸಹಾಯದಿಂದ ಚೀನಾಕ್ಕೆ ರವಾನಿಸಿದ್ದವಂತೆ. ಆದ್ದರಿಂದಲೇ ಚೀನಾ ದೇಶದಲ್ಲಿ ಹೆಚ್ಚು ಸಂಖ್ಯೆಯ ಪಾಂಡಾಗಳು ನೆಲೆಸಿವೆ.
8. 35 ಮಿಲಿಯನ್ ಚೀನಿಯರು ಗುಹೆಯಲ್ಲಿದ್ದಾರಂತೆ..!
ಚೀನಾ ದೇಶ ನಾಗರಿಕತೆಯಲ್ಲಿ ಎಷ್ಟೇ ಮುಂದುವರೆದರೂ ಕೂಡಾ ಸುಮಾರು 35 ಮಿಲಿಯನ್ನಷ್ಟು ಜನರು ಇಂದಿಗೂ ಗುಹೆಗಳಲ್ಲಿ ವಾಸಿಸುತ್ತಿದ್ದಾರೆ. ಅದರಲ್ಲೂ ಹೆಚ್ಚಿನ ಜನರು ಶಾಂಕ್ಸಿ ಎಂಬ ಪ್ರಾಂತ್ಯದಲ್ಲೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇಲ್ಲಿನ ಗುಹೆಗಳನ್ನು ಯಾವೋಂಡಾಂಗ್ ಎಂದು ಕರೆಯಲಾಗುತ್ತದೆ. ಇನ್ನೊಂದೆಡೆ ಗುಹೆಗಳಲ್ಲಿ ವಾಸಿಸುವ ಜನರಿಗಾಗಿ ಅಲ್ಲಿನ ಸರ್ಕಾರ ಮನೆಗಳನ್ನು ನಿರ್ಮಿಸಿದೆ. ಆದರೆ ಕೆಲವೇ ಕೆಲವು ಜನರು ಮಾತ್ರ ಸರ್ಕಾರ ನೀಡಿದ ಮನೆಗಳಿಗೆ ಬಂದಿದ್ದಾರೆ. ಬಹುತೇಕರೆಲ್ಲರೂ ಇಂದಿಗೂ ಗುಹೆಗಳಲ್ಲಿ ವಾಸಿಸುತ್ತಿದ್ದಾರೆ.
9. ಚೀನಾದ ಹೆಣ್ಣಿನ ಕಥೆ ಕೇಳಿ
ಚೀನಾದಲ್ಲಿ ಹೆಣ್ಣಿನ ಸ್ಥಿತಿ ತುಂಬಾ ದುರ್ಭರವಾಗಿದೆ. ಏಕೆಂದರೆ ಅಲ್ಲಿನ ಹೆಣ್ಣು 20 ವರ್ಷದೊಳಗೆ ಮದುವೆಯಾಗದಿದ್ದರೆ, ಆಕೆಯನ್ನು ಸೇಲ್ ಆಗದೆ ಉಳಿದುರಿವ ಮಾಲು ಎಂದು ಹೀಯಾಳಿಸುತ್ತಾರಂತೆ..!
10. ಸೈನಿಕರ ಕಥೆ ಒಂದು ದೊಡ್ಡ ವ್ಯಥೆ..!
ವಿಶ್ವದಲ್ಲಿ ಅತ್ಯಂತ ಕಠಿಣ ಸೇನಾ ತರಬೇತಿ ಇರುವುದು ಭಾರತದಲ್ಲಿ. ಆದರೆ ಚೀನಾದಲ್ಲಿನ ಕೆಲವೊಂದು ಸೇನಾ ತರಬೇತಿಗಳು ಅತ್ಯಂತ ಕಠೋರವಾಗಿರುತ್ತವೆ. ಏಕೆಂದರೆ ಸೇನಾ ತರಬೇತಿಯ ವೇಳೆಯಲ್ಲಿ ಸೈನಿಕರು ತಲೆಯನ್ನು ಕೆಳಗೆ ಹಾಕಬಾರದು ಎಂಬ ಉದ್ದೇಶದಿಂದ ಶರ್ಟ್ ನ ಕಾಲರ್ ಗೆ ಸೂಜಿಗಳನ್ನು ಚುಚ್ಚಿರುತ್ತಾರೆ. ಒಂದು ವೇಳೆ ತಲೆಯನ್ನು ಕೆಳಗೆ ಮಾಡಿದರೆ ಆ ಸೂಜಿಯು ಕುತ್ತಿಗೆಗೆ ಚುಚ್ಚುತ್ತದೆ ಎಂಬುದು ತರಬೇತಿ ನೀಡುವವರ ಅಭಿಪ್ರಾಯ.
11. ವಿಶ್ವದ ಅತಿ ದೊಡ್ಡ ಟ್ರಾಫಿಕ್ ಗೆ ಸಾಕ್ಷಿಯಾಗಿತ್ತು ಚೀನಾ..!
ನಮ್ಮ ಬೆಂಗಳೂರಿನಂತೆ ಚೀನಾದಲ್ಲೂ ಟ್ರಾಫಿಕ್ ಸಮಸ್ಯೆ ಅತಿಯಾಗಿರುತ್ತದೆ. ಅದರಲ್ಲೂ ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ ಒಂದು ಬಾರಿ ಸುಮಾರು 12 ದಿನಗಳ ಕಾಲ 62 ಮೈಲಿಗಳಷ್ಟು ದೂರದವರೆಗೆ ಟ್ರಾಫಿಕ್ ಸೃಷ್ಠಿಯಾಗಿತ್ತಂತೆ. ಇದನ್ನು ವಿಶ್ವದ ಅತಿ ದೊಡ್ಡ ಟ್ರಾಫಿಕ್ ಎಂದೇ ಕರೆಯಲಾಗಿದೆ..!
12. ಬೀಜಿಂಗ್ ಹವಾಮಾನ ಎಷ್ಟು ಕೆಟ್ಟುಹೋಗಿದೆ ಗೊತ್ತಾ..?
ಬೀಜಿಂಗ್ ನ ಹವಾಮಾನ ಇಡೀ ವಿಶ್ವದಲ್ಲೇಲ್ಲೂ ಇಲ್ಲದಷ್ಟು ಕೆಟ್ಟು ಹೋಗಿದೆ. ಏಕೆಂದರೆ ಅಲ್ಲಿ ಒಂದು ದಿನಕ್ಕೆ ಗಾಳಿಯನ್ನು ಸೇವಿಸುವುದು, ಒಂದೇ ದಿನ ಸುಮಾರು 21 ಸಿಗರೇಟ್ ಗಳನ್ನು ಸೇದುವುದಕ್ಕೆ ಸಮಾನ ಎಂದರೆ ನೀವೇ ಅರ್ಥ ಮಾಡಿಕೊಳ್ಳಿ ಬೀಜಿಂಗ್ ನ ಹವಾಮಾನ ಎಷ್ಟು ಕೆಟ್ಟಿದೆ ಎಂದು.