ಅದಿರು ಕಳುವು ಮಾಡುವುದಕ್ಕೆ ಅಂದಿನ BJP ಸರ್ಕಾರದ ಕುಮ್ಮಕ್ಕು ಇತ್ತು: ಹೆಚ್.ಕೆ. ಪಾಟೀಲ್

Date:

ಅದಿರು ಕಳುವು ಮಾಡುವುದಕ್ಕೆ ಅಂದಿನ BJP ಸರ್ಕಾರದ ಕುಮ್ಮಕ್ಕು ಇತ್ತು: ಹೆಚ್.ಕೆ. ಪಾಟೀಲ್

ಬೆಂಗಳೂರು: ಅದಿರು ಕಳುವು ಮಾಡುವುದಕ್ಕೆ ಅಂದಿನ BJP ಸರ್ಕಾರದ ಕುಮ್ಮಕ್ಕು ಇತ್ತು ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ. ನಗರಲದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿರುವಾಗ ಈ ದೊಡ್ಡ ಅಕ್ರಮ ಆಗಿತ್ತು. ಈಗ ಇದನ್ನು ಮರೆಮಾಚುವುದಕ್ಕೆ ಬಿಜೆಪಿಯವರೇ ಬಂದು ಮಾತನಾಡುತ್ತಿದ್ದಾರೆ.
ಅದಿರು ಕಳುವು ಮಾಡುವುದಕ್ಕೆ ಅಂದಿನ ಸರ್ಕಾರದ ಕುಮ್ಮಕ್ಕು ಇತ್ತು. ಅಂದು 6 ಲಕ್ಷ ಟನ್ ಖನಿಜ ರಫ್ತಾಗಿತ್ತು. ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಗೆ ಅವರು ಅಕ್ರಮ ಹೊರಗೆ ತಂದು, ವರದಿ ನೀಡಿದ್ದರು. ಅವರ ವರದಿಗೆ ತಾರ್ಕಿಕ ಅಂತ್ಯ ಬರುವುದಕ್ಕೆ ಪ್ರಾರಂಭವಾಗಿದೆ ಎಂದು ತಿಳಿಸಿದರು.
ಇನ್ನೂ ಸಿದ್ದರಾಮಯ್ಯ ಅವರು ಈ ಅಕ್ರಮದ ವಿರುದ್ಧ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ್ದರು. ಸಿದ್ದರಾಮಯ್ಯ ಅವರ ಪ್ರಯತ್ನಕ್ಕೆ ಕೋರ್ಟ್ ನಿರ್ಣಯ ಮಾಡಿದೆ. ಕಳ್ಳರು ಎಲ್ಲೇ ಇರಲಿ ಅವರಿಗೆ ಶಿಕ್ಷೆ ಕೊಡುವುದು ಕೋರ್ಟ್ ಕೆಲಸವಾಗಿದೆ. ಈ ಅಕ್ರಮವನ್ನು ಮಟ್ಟ ಹಾಕಲು ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಸಿದ್ದರಾಮಯ್ಯನವರು ಪಾದಯಾತ್ರೆ ಮಾಡಿದಕ್ಕೆ ಯಶಸ್ಸು ಸಿಕ್ಕಿದೆ. ಕಾಂಗ್ರೆಸ್ ಶಾಸಕ ಬಂಧನ ಆಗಿರುವುದು ಸರ್ಕಾರಕ್ಕೆ ಮುಜುಗರವೇನು ಇಲ್ಲ ಎಂದು ಹೇಳಿದರು.

Share post:

Subscribe

spot_imgspot_img

Popular

More like this
Related

ಸಂತೋಷದಿಂದ ಹಬ್ಬವನ್ನು ಆಚರಿಸಿ, ಕಾಂಗ್ರೆಸ್ ಲೂಟಿಯ ವಿರುದ್ಧ ಹೋರಾಡುತ್ತೇವೆ: ನಿಖಿಲ್ ಕುಮಾರಸ್ವಾಮಿ

ಸಂತೋಷದಿಂದ ಹಬ್ಬವನ್ನು ಆಚರಿಸಿ, ಕಾಂಗ್ರೆಸ್ ಲೂಟಿಯ ವಿರುದ್ಧ ಹೋರಾಡುತ್ತೇವೆ: ನಿಖಿಲ್ ಕುಮಾರಸ್ವಾಮಿ ಬೆಂಗಳೂರು...

ಕರ್ನಾಟಕದಲ್ಲಿ ಭಾರೀ ಮಳೆ: 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!

ಕರ್ನಾಟಕದಲ್ಲಿ ಭಾರೀ ಮಳೆ: 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ! ಬೆಂಗಳೂರು: ರಾಜ್ಯದ...

ಮಧ್ಯಾಹ್ನದ ನಿದ್ದೆ ಒಳ್ಳೆಯದೋ ಕೆಟ್ಟದ್ದೋ? ತಜ್ಞರ ಅಭಿಪ್ರಾಯ ಇಲ್ಲಿದೆ

ಮಧ್ಯಾಹ್ನದ ನಿದ್ದೆ ಒಳ್ಳೆಯದೋ ಕೆಟ್ಟದ್ದೋ? ತಜ್ಞರ ಅಭಿಪ್ರಾಯ ಇಲ್ಲಿದೆ ಮಧ್ಯಾಹ್ನ ಊಟದ ನಂತರ...

ಓಲಾ ಕಂಪನಿ ಸಿಬ್ಬಂದಿ ಅನುಮಾನಾಸ್ಪದ ಸಾವು – ಮೂವರ ವಿರುದ್ಧ ದೂರು

ಓಲಾ ಕಂಪನಿ ಸಿಬ್ಬಂದಿ ಅನುಮಾನಾಸ್ಪದ ಸಾವು – ಮೂವರ ವಿರುದ್ಧ ದೂರು ಬೆಂಗಳೂರು:...