ಅಣ್ಣಾದೊರೈ ಎಂಬ ಸೂಪರ್ ಸ್ಟಾರ್ ಆಟೋ ಚಾಲಕ

Date:

ಅಣ್ಣಾದೊರೈ ಎಂಬ ಸೂಪರ್ ಸ್ಟಾರ್ ಆಟೋ ಚಾಲಕ

ಜಿ.ಅಣ್ಣಾದೊರೈ ಆಲಿಯಾಸ್ ಆಟೋ ಅಣ್ಣಾದೊರೈ. ಹೇಳಿಕೊಳ್ಳುವಷ್ಟು ಎಜುಕೇಷನ್ ಕೂಡ ಇಲ್ಲ. ಪಿಯುಸಿ ಡ್ರಾಪ್ಔಟ್ ಸ್ಟೂಡೆಂಟ್. ಆಟೋ ಓಡಿಸೋದು ಇವರ ಕೆಲಸ. ಆದ್ರೆ ಅಣ್ಣಾದೊರೈ ಆಟೋ, ಮಾಮೂಲಿ ರಿಕ್ಷಾಗಳಂತಿಲ್ಲ. ಈ ಆಟೋದ ಪೂರ್ತಿ ಇರೋದು ಮ್ಯಾಗ್ಜಿನ್​ ಪುಸ್ತಕಗಳು. ಇದರ ಜೊತೆಗೆ ಅಣ್ಣಾ ಆಟೋದಲ್ಲಿ ಚಿಕ್ಕ ಟಿ.ವಿ ಜೊತೆಗೆ ವೈಫೈ ಕನೆಕ್ಷನ್ ಕೂಡ ಇದೆ.
ಕಳೆದ 2012ರಿಂದ ಅಣ್ಣಾ ಆಟೋ ಓಡಿಸುವ ಕೆಲಸ ಮಾಡ್ತಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಅಣ್ಣಾ ಸಾಗಿದ ದಾರಿ ಬಹು ದೊಡ್ಡದು. 31 ವರ್ಷದ ಅಣ್ಣಾದೊರೈ ಚೆನ್ನೈ ಮಂದಿ ಪ್ರೀತಿಸುವ ಆಟೋಡ್ರೈವರ್ ಆಗಿ ಬೆಳೆದು ನಿಂತಿದ್ದಾರೆ. ಅಷ್ಟೇ ಅಲ್ಲ ಸಾಮಾಜಿಕ ಜಾಲ ತಾಣಗಳಲ್ಲೂ ಅಣ್ಣಾ ಸೂಪರ್ ಸ್ಟಾರ್.
ಅಣ್ಣಾ ಫೇಸ್ಬುಕ್ ಅಕೌಂಟ್ಗೆ 10 ಸಾವಿರಕ್ಕೂ ಅಧಿಕ ಫಾಲೋವರ್ಗಳಿದ್ದಾರೆ. ಇಲ್ಲಿ ತನಕ ಅಣ್ಣಾ 40 ಭಾಷಣಗಳನ್ನು ಮಾಡಿದ್ದಾರೆ. ವೊಡಾಫೋನ್, ಹ್ಯುಂಡಾಯ್, ರಾಯಲ್ಎನ್ಫೀಲ್ಡ್ ಸೇರಿದಂತೆ ಹಲವು ಕಂಪನಿಗಳ ಉದ್ಯೋಗಿಗಳಿಗೆ ಅಣ್ಣಾ ಭಾಷಣ ಮಾಡಿದ್ದಾರೆ ಅಂದ್ರೆ ಅವರ ಸಾಮರ್ಥ್ಯವನ್ನು ನೀವೇ ಲೆಕ್ಕಹಾಕಿ !
ತಾಂತ್ರಿಕತೆ ಅಪ್ಡೇಟ್ ಆದಂತೆ ಅಣ್ಣಾ ಆಟೋ ಕೂಡ ಅಪ್ ಟು ಡೇಟ್ ಆಗುತ್ತದೆ. ಓಲ್ಡ್ ಮಹಾಬಲಿಪುರಂ ರಸ್ತೆಯಲ್ಲಿ ಚಲಿಸುವ ಅಣ್ಣಾ ಆಟೋದಲ್ಲಿ ಲ್ಯಾಪ್ಟಾಪ್, ಟ್ಯಾಬ್, ಐಪ್ಯಾಡ್ ಸೇರಿದಂತೆ ಪ್ರಯಾಣಿಕರು ಬ್ರೌಸಿಂಗ್ ವ್ಯವಸ್ಥೆಗಳನ್ನು ಕೂಡ ಬಳಸಿಕೊಳ್ಳಬಹುದು.


ಅಣ್ಣಾ ಆಟೋದಲ್ಲಿರುವ ಈ ವ್ಯವಸ್ಥೆಗಳನ್ನ ಬಳಸಿಕೊಳ್ಳುವವರು ಅದನ್ನು ಬಳಸಿದ ಪ್ರಮಾಣದಂತೆ 10, 15, 20 ಅಥವಾ 25 ರೂಪಾಯಿಗಳನ್ನು ನೀಡಬೇಕಾಗುತ್ತದೆ. ಚಿಲ್ಲರೆ ತೊಂದರೆಯನ್ನು ತಪ್ಪಿಸಿಕೊಳ್ಳಲು ಅಣ್ಣಾ ತನ್ನ ಆಟೋದಲ್ಲೇ ಕಳೆದ ವರ್ಷದಿಂದ ಸ್ವೈಪಿಂಗ್ ಮೆಷಿನ್ ಅನ್ನು ಕೂಡ ಇಟ್ಟುಕೊಂಡಿದ್ದಾರೆ.
ಅಂದಹಾಗೇ ಅಣ್ಣಾ ಕೆಲವು ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ವಿಶಿಷ್ಠ ಆಫರ್ಗಳನ್ನು ಕೂಡ ನೀಡುತ್ತಾರೆ. ಟೀಚರ್ಗಳಿಗೆ ದಿನದ ಆಧಾರದ ಮೇಲೆ ಸ್ಪೆಷಲ್ ಡಿಸ್ಕೌಂಟ್ ಇದೆ. ವ್ಯಾಲೆಂಟೈನ್ ಡೇಯಂದು ಪ್ರೇಮಿಗಳಿಗೆ ವಿಶೇಷ ಆಫರ್ ನೀಡಲಾಗುತ್ತದೆ. ಮದರ್ಸ್ ಡೇಯಂದು ಮಕ್ಕಳ ಜೊತೆ ಪ್ರಯಾಣಿಸುವ ಅಮ್ಮಂದಿರಿಗೂ ವಿಶೇಷ ರೇಟ್ಗಳಿರುತ್ತದೆ. ಸದಾ ಗ್ರಾಹಕರ ಸಂತೋಷವನ್ನೇ ಬಯಸುವ ಅಣ್ಣಾ ತಿಂಗಳೊಂದಕ್ಕೆ ಸುಮಾರು 45000ರೂಪಾಯಿಗಿಂತಲೂ ಅಧಿಕ ಆದಾಯ ಸಂಪಾದಿಸುತ್ತಾರೆ. ತನ್ನ ಆಟೋದಲ್ಲಿರುವ ವ್ಯವಸ್ಥೆಗಾಗಿ ಸರಿಸುಮಾರು 9000 ರೂಪಾಯಿ ಖರ್ಚು ಮಾಡುತ್ತಾರೆ.

ಸದ್ಯ ಆಟೋ ಅಣ್ಣಾದೊರೈ ಹೊಸತೊಂದು ಆ್ಯಪ್ಅನ್ನು ಲಾಂಚ್ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ. ಆ ಮೂಲಕ ಗ್ರಾಹಕರಿಗೆ ತನ್ನ ಆಟೋ ಎಲ್ಲಿದೆ ಮತ್ತು ಎಷ್ಟು ಹೊತ್ತಿಗೆ ಲಭ್ಯವಾಗುತ್ತದೆ ಅನ್ನೋ ಮಾಹಿತಿ ನೀಡುವ ಯೋಜನೆಯನ್ನೂ ಇಟ್ಟುಕೊಂಡಿದ್ದಾರೆ.
ಒಟ್ಟಿನಲ್ಲಿ ಅಣ್ಣಾ ಈಗ ತಮಿಳುನಾಡಿನಾದ್ಯಂತ ಆಟೋ ಅಣ್ಣಾನಾಗಿ ಬೆಳೆದಿದ್ದಾರೆ. ಇತರಿಗೆ ಸ್ಫೂರ್ತಿಯಾಗಿದ್ದಾರೆ.

ಓದಿದ್ದು 8ನೇ ತರಗತಿ, ಮಲಗುತ್ತಿದ್ದುದು ರೈಲ್ವೆ ಸ್ಟೇಷನಲ್ಲಿ… ಇವತ್ತು..!?

ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!  

ಹುಡ್ಗೀರ ಮುಂದೆ ಹುಡುಗರು ಈ ವಿಷ್ಯಗಳಲ್ಲಿ ವೀಕ್ …!

Share post:

Subscribe

spot_imgspot_img

Popular

More like this
Related

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಹಬ್ಬ...

ಕರ್ನಾಟಕದಲ್ಲಿ ವರುಣಾರ್ಭಟ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ ಮಳೆಯ...