ಲೋಕಸಭಾ ಚುನಾವಣೆ ದಿನಾಂಕ ನಿಗಧಿಯಾಗಿದ್ದು, ರಾಜಕೀಯ ಪಕ್ಷಗಳನ್ನು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧರಾಗುತ್ತಿವೆ. ಕೆಲವು ಕಡೆಗಳಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ. ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅವರ ಹೆಸರನ್ನು ಮಾಜಿ ಪ್ರಧಾನಿ ದೇವೇಗೌಡರು ಅಧಿಕೃತವಾಗಿ ಪ್ರಕಟಿಸಿದರು.
ಪ್ರಜ್ವಲ್ ರೇವಣ್ಣ ಅವರ ಪ್ರಚಾರ ಸಭೆ ಅಪ್ಪ, ಮಗ ಮತ್ತು ಮೊಮ್ಮನ ಕಣ್ಣೀರಧಾರೆಗೆ ಸಾಕ್ಷಿಯಾಯಿತು. ನಾನು ಕುಟುಂಬ ರಾಜಕಾರಣ ಮಾಡುವುದಿಲ್ಲ ಎಂದು ದೇವೇಗೌಡರು ಕಣ್ಣೀರು ಇಟ್ಟರು. ಬಳಿಕ ಸಭೆಯಲ್ಲಿದ್ದ ರೇವಣ್ಣ ಕೂಡ ಅತ್ತರು. ತಾತಾ ದೇವೇಗೌಡರು ತನ್ನ ಹೆಸರನ್ನು ಅಧಿಕೃತವಾಗಿ ಹೇಳಿದಾಗ ಪ್ರಜ್ವಲ್ ರೇವಣ್ಣ ಅವರಿಗೂ ಆನಂದಭಾಷ್ಪ ಬಂತು. ಹೀಗೆ ಹಾಸನದಲ್ಲಿ ಕಣ್ಣೀರಿಟ್ಟರು ದೇವೇಗೌಡ್ರು, ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ.
ಅಪ್ಪ, ಮಗ, ಮೊಮ್ಮಗ ಒಟ್ಟಿಗೇ ಅತ್ತರು..!
Date: