ಅಧಿಕಾರಿಗಳಿಗೆ ಧಮ್ಕಿ ಹಾಕಿ ನೋಟಿಸ್ ಕೊಡಿ ಜಮೀರ್ ಹೇಳ್ತಿದ್ದಾರೆ: ಯತ್ನಾಳ್ ಆರೋಪ
ಬೆಂಗಳೂರು: ಅಧಿಕಾರಿಗಳಿಗೆ ಧಮ್ಕಿ ಹಾಕಿ ನೋಟಿಸ್ ಕೊಡಿ ಜಮೀರ್ ಹೇಳ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡುಗೆ ಅವರು ಧಮ್ಕಿ ಹಾಕುತ್ತಿದ್ದಾರೆ. ನಾವು ಅಭಿಯಾನ ಮಾಡಿ ಮಾಹಿತಿ ಪಡೆದು JPCಗೆ ವರದಿ ಕೊಡ್ತೀವಿ. ಜನಜಾಗೃತಿಗಾಗಿ ಈ ಅಭಿಯಾನ ಮಾಡ್ತಿದ್ದೇವೆ.
ರಾಜ್ಯ, ಕೇಂದ್ರ ಸರ್ಕಾರ ಎರಡಕ್ಕೂ ನಾವು ಈ ಒತ್ತಾಯ ಮಾಡ್ತಿದ್ದೇವೆ. ಜಮೀರ್ ಬಂದು ಭಾಷಣ ಮಾಡ್ತಾರೆ. ಸೌತಾನ್ ಅಂತ ಮಾತಾಡಿ ಪ್ರಚೋದನೆ ಮಾಡ್ತಾರೆ. ಅಧಿಕಾರಿಗಳಿಗೆ ಧಮ್ಕಿ ಹಾಕಿ ನೋಟಿಸ್ ಕೊಡಿ ಜಮೀರ್ ಹೇಳ್ತಿದ್ದಾರೆ. ಅಧಿಕಾರಿಗಳು ಭಯ ಬಿದ್ದಿದ್ದಾರೆ. ಹೀಗಾಗಿ, ಕೇಂದ್ರದ ನಿರ್ಧಾರ ಆಗೋವರೆಗೂ ನೀವು ಯಾವುದೇ ದಾಖಲಾತಿ ಮಾಡಬೇಡಿ ಅಂತಾ ಅಧಿಕಾರಿಗಳಿಗೆ ಸೂಚನೆ ಕೊಟ್ಡಿದ್ದೇವೆ ಎಂದು ತಿಳಿಸಿದರು.






