ಅದೊಂದೇ ಮಾತಿಗೆ ಜೀವದ ಗೆಳೆಯನ‌ ಜೀವ ತೆಗೆದ ಸ್ನೇಹಿತ..!

Date:

ಅವರಿಬ್ಬರು ಆತ್ಮೀಯ ಗೆಳೆಯರು. ಆದರೆ, ಎಣ್ಣೆ ಏಟು ಗೆಳೆಯನಿಂದ ಗೆಳೆಯನ ಕೊಲೆಗೆ ಕಾರಣವಾಗಿ ಬಿಟ್ಟಿತು..! ಅದೊಂದು, ಅದೊಂದೇ ಮಾತಿನಿಂದ ಆತ ಗೆಳೆಯನ ಪ್ರಾಣ ತೆಗೆದುಬಿಟ್ಟ..!
ಹೌದು, ಕುಡಿದ ಮತ್ತಿನಲ್ಲಿ ಓರ್ವ ತನ್ನ ಆತ್ಮೀಯ ಗೆಳೆಯನನ್ನೇ ಕೊಲೆ ಮಾಡಿದ್ದಾನೆ. ಇದು ನಡೆದಿರುವುದು ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ.
ಕಾರು ಚಾಲಕ ಕಾರ್ತಿಕ್ ಕೊಲೆಯಾದ ದುರ್ದೈವಿ. ಡೆಲಿವರಿ ಬಾಯ್ ಆಗಿ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದ ಗುರು ಪ್ರಸಾದ್ ಆರೋಪಿ.
ಗುರುಪ್ರಸಾದ್ ಎಣ್ಣೆ ಏಟಲ್ಲಿ ಕಾರ್ತಿಕ್ ತಲೆಗೆ ಸೋಡ ಬಾಟಲಿಯಲ್ಲಿ ಹೊಡೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶುಕ್ರವಾರ ರಾತ್ರಿ ಗುರುಪ್ರಸಾದ್, ಕಾರ್ತಿಕ್ ಮತ್ತೊಂದಿಷ್ಟು ಮಂದಿ ಸ್ನೇಹಿತರು ಮಳಿಗೆಯೊಂದರ ಬಾಗಿಲಲ್ಲಿ ಕುಳಿತು ಕಂಠಪೂರ್ತಿ ಕುಡಿದಿದ್ದಾರೆ. ಈ ವೇಳೆ ಕಾರ್ತಿಕ್ ಗುರುಪ್ರಸಾದ್ ಗೆ ಯಾವುದೋ ವಿಷಯಕ್ಕೆ ಹೀಯಾಳಿಸಿದ್ದಾನೆ. ಇಬ್ಬರ ನಡುವೆ ಜಗಳವಾಗಿದೆ..ಸ್ನೇಹಿತರು ಅವರಿಬ್ಬರನ್ನು ಸಮಾಧಾನ ಪಡಿಸುವಲ್ಲಿ ವಿಫಲರಾಗಿದ್ದಾರೆ. ಗುರುಪ್ರಸಾದ್ ಕಾರ್ತಿಕ್ ತಲೆಗೆ ಸೋಡ ಬಾಟಲಿಯಿಂದ ಹೊಡೆದಿದ್ದಾನೆ. ಕಾರ್ತಿಕ್ ಗಾಯಗೊಂಡಿದ್ದಾನೆ. ಬಳಿಕ ಎಣ್ಣೆ ನಶೆಯಲ್ಲಿ ಎಲ್ಲ ಮಲಗಿದ್ದಾರೆ. ಇಂದು ಬೆಳಗ್ಗೆ ಎದ್ದು ನೋಡುವಾಗ ಕಾರ್ತಿಕ್ ಗೆ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿ ಆಗಲಿಲ್ಲ. ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ. ಗುರುಪ್ರಸಾದ್ ಅರೆಸ್ಟ್ ಆಗಿದ್ದಾನೆ.‌

Share post:

Subscribe

spot_imgspot_img

Popular

More like this
Related

ರಾಯಚೂರು: ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ಆತ್ಮಹತ್ಯೆ!

ರಾಯಚೂರು: ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ಆತ್ಮಹತ್ಯೆ! ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ...

ಹಣಕಾಸು ವಿಚಾರಕ್ಕೆ ಯುವಕನ ಬರ್ಬರ ಹತ್ಯೆ! ಸಾಕ್ಷ್ಯವೇ ಸಿಗದಂತೆ ಶವ ಸುಟ್ಟು ಹಾಕಿದ ದುಷ್ಕರ್ಮಿಗಳು

ಹಣಕಾಸು ವಿಚಾರಕ್ಕೆ ಯುವಕನ ಬರ್ಬರ ಹತ್ಯೆ! ಸಾಕ್ಷ್ಯವೇ ಸಿಗದಂತೆ ಶವ ಸುಟ್ಟು...

ಇರಾನ್ ದಾಳಿ ಶಂಕೆ: ಅಮೆರಿಕದ F-35 ಯುದ್ಧವಿಮಾನ ತುರ್ತು ಲ್ಯಾಂಡಿಂಗ್

ಇರಾನ್ ದಾಳಿ ಶಂಕೆ: ಅಮೆರಿಕದ F-35 ಯುದ್ಧವಿಮಾನ ತುರ್ತು ಲ್ಯಾಂಡಿಂಗ್ ಟೆಹ್ರಾನ್: ಇರಾನ್...

ಯುಗಾದಿ ಹೊಸತೊಡಕು ಜೋರು: ಮಾಂಸದಂಗಡಿ ಮುಂದೆ ಕ್ಯೂ ನಿಂತ ಜನರು!

ಯುಗಾದಿ ಹೊಸತೊಡಕು ಜೋರು: ಮಾಂಸದಂಗಡಿ ಮುಂದೆ ಕ್ಯೂ ನಿಂತ ಜನರು! ಬೆಂಗಳೂರು: ಯುಗಾದಿ...