ಅತ್ಯಂತ ಕಮ್ಮಿ ಬಂಡವಾಳ, ಹೆಚ್ಚು ಆದಾಯ …! ಇಲ್ಲಿದೆ ದಾರಿ‌…

Date:

ಅತ್ಯಂತ ಕಮ್ಮಿ ಬಂಡವಾಳ, ಹೆಚ್ಚು ಆದಾಯ …! ಇಲ್ಲಿದೆ ದಾರಿ‌…

ದೊಡ್ಡ ಉದ್ಯಮದ ಆರಂಭ ಚಿಕ್ಕ ಉದ್ಯಮದಿಂದಲೇ. ಮನಸ್ಸು ಮಾಡಿದರೆ, ಸ್ವಲ್ಪ ಬುದ್ಧಿಶಕ್ತಿ ಉಪಯೋಗಿಸಿದ್ರೆ, ಪರಿಶ್ರಮ ಹಾಕಿದ್ರೆ ಅತ್ಯಂತ ಕಡಿಮೆ ಬಂಡವಾಳದಲ್ಲಿ , ಕನಿಷ್ಠ 10 ಸಾವಿರ ರೂಗಳಿಂದ ಉದ್ಯಮ ಆರಂಭಿಸಬಹುದು…

ಅತೀ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ ಉದ್ಯಮಗಳ ಬಗ್ಗೆ ಇಲ್ಲಿದೆ ಮಾಹಿತಿ…!

*ಪ್ರಯಾಣ ಸಂಸ್ಥೆ
ಕಳೆದ ಒಂದು ದಶಕದಲ್ಲಿ ಪ್ರಯಾಣದ ಪ್ರಮಾಣ ಹಲವು ಪಟ್ಟು ಏರಿರುವುದನ್ನು ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ. ಜೀವಮಾನದಲ್ಲೊಮ್ಮೆಯಾದರು ಒಂದು ಸ್ಥಳವನ್ನು ನೋಡಬೇಕೆಂಬ ಹಂಬಲ ಎಲ್ಲರಲ್ಲಿಯೂ ಇರುತ್ತದೆ. ಹಿಂದಿನ ದಿನಗಳಲ್ಲಿ ಇದು ಆರ್ಥಿಕ ಹಾಗು ಸಮಯಾಬಾವದಿಂದ ಕಷ್ಟಸಾಧ್ಯವಾಗಿತ್ತು. ಇಂದು ಜನರು ಬದಲಾಗಿದ್ದು, ಚೆನ್ನಾಗಿದ್ದಾಗಲೇ ಜಗತ್ತನ್ನು ಸುತ್ತುವ ಪ್ರವೃತ್ತಿ ಹೆಚ್ಚುತ್ತಿದೆ. ಈ ಅವಕಾಶವನ್ನು ಕಂಡುಕೊಂಡಿರುವ ಉದಯೋನ್ಮುಖ ವಾಣಿಜ್ಯೋದ್ಯಮಿಗಳಿಗೆ ತಮ್ಮ ಉದ್ಯಮವನ್ನು ಪ್ರಾರಂಭಿಸಲು ಸೂಕ್ತ ಸಮಯವಾಗಿದೆ.  ಅತಿ ಕಡಿಮೆ ಬಂಡವಾಳದಲ್ಲಿ ಪ್ರಾರಂಭಿಸಬಹುದಾದ ಈ ಉದ್ಯಮವನ್ನು ಪ್ರಾರಂಭದಲ್ಲಿ ಮನೆಯಲ್ಲಿಯೇ ಪ್ರಾರಂಬಿಸಬಹುದು. ಈ ಉದ್ಯಮವನ್ನು ಸುಲಭವಾಗಿ ಮತ್ತು ಅಗ್ಗದ ವೆಚ್ಚದಲ್ಲಿ ನಿರ್ವಹಿಸಬಹುದು.

ಮೊಬೈಲ್ ರೀಚಾರ್ಜ್ ಅಂಗಡಿ
ಇಂದು ಮೊಬೈಲ್ ರೀಚಾರ್ಜ್ ಮಾಡಲು ಆನ್ಲೈನ್ ಸೌಲಭ್ಯವಿದ್ದರು ಕೆಲವರು ಇಂದಿಗೂ ಅಂಗಡಿಗಳಲ್ಲಿ ಹಣ ಕೊಟ್ಟು ರೀಚಾರ್ಜ್ ಮಾಡಿಸಲಿಚ್ಚಿಸುತ್ತಾರೆ. ಇದಕ್ಕೆ ದೊಡ್ಡ ಸ್ಥಳವಕಾಶ ಬೇಕೆಂದಿಲ್ಲ, ಚಿಕ್ಕದಾದರು ಸರಿ. ಈ ಉದ್ಯಮಕ್ಕಾಗಿ ನೀವು ಇರುವ ಸ್ಥಳದ ಮೊಬೈಲ್ ಜಾಲ ನಿರ್ವಹಿಸುವ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಕಡಿಮೆ ದರದಲ್ಲಿ ಮೊಬೈಲ್ ಕೂಪನ್ ಅಥವಾ ಕರೆನ್ಸಿಯನ್ನು ಕೊಳ್ಳಬೇಕಾಗುತ್ತದೆ. ಪ್ರತಿ ಕರೆನ್ಸಿ ಮಾರಾಟವಾದರೆ ಕಮಿಶನ್ ದೊರಕುತ್ತದೆ. ಈ ಉದ್ಯಮಕ್ಕೆ ಹತ್ತು ಸಾವಿರಕ್ಕೂ ಕಡಿಮೆ ಬಂಡವಾಳ ಸಾಕಾಗುತ್ತದೆ.

ಸಣ್ಣ ಹೋಟೆಲ್ :
ಈಗ ಉಪಾಹಾರ ಮಂದಿರಗಳು, ಸಣ್ಣ ಹೋಟೆಲ್ ಉದ್ಯಮಕ್ಕೆ ಹೆಚ್ಚಿನ ಬೇಡಿಕೆಯಿದ್ದು ಸುಲಭವಾಗಿ ಉದ್ಯಮ ಶುರುಮಾಡಬಹುದು. ಮನೆಯಲ್ಲಿಯೇ ಈ ವ್ಯವಹಾರವನ್ನು ಮಾಡಬಹುದು. ಮಾರುಕಟ್ಟೆಯಲ್ಲಿ ಸಿದ್ದ ಹಾಗೂ ರುಚಿಕರ, ಆರೋಗ್ಯಕರ ಆಹಾರಕ್ಕೆ ಎಂದಿಗೂ ಬೇಡಿಕೆ ಇದ್ದೆ ಇರುತ್ತೆ. ಸಾಮಾನ್ಯವಾಗಿ ಇದಕ್ಕೆ 5 ರಿಂದ 10 ಸಾವಿರದಷ್ಟು ಹಣ ಬೇಕಾಗುತ್ತದೆ.

ಟ್ಯೂಷನ್ ನೀಡುವುದು :
ಅತೀ ಕಡಿಮೆ ಬಂಡವಾಳದಲ್ಲಿ ಪ್ರಾರಂಭಿಸಬಹುದಾದ ಉದ್ಯಮವೆಂದರೆ ಮನೆಯಲ್ಲಿಯೇ ಪಾಠ ಹೇಳುವುದು ಅಥವಾ ಟ್ಯೂಷನ್ ನೀಡುವುದು. ಇದಕ್ಕೆ ಮನೆಯ ಒಂದು ಕೋಣೆಯನ್ನು ಮೀಸಲಾಗಿಟ್ಟರೆ ಬಂಡವಾಳವೇ ಬೇಕಾಗಿಲ್ಲ. ಸಾಮಾನ್ಯವಾಗಿ ಮನೆಪಾಠ ಹೇಳುವ ಶಿಕ್ಷಕರು ತಮ್ಮ ಮನೆಯಲ್ಲಿಯೇ ಪಾಠ ಹೇಳುವುದರಿಂದ ಬಾಡಿಗೆ ಹಾಗೂ ಇತರ ಸೌಲಭ್ಯಗಳಿಗಾಗಿ ನೀಡಬೇಕಾದ ಹಣ ನಿವ್ವಳವಾಗಿ ಉಳಿಯುತ್ತದೆ. ಆದರೆ ಈ ಮೂಲಕ ಹಣ ಮಾಡಬೇಕಾದರೆ ನೀವು ಉತ್ತಮ ಶಿಕ್ಷಕರಾಗಿರಬೇಕು. ನಿಮ್ಮ ವಿದ್ಯಾರ್ಥಿಗಳ ಪ್ರಗತಿ ಮೇಲೆ ನಿಮ್ಮ ಈ ವೃತ್ತಿ ಜೀವನ ಇರುತ್ತದೆ.

ಜ್ಯೂಸ್ ಸೆಂಟರ್ : ಬೇಸಿಗೆ ಬಂತೆಂದರೆ ಸಾಕು.‌ ದೇಹಲ ಜ್ಯೂಸ್, ಎಳನೀರಿನಂತಹ ಪಾನೀಯಗಳನ್ನು ಬೇಡುತ್ತದೆ. ಕಡಿಮೆ‌ ಬಂಡವಾಳದಲ್ಲಿ ಜ್ಯೂಸ್ ಸೆಂಟರ್ ಆರಂಭಿಸಿ ಹೆಚ್ಚು ಲಾಭ ಪಡೆಯುವ ಅವಕಾಶ ನಿಮ್ಮ ಪಾಲಿಗಿದೆ.

ಸಂಗೀತ/ನೃತ್ಯ ಶಾಲೆ : ನೀವು ಸಂಗೀತ, ನೃತ್ಯ ಪ್ರವೀಣರೇ? ಹಾಗಾದಲ್ಲಿ ಅದನ್ನು ಸದುಪಯೋಗ ಪಡಿಸಿಕೊಳ್ಳಿ. ನಿಮ್ಮ ಪ್ರತಿಭೆಯೇ ಇದಕ್ಕೆ ಬಂಡವಾಳ.

ದರ್ಜಿ :
ಒಳ್ಳೆಯ ದರ್ಜಿಗಳಿಗೆ ಸದಾ ಬೇಡಿಕೆ ಇದೆ. ಈ ನೈಪುಣ್ಯವನ್ನು ನೀವು ಹೊಂದಿದ್ದರೆ ಒಂದೆರಡು ಹೊಲಿಗೆ ಯಂತ್ರಗಳನ್ನು ಇರಿಸಲು ಸಾಧ್ಯವಿರುವಷ್ಟು ಚಿಕ್ಕದಾದ ಕೋಣೆಯನ್ನು ಬಾಡಿಗೆಗೆ ಪಡೆದು ನಿಮ್ಮ ಪದೇ ವಸ್ತ್ರ ವಿನ್ಯಾಸ ಅಂಗಡಿಯನ್ನು ತೆರೆಯಬಹುದು. ಮೂಲ ಬಂಡವಾಳ ಮಾತ್ರವೇ ಹೆಚ್ಚೇ ಹೊರತು ಉಳಿದಂತೆ ವಿದ್ಯುತ್ ಮತ್ತು ಇತರ ಖರ್ಚುಗಳು ಕಡಿಮೆಯೇ ಇರುತ್ತದೆ.

ಯೂ ಟ್ಯೂಬ್ ಚಾನೆಲ್
ಚಿಕ್ಕ ಬಂಡವಾಳದಿಂದ ದೊಡ್ಡದನ್ನು ಪಡೆಯಲು ಬಯಸುವ ಪ್ರತಿಭಾಶಾಲಿಗಳಿಗೆ ಯೂಟ್ಯೂಬ್ ಒಳ್ಳೆಯ ವೇದಿಕೆ.
ತಮ್ಮ ಪ್ರತಿಭೆಯನ್ನು ಉಚಿತವಾಗಿ ಯೂಟ್ಯೂಬ್ ವೀಡಿಯೋ ಮೂಲಕ ಅಪ್ಲೋಡ್ ಮಾಡಬಹುದು. ಇದರಿಂದ ಹಣ ಕೂಡ ಸಿಗುತ್ತದೆ. ನೀವು ನಿಮ್ಮ ಸ್ವಂತ ಕಂಟೆಂಟ್ ಮೂಲಕ ಹೆಚ್ಚು ಜನರನ್ನು ತಲುಪುವುದು ಮುಖ್ಯ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...