ಮಂಗಳೂರು : ಕೋರ್ಟ್ ವ್ಯಾಜ್ಯದ ಹಿನ್ನೆಲೆಯಲ್ಲಿ ಅತ್ತೆ ನ್ಯಾಯಾಲಯಕ್ಕೆ ಹಾಜರಾಗಬಾರದು ಎಂದು ಷಡ್ಯಂತ್ರ ರೂಪಿಸಿದ ಅಳಿಯ ಆಕೆಯನ್ನು ಗೂಂಡಾಗಳ ನೆರವು ಪಡೆದು ಕಿಡ್ನಾಪ್ ಮಾಡಿ, ಬೆಂಗಳೂರಿಗೆ ಕರೆದುಕೊಂಡು ಹೋಗಿ ತಲೆ ಬೋಳಿಸಿ, ಬಳಿಕ ರೈಲು ಹತ್ತಿಸಿ ಬಿಟ್ಟಿದ್ದಾನೆ. ಮಂಗಳೂರಿಗೆ ಬಂದ ಸಂತ್ರಸ್ತೆ ಸಾಮಾಜಿಕ ಕಾರ್ಯಕರ್ತರ ನೆರವು ಪಡೆದು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚಂದ್ರಶೇಖರ್ ಆರೋಪಿ. ಕಲಾವತಿ ಅಳಿಯನಿಂದ ದೌರ್ಜನ್ಯಕ್ಕೊಳಗಾದ ಮಹಿಳೆ. ತಮಿಳುನಾಡು ಮೂಲದ ಕಲಾವತಿಯನ್ನು ಚಂದ್ರಶೇಖರ ೧೫ ದಿನಗಳ ಹಿಂದೆ ಕಿಡ್ನಾಪ್ ಮಾಡಿದ್ದ. ೧೩ ದಿನಗಳ ಕಾಲ ತಿರುಪುö್ಪರದಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ, ಅನಾರೋಗ್ಯದ ಹಿನ್ನೆಲೆಯಲ್ಲಿ ಪಾಲಕ್ಕಾಡÀಲ್ಲಿ ರೈಲು ಹತ್ತಿಸಿ ಬಿಟ್ಟಿದ್ದ. ತಿರುಪುö್ಪರ ಪ್ರಯಾಣವೆಂದು ಹೇಳಿ ಆಕೆಯನ್ನು ಮಂಗಳೂರು ರೈಲು ಹತ್ತಿಸಿ ಬಿಟ್ಟಿದ್ದಾನೆ.
ಫೆಬ್ರವರಿ ೨೨ರಂದು ಕಲಾವತಿ ಮಂಗಳೂರಿಗೆ ಬಂದು ಇಳಿದಿದ್ದು, ೨ ದಿನ ರೈಲ್ವೇ ನಿಲ್ದಾಣದಲ್ಲಿ ಅಡ್ಡಾಡಿದ್ದಾರೆ. ೬೫ರ ಹರೆಯದ ವೃದ್ಧೆಯನ್ನು ಕಂಡ ಸಾಮಾಜಿಕ ಕಾರ್ಯಕರ್ತರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಕರೆದೊಯ್ದಿದ್ದಾರೆ. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ತೆ ಕಿಡ್ನಾಪ್ ಮಾಡಿ ತಲೆಬೋಳಿಸಿದ ಅಳಿಯ
Date: