ಅಪ್ಪ ಬೈತಾರಂತ ಪೀಸ್​ ಪೀಸ್ ಮಾಡಿದ ಮಗ..!

Date:

ಮಕ್ಕಳಿಗೆ ತಂದೆ-ತಾಯಿ ಬೈಯುವುದು, ತುಂಬಾ ಚಿಕ್ಕ ಮಕ್ಕಳು ಎಂದಾದರೆ ಹೊಡೆಯುವುದು ಸಹ ಸಾಮಾನ್ಯವೇ. ಆದರೆ, ಇಲ್ಲೊಬ್ಬ ಮಗ ತನ್ನ ತಂದೆ ತನಗೆ ಬೈತಾರೆ ಎಂದು ಪೀಸ್​ ಪೀಸ್ ಮಾಡಿದ್ದಾನೆ.
ಅಮನ್ ಎನ್ನುವ 22 ವರ್ಷದ ಯುವಕ ತಂದೆಯನ್ನು ಕೊಲೈಗೈದ ಆಸಾಮಿ. ನನಗೆ ತಂದೆ ದಿನ ನಿತ್ಯ ಬೈಯುತ್ತಾರೆ ಎಂದು ಕೊಲೆ ಮಾಡಿ 25 ಪೀಸ್​ ಮಾಡಿ ಬ್ಯಾಗಿನಲ್ಲಿ ತುಂಬಿಸಿದ್ದಾರೆ. ಇದು ನಡೆದಿರುವುದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ.
ಅಮನ್​ ತಂದೆ 48 ವರ್ಷದ ಸಂದೇಶ್ ಅಗರ್ ವಾಲ್ ಅವರು ಮಗನಿಂದಲೇ ಕೊಲೆಯಾದ ಮೃತ ದುರ್ದೈವಿ ತಂದೆ. ಅಮನ್​ ಅಪ್ಪ ಬೈಯುತ್ತಾರೆ ಎಂದು ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದ್ದು, ವಿಷಯ ತಿಳಿಯುತ್ತಿದ್ದಂತೆ ಪೂರ್ವ ದೆಹಲಿಯ ಪೊಲೀಸರು ಶಾದಾರಾದಲ್ಲಿ ಅಮನನ್ನು ಅರೆಸ್ಟ್ ಮಾಡಿದ್ದಾರೆ. ಅಮನ್ ತಾನು ತಂದೆಯನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.


ದೇಹವನ್ನು 25 ಪೀಸ್ ಮಾಡಿದ್ದೆ ಬ್ಯಾಗ್​ನಲ್ಲಿ ತುಂಬಿ ಬೇರೆ ಕಡೆ ಎಸೆಯಲು ಪ್ಲಾನ್ ಮಾಡಿದ್ದೆ ಎಂದೂ ಸಹ ಅಮನ್ ಹೇಳಿಕೊಂಡಿದ್ದಾನೆ. ಆದರೆ ಅಮನ್ ಅವರ ಸಹೋದರ, ಸಂದೇಶ್​ ಕುಮಾರ್ ಅವರ ಸಹೋದರನ ಆರೋಪವೇ ಬೇರೆ. ಅಮನ್ ಆಸ್ತಿಗಾಗಿ ಸಂದೇಶ್​ ಕುಮಾರ್​ ಅವರನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಕೊಲೆಯಲ್ಲಿ ಅಮನ್ ತಾಯಿ ಮತ್ತು ಒಡಹುಟ್ಟಿದವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸ್ ತನಿಖೆಯಿಂದಷ್ಟೇ ಎಲ್ಲವೂ ಬಯಲಾಗಬೇಕಿದೆ.

Share post:

Subscribe

spot_imgspot_img

Popular

More like this
Related

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ! ನವದೆಹಲಿ:- ದೇಶದಲ್ಲಿ ಪ್ರತಿ...

ಇಂಗ್ಲೀಷ್, ಹಿಂದಿ ಭಾಷೆಗಳ ದಾಳಿಯಿಂದ ಕನ್ನಡ‌‌ ಕಾಪಾಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್

ಇಂಗ್ಲೀಷ್, ಹಿಂದಿ ಭಾಷೆಗಳ ದಾಳಿಯಿಂದ ಕನ್ನಡ‌‌ ಕಾಪಾಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಇಡೀ...

ಆಂಧ್ರದ ಶ್ರೀಕಾಕುಳಂನಲ್ಲಿ ಕಾಲ್ತುಳಿತ: ದೇವರ ದರ್ಶನಕ್ಕೆ ಬಂದ 9 ಭಕ್ತಾದಿಗಳ ಸಾವು

ಆಂಧ್ರದ ಶ್ರೀಕಾಕುಳಂನಲ್ಲಿ ಕಾಲ್ತುಳಿತ: ದೇವರ ದರ್ಶನಕ್ಕೆ ಬಂದ 9 ಭಕ್ತಾದಿಗಳ ಸಾವು ಆಂಧ್ರಪ್ರದೇಶದ...

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಣ ಹವೆ! ಆದ್ರೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಣ ಹವೆ! ಆದ್ರೆ ಬೆಂಗಳೂರಿನಲ್ಲಿ ಮೋಡ ಕವಿದ...