ಅಭಿವೃದ್ಧಿಗೆ ವಿರೋಧಿ ಅಲ್ಲ, ಆದ್ರೆ ಕೆಆರ್‌ಎಸ್ ಅಮ್ಯೂಸ್ಮೆಂಟ್ ಪಾರ್ಕ್‌ಗೆ ನನ್ನ ವಿರೋಧವಿದೆ: ಯದುವೀರ್ ಒಡೆಯರ್!
ಮಂಡ್ಯ:- ಅಭಿವೃದ್ಧಿಗೆ ನಾನೆಂದಿಗೂ ವಿರೋಧಿ ಅಲ್ಲ, ಆದ್ರೆ ಕೆಆರ್‌ಎಸ್ ಅಮ್ಯೂಸ್ಮೆಂಟ್ ಪಾರ್ಕ್‌ಗೆ ನನ್ನ ವಿರೋಧವಿದೆ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಾನು ಅಭಿವೃದ್ಧಿಗೆ ವಿರೋಧಿ ಅಲ್ಲ. ಅಭಿವೃದ್ಧಿಯೂ ಬೇಕು, ಆದರೆ ಕೆಆರ್‌ಎಸ್‌ನಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಹೆಸರಿನಲ್ಲಿ ಬೇಡ. ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಜಾಗಗಳು ಇವೆ. ಕೆಆರ್‌ಎಸ್ ಹೊರತುಪಡಿಸಿ ಸೂಕ್ತ ಜಾಗದಲ್ಲಿ ರೈತರ ಅಭಿಪ್ರಾಯಗಳನ್ನು ಪರಿಗಣಿಸಿ, ಅಮ್ಯೂಸ್ಮೆಂಟ್ ಪಾರ್ಕ್ ಮಾಡುವುದು ಒಳ್ಳೆಯದು ಎಂದಿದ್ದಾರೆ.
ಕೆಆರ್‌ಎಸ್ ನಿರ್ಮಾಣವಾಗಿ 100 ವರ್ಷಗಳು ತುಂಬುತ್ತಿವೆ. ಹೀಗಾಗಿ ಡ್ಯಾಂ ಸೇಫ್ಟಿಗೆ ನಾವೆಲ್ಲರೂ ಮೊದಲ ಆದ್ಯತೆ ಕೊಡಬೇಕಿದೆ. ಕೆಆರ್‌ಎಸ್ ಸುತ್ತಮುತ್ತಲು ನೈಸರ್ಗಿಕವಾದ ಪ್ರಕೃತಿ ತುಂಬಾ ಚೆನ್ನಾಗಿ ಇದೆ. ಸದ್ಯ ಈಗಲೇ ಸಾವಿರಾರು ಸಂಖ್ಯೆಯಲ್ಲಿ ಜನರು ಕೆಆರ್‌ಎಸ್‌ಗೆ ಬರುತ್ತಾರೆ. ಅವರಿಗೆ ಮೂಲಭೂತ ಸೌಕರ್ಯ ನೀಡಿದರೆ ಸಾಕಾಗಿದೆ ಎಂದು ಹೇಳಿದ್ದಾರೆ.