ಅಬ್ಬಾ!ಅಪ್ಪು ಸದ್ದಿಲ್ಲದೇ ಮಾಡುತ್ತಿದ್ದ ಸಮಾಜಸೇವೆ ಒಂದೆರಡಲ್ಲ

Date:

ತೆರೆಯ ಮೇಲೆ ನಾಯಕನಾಗಿ ಮಿಂಚಬಹುದು. ಆದರೆ ಅದೇ ಆದರ್ಶವನ್ನು ನಿಜಜೀವನದಲ್ಲಿ ಅಳವಡಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೆ ನಮ್ಮನ್ನು ಅಗಲಿದ ನಟ ಪುನೀತ್‌ ರಾಜ್‌ಕುಮಾರ್‌ ನಿಜಜೀವನದಲ್ಲಿಯೂ ನಾಯಕನೇ ಆಗಿದ್ದರು. ಹೆಚ್ಚು ಪ್ರಚಾರ ಬೇಡವೇ, ಮೌನವಾಗಿ ಇವರು ಮಾಡುತ್ತಿದ್ದ ಸಮಾಜ ಸೇವೆಗೆ ಲೆಕ್ಕವೇ ಇಲ್ಲದಷ್ಟು.

 

ಇವೆಲ್ಲಾ ಈಗ ಬೆಳಕಿಗೆ ಬಂದಿವೆ.

ಸದ್ಯ 26 ಅನಾಥಾಶ್ರಮ 45 ಉಚಿತ ಶಾಲೆ 16 ವೃದ್ಧಾಶ್ರಮ 19 ಗೋಶಾಲೆ ಇಷ್ಟೆಲ್ಲಾ ತಮ್ಮ ಖರ್ಚಿನಲ್ಲಿ ನಡಿಸಿಕೊಂಡು ಸುಮಾರು ವರ್ಷಗಳಿಂದ ಬರುತ್ತಿದ್ದರು. ಇಷ್ಟೇ ಅಲ್ಲದೇ, ‌ಸಿನಿಮಾದಿಂದ ಪಡೆದ ಸಂಭಾವನೆಯ ಒಂದು ಭಾಗವನ್ನು ವೃದ್ಧಾಶ್ರಮಗಳಿಗೆ ವಿನಿಯೋಗಿಸಿದ್ದರು ಎನ್ನಲಾಗಿದೆ. ಕೆಲವು ಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿ ಇವರು ಹಾಡಿದ್ದು, ಅದರಿಂದ ಬಂದಿರುವ ಸಂಭಾವನೆಯನ್ನು ಕೂಡ ಸಮಾಜ ಸೇವೆಗೆ ವಿನಿಯೋಗಿಸುತ್ತಿದ್ದರು.

ಇಷ್ಟಕ್ಕೇ ಇವರ ಸೇವೆ ನಿಂತಿರಲಿಲ್ಲ. ಬದಲಿಗೆ ಸುಮಾರು 1800 ಮಕ್ಕಳ ಸಂಪೂರ್ಣ ಶಿಕ್ಷಣವನ್ನು ಇವರು ವಹಿಸಿಕೊಂಡಿದ್ದರು. ಮೈಸೂರಿನಲ್ಲಿರುವ ಶಕ್ತಿ ಧಾಮ ಹೆಸರಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ವ್ಯವಸ್ಥೆ ನೋಡಿಕೊಳ್ಳುತ್ತಿದುದು ಇದೇ ನಟ. ಈ ಮೂಲಕ ಯಾವ ನಟರೂ ಮಾಡದ ಅದ್ಭುತ ಎನಿಸುವ ಸಮಾಜ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಪುನೀತ್‌.

ಇವರು ನಟಿಸಿದ್ದ ‘ರಾಜಕುಮಾರ’ ಚಿತ್ರದ ಒಟ್ಟಾರೆ ಸಂದೇಶ ಹೆತ್ತವರನ್ನು ಪ್ರೀತಿಸಬೇಕು. ವೃದ್ಧಾಶ್ರಮಗಳಗೆ ಕಳಿಸಬಾರದು ಎಂದಿತ್ತು. ಸೂಪರ್‌ಹಿಟ್‌ ಆಗಿದ್ದ ಈ ಚಿತ್ರದಂತೆಯೇ ತಮ್ಮ ಬದುಕಿನುದ್ದಕ್ಕೂ ನಡೆದುಕೊಂಡವರು ಈ ರಾಜಕುಮಾರ. ಆದರೆ ಈ ಬಗ್ಗೆ ಪ್ರಚಾರ ಬಯಸದೇ, ಎಲ್ಲಿಯೂ ಬಹಿರಂಗವಾಗಿ ಸೇವೆಯ ಕುರಿತು ಹೇಳಿಕೊಳ್ಳದ್ದು ಇವರ ವಿಶೇಷತೆ.

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...