ಅಮೆರಿಕಾದಲ್ಲಿ ಡಾಕ್ಟರ್, ಭಾರತದಲ್ಲಿ ರೈತ
ಡಾ. ಹರಿನಾಥ್ ಕಸಿಗಣೇಸನ್. ದೊಡ್ಡ ವಿಜ್ಞಾನಿ. ಮೂಲತಃ ತಮಿಳುನಾಡಿನವರು.ಕೆಲ ವರ್ಷಗಳ ಹಿಂದೆಯಷ್ಟೇ ಈ ವಿಜ್ಞಾನಿ ಅಮೆರಿಕಾದಲ್ಲಿ ದೊಡ್ಡ ಕೆಲಸದಲ್ಲಿ ಇದ್ರು. ಕೈ ತುಂಬಾ ಸಂಬಳ. ಸುಖಕರ ಜೀವನ. ಪ್ರತಿದಿನ ಹೊಸತನವನ್ನು ಹೊಸ ಹೊಸ ವಿಷಯ ಗಳ ಬಗ್ಗೆ ಆವಿಷ್ಕಾರ ಮಾಡುತ್ತಾ ದೊಡ್ಡ ಹೆಸರು ಮಾಡಿದ್ದರು.
ಈ ವಿಜ್ಞಾನಿ ಈಗ ಅಪ್ಪಟ ಕೃಷಿಕರಾಗಿದ್ದಾರೆ. ಅಲ್ಲದೆ, ಅಂದಿನ ಜೀವನಕ್ಕೂ ಇಂದಿನ ಜೀವನಕ್ಕೂ ತುಂಬಾನೇ ವ್ಯತ್ಯಾಸವಿದೆ. ತಮಿಳುನಾಡು ಬಾರ್ಡರ್ ನಲ್ಲಿರುವ ಪೆನ್ನಗರಮ್ ಎಂಬ ಹಳ್ಳಿಯತ್ತ ಹೋದರೆ ಉಳಿದ ರೈತರ ಹೊಲಗಳ ಜೊತೆಗೆ ಡಾ. ಹರಿನಾಥ್ ಅವರ ಜಮೀನು ಕೂಡ ಕಾಣಸಿಗುತ್ತದೆ.
ಡಾ. ಹರಿನಾಥ್ ಅವರನ್ನು ಶಿಕ್ಷಕಿಯಾಗಿದ್ದ ತಾಯಿ ತುಂಬಾ ಕಷ್ಟದಿಂದ ಮಗನನ್ನು ಬೆಳೆಸಿದರು. ಕಾಡಿನ ಸಮೀಪವಿದ್ದ ಮನೆ, ಶಿಕ್ಷಕ ವೃತ್ತಿಯ ಜೊತೆಗೆ ಸಾಂಪ್ರದಾಯಿಕ ವ್ಯವಸಾಯ ಮಾಡುತ್ತಿದ್ದ ಕುಟುಂಬದಲ್ಲಿ ಹರಿನಾಥ್ ಬೆಳೆದರು. ಆಗಲೇ ಕೃಷಿಯತ್ತ ಬಹಳ ಆಸಕ್ತಿ ಇತ್ತು. ಮುಂದೆ ಚೆನ್ನೈಯಲ್ಲಿ ಉನ್ನತ ಪದವಿ ಪಡೆದರು.
ಮುಂದೆ ಡಾ. ಹರಿನಾಥ್ ಜಾಬ್ ಜರ್ನಿ ಶುರುವಾಯಿತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಸಂಶೋಧಕರಾಗಿ ಉದ್ಯೋಗ ಶುರುವಾಯಿತು. ಇನ್ನು ಹರಿನಾಥ್ ಅವರು ಡಿಆರ್ ಡಿಓದಲ್ಲಿ ಸಂಶೋಧಕರಾಗಿದ್ದಾಗ ಅಮೆರಿಕಾದ ಕೆರೋಲಿನಾದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಂಶೋಧನಾ ಕಾರ್ಯಕ್ಕೆಂದು ತೆರಳಬೇಕಾಯಿತು. ಕನಿಷ್ಠ ಒಂದು ವರ್ಷದ ರಜೆಯ ಅವಶ್ಯಕತೆ ಇತ್ತು.
ಅದು, ಡಾ.ಎಪಿಜೆ ಅಬ್ದುಲ್ ಕಲಾ ರಾಷ್ಟ್ರಪತಿಯಾಗಿದ್ದ ಕಾಲ. ಸಂಶೋಧಕರಾಗಿ ಬಹಳ ಚುರುಕಾಗಿ ಕೆಲಸ ಮಾಡುತ್ತಿದ್ದ ಹರಿನಾಥ್ ಬಗ್ಗೆ ಡಾ. ಕಲಾಂ ಅವರಿಗೆ ಮೊದಲೇ ಗೊತ್ತಿತ್ತು. ಎರಡು ವರ್ಷಗಳ ರಜೆ ಮಂಜೂರು ಮಾಡುವ ಮೊದಲು ಅವರು ಹರಿನಾಥ್ ಅವರಿಗೆ ಒಂದು ಮಾತು ಹೇಳಿದ್ದರಂತೆ. ಅದೇನೆಂದರೆ, ಅಮೆರಿಕಾದಲ್ಲಿ ನಿಲ್ಲಬೇಡ, ಮರಳಿ ಭಾರತಕ್ಕೆ ಬಾ. ಹುಟ್ಟಿದ ದೇಶಕ್ಕೆ ನಿನ್ನ ಸೇವೆ ಸಿಗಲಿ ಅಂತ.
ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಮಾತು, ವಿಚಾರಗಳು ಹರಿನಾಥ್ ಅವರಿಗೆ ಪ್ರೇರಣೆಯಾಯಿತು. ಅದರಂತೆ ಅಮೆರಿಕಾದಲ್ಲಿ ದೊಡ್ಡ ಕೆಲಸದಲ್ಲಿದ್ದರು. ಕೈ ತುಂಬಾ ಸಂಬಳ ಕೂಡ ಇತ್ತು. ಆ ದೇಶದಲ್ಲೂ ದೊಡ್ಡ ಹೆಸರು ಮಾಡಿದ್ದರು. ಆದರೆ, ಅದನ್ನೆಲ್ಲ ತೊರೆದು, ತಮ್ಮ ಕುಟುಂಬ ಮೊದಲು ಮಾಡುತ್ತಿದ್ದ ಕೃಷಿಯನ್ನು ಮತ್ತೆ ಜೀವಂತವಾಗಿರಿಸಲು ಭಾರತಕ್ಕೆ ಮರಳಿ ಬಂದರು.
ಈಗ ಡಾ. ಹರಿನಾಥ್ ರಕ್ಷಣಾ ಕ್ಷೇತ್ರದ ಸಂಶೋಧನೆಗಿಂತ ಕೃಷಿಯಲ್ಲಿ ಸಿದ್ಧಿ ಪಡೆದುಕೊಂಡಿದ್ದಾರೆ. ಇವರ ಕುಟುಂಬವೂ ಕೃಷಿಯಲ್ಲೇ ಮುಳುಗಿದೆ. ಏನೇ ಹೇಳಿ, ಕೃಷಿಯೆಂದು ಅಸಡ್ಡೆ ತೋರುವವರಿಗೆ ವಿಜ್ಞಾನಿ ಡಾ. ಹರಿನಾಥ್ ಅವರೇ ಸ್ಫೂರ್ತಿ ಅಲ್ಲವೇ?
ಅಮೆರಿಕಾದಲ್ಲಿ ಡಾಕ್ಟರ್, ಭಾರತದಲ್ಲಿ ರೈತ
ಹೃದಯದಿಂದ ನಕ್ಕು ಜಗತ್ತನ್ನೂ ನಗಿಸುತ್ತೇನೆಂದು ಸವಾಲೆಸೆದು ಗೆದ್ದ ಸಾಧಕ ..!
ಕಿರಣ್ ಬೇಡಿ ‘ಕ್ರೇನ್ ಬೇಡಿ’ ಆಗಿದ್ದೇಗೆ?
ಈ ಊರಲ್ಲಿ 12ವರ್ಷದ ಹುಡುಗೀರು ಹುಡುಗರಾಗಿ ಬದಲಾಗ್ತಾರೆ..! ಇದ್ದಕ್ಕಿದ್ದಂಗೆ ಲಿಂಗ ಬದಲಾಗೋ ವಿಚಿತ್ರ ಸ್ಟೋರಿ..!
ನೀವು ಸಾಹಸಪ್ರಿಯರಾ..? ಈ ರಸ್ತೆಗಳಲ್ಲಿ ಹೋಗಿ ಬನ್ನಿ!
HIV ಗೆ ಅಂಜದ ಕುಗ್ಗದ ನಾರಿಯ ಸಾರ್ಥಕ ಬದುಕಿನ ಸ್ಟೋರಿ ..!
ಇದೊಂದು ಸ್ಫೂರ್ತಿದಾಯಕ ಮತ್ತು ಭಾವನಾತ್ಮಕ ನೈಜ ಕಥೆ..! ಅವತ್ತು ಗ್ಯಾಂಗ್ ಸ್ಟರ್ ಇವತ್ತು ಸಾಮಾಜಿಕ ಕಾರ್ಯಕರ್ತ..!
ಮಹಿಳೆಯಿಲ್ಲದೆ ಈ ದೇವಾಲಯಕ್ಕೆ ಪುರುಷ ಬರುವಂತಿಲ್ಲ.!
ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?
..ವಾಟ್ಸ್ ಆ್ಯಪ್ ನಲ್ಲಿ ಕ್ವಾಲಿಟಿ ಹಾಳಾಗದಂತೆ ಫೋಟೋ ಕಳುಹಿಸೋದು ಹೇಗೆ ಗೊತ್ತಾ?
ಇಂಗ್ಲಿಷ್ ಬರದವರು ಇಂಗ್ಲೆಂಡ್ನಲ್ಲಿ ಸಿಇಒ ಆಗಿದ್ದು ಹೇಗೆ?
ಆ ಊರಲ್ಲಿ 47 ಕುಟುಂಬ, 47 ಮಂದಿ ಐಎಎಸ್..!
ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಯಾವ್ದು ಗೊತ್ತಾ? ರಾಕಿಭಾಯ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸ್ಟಾರ್ ಡೈರೆಕ್ಟರ್…!
ಭಾರತೀಯ ಮೂಲದ ‘ಧ್ರುವತಾರೆ’ ವಿಶ್ವಕ್ಕೆ ಸ್ಫೂರ್ತಿಯ ಸೆಲೆ..!
ವೃದ್ಧರನ್ನು ತಂದೆ-ತಾಯಿಯಂತೆ ಕಾಣುವ ಈ ಡಾಕ್ಟರ್ ಬಡವರ ದೇವರು!
ಭಾರತದ ‘ಪಬ್ ಕ್ಯಾಪಿಟಲ್’ ಯಾವ್ದು ಗೊತ್ತಾ..?
ವಿಶ್ವಕ್ಕೆ ಭಾರತ ಏನೆಲ್ಲಾ ಪರಿಚಯಿಸಿದೆ ..? ಕೆಲವು ಆಟಗಳು, ಸಂಗತಿಗಳು ಇಲ್ಲಿವೆ ..!
ಇದು ನೀವೆಲ್ಲೂ ಕೇಳಿರದ ನಾವಿಕನ ಯಶೋಗಾಥೆ.. ಓದ್ಲೇಬೇಕು!
ಅವಳ ಮನಸ್ಸಲ್ಲಿ ಪ್ರೀತಿ ಇದೆಯಾ? ಐದು ಸುಳುಹುಗಳನ್ನು ಓದಿ, ಥಟ್ ಅಂತ ತಿಳಿದುಕೊಳ್ಳಿ!
ಜಗತ್ತು ಕಂಡ ಕ್ರೂರಿಗೂ ಲವ್ ಆಗಿತ್ತು ..! ಹಿಟ್ಲರ್ ನ ಇಂಟ್ರೆಸ್ಟಿಂಗ್ ಲವ್ ಸ್ಟೋರಿ
ಅವಳ ಮನಸ್ಸಲ್ಲಿ ಪ್ರೀತಿ ಇದೆಯಾ? ಐದು ಸುಳುಹುಗಳನ್ನು ಓದಿ, ಥಟ್ ಅಂತ ತಿಳಿದುಕೊಳ್ಳಿ!
ಮಹಾಭಾರತ, ಮಾಲ್ಗುಡಿ ಡೇಸ್ – ಕನ್ನಡ ಕಿರುತೆರೆ ವೀಕ್ಷಕರಿಗೆ ಡಬಲ್ ಧಮಾಕಾ?
ನೀನಿದ್ದರೆ ಮಾತ್ರ ಬದುಕು ಎಂಬ ಹುಚ್ಚು ಭ್ರಮೆಯಿಲ್ಲ. ಆದರೆ, ನೀ ಸಿಗದೇ ಬಾಳೊಂದು ಬಾಳೇ?
ನಾನೇ ಯಾಕೆ ಪ್ರಪೋಸ್ ಮಾಡ್ಬೇಕು? ಅವ್ಳು ಯಾಕೆ ಮಾಡಲ್ಲ?
ಬಿಟ್ಟು ಹೋಗದಿರು ಗೆಳತಿ ಹಳೆಯ ನೆನಪುಗಳ ಉಳಿಸಿ.
ಸೋತು ಸುಮ್ಮನಾಗುವೆ ಹುಡುಗಾ… ಒಮ್ಮೆ ಮಾತನಾಡಿಸು ಬಾ!
ಮುಗಿಯದ ಸ್ನೇಹ : ಗ್ಯಾಂಗ್ ಆಫ್ ತ್ರೀ ಗರ್ಲ್ಸ್
ತರಕಾರಿ ಮಾರಿ ಆಸ್ಪತ್ರೆ ಕಟ್ಟಿಸಿದ ಛಲಗಾತಿ!
ಪುಟ್ಟಕೋಣೆಯಲ್ಲಿ ಬದುಕು ಸವೆಸಿದ ಬಾಲಕ ದೇಶದ ಪ್ರತಿಷ್ಠಿತ ಕಂಪನಿ ಸಂಸ್ಥಾಪಕ..!