ಸುಮಲತಾ ಪರ ಪ್ರಚಾರಕ್ಕೆ ನಿಂತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಮಂಡ್ಯದಲ್ಲಿ ಘರ್ಜಿಸಿದ್ದಾರೆ. ಯಾರು ಏನೇ ಅಂದರು ಅದಕ್ಕೆ ತಲೆ ಕೆಡಿಸಿಕೊಳ್ಳಲ್ಲ….ಸುಮಲತಾ ಅವರ ಜೊತೆಗೆ ಇರುತ್ತೇವೆ ಎಂದರು.
ಬೇರೆ ಅವರು ಮಾತಿಗೆ ಮತದಾನದ ಮೂಲಕ ಉತ್ತರ ಕೊಡೋಣ. ಅಭಿಮಾನಿಗಳು ಒಮ್ಮೆ ಪಂಚೆ ಕಟ್ಟಿ ತೋರಿಸಿದ್ರೆ ಏನಾಗುತ್ತೆ ಅಂತ ಉತ್ತರ ಕೊಡೋಣ ಆಗ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಕರೆ ನೀಡಿದರು.
ತನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ಟಾಂಗ್ ಕೊಟ್ಟ ದರ್ಶನ್, ನಾನು ಮಾಡಿದ್ದು ಆಯ್ತು,ಅನುಭವಿಸಿದ್ದೂ ಆಯ್ತು…ನಾನು ಅಷ್ಟೊಂದು ಒಳ್ಳೆಯವನಾಗಿದ್ದರೆ ದೇವರಾಗುತ್ತಿದ್ದೆ . ಟೀಕೆ ಮಾಡುವವರ ಬಗ್ಗೆ ಕೋಪನೂ ಇಲ್ಲ, ಬೇಜಾರು ಇಲ್ಲ ಅವರಿಗೆ ಏನೂ ಹೇಳಲ್ಲ ಎಂದು ಪ್ರೀತಿಯಿಂದ ಛಾಟಿ ಮುಟ್ಟಿ ನೋಡಿಕೊಳ್ಳೋ ರೀತಿಯಲ್ಲಿ ಛಾಟಿ ಬೀಸಿದರು.
ಸೇರಿದ್ದ ಅಭಿಮಾನಿಗಳಿಗೆ ನಿಮ್ಮ ಪ್ರೀತಿಗೆ ಋಣಿ..ರಕ್ತದಲ್ಲಿ ನಿಮ್ಮ ಕಾಲು ತೊಳೆದರೂ ಕಡಿಮೆ. ನೀವು ಅಂಬಿ ಅವರ ಮೇಲಿನ ಅಭಿಮಾನದಿಂದ ಉರಿಬಿಸಲಲ್ಲಿ ಬಂದಿದ್ದೀರ ಅಂದರು.
ಅಭಿಮಾನಿಗಳು ಪಂಚೆ ಕಟ್ಟಿ ಉತ್ತರ ಕೊಡಬೇಕು ಎಂದ ಸಾರಥಿ…..ರಕ್ತದಲ್ಲಿ ಅಭಿಮಾನಿಗಳ ಕಾಲು ತೊಳೆದರೂ ಕಡಿಮೆಯೇ ಎಂದಿದ್ದೇಕೆ?
Date: