ಅರಮನೆ ಮೈದಾನ ಸುತ್ತ ಸಂಚಾರ ಮಾರ್ಗ ಬದಲಾವಣೆ

Date:

ಬೆಂಗಳೂರು: ನಗರದ ಕಂಬಳ ವೀಕ್ಷಣೆಗೆ ಲಕ್ಷಾಂತರ ಜನರು ಆಗಮಿಸುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರು ಸಂಚಾರ ಮಾರ್ಗ ಬದಲಾವಣೆಯ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಬೆಂಗಳೂರಲ್ಲಿ ಆಯೋಜಿಸಲಾದ ಕಂಬಳ ವೀಕ್ಷಣೆಗೆ ಬರುವವರ ಪ್ರವೇಶ ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳ ವ್ಯವಸ್ಥೆ ಮಾಡಲಾಗಿದೆ. ಸಿಬಿಡಿ ಏರಿಯಾ, ಮೇಖ್ರಿ ಸರ್ಕಲ್ ಬಳಿಯಿಂದ ಬರುವ ವಾಹನಗಳಿಗೆ ಗೇಟ್ ನಂ.1 ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಹೆಬ್ಬಾಳ, ಮೇಖ್ರಿ ಸರ್ಕಲ್ ಅಂಡರ್ ಪಾಸ್, ಯಶವಂತಪುರ ಕಡೆಯಿಂದ ಬರುವ ವಾಹನಗಳಿಗೆ ಗೇಟ್ ನಂ.1 ರ ಮೂಲಕ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಕ್ಯಾಬ್ನಲ್ಲಿ ಬರುವವರು ಗೇಟ್ ನಂಬರ್ 2ರ ಮೂಲಕ ಪ್ರವೇಶಿಸಬೇಕು. ಗೇಟ್ ನಂಬರ್ 3ರ ಮೂಲಕ ಕ್ಯಾಬ್ಗಳು ನಿರ್ಗಮಿಸಬೇಕಾಗಿದೆ.

ಅರಮನೆ ರಸ್ತೆ, ಬಿಡಿಎ ಜಂಕ್ಷನ್ನಿಂದ ಚಕ್ರವರ್ತಿ ಲೇಔಟ್ ಸೇರಿದಂತೆ ವಸಂತನಗರ ಅಂಡರ್ ಪಾಸ್ನಿಂದ ಹಳೇ ಉದಯ ಟಿವಿ ಜಂಕ್ಷನ್ವರೆಗೆ ಎಂ.ವಿ ಜಯರಾಂ ರಸ್ತೆ ಬಳಸುವಂತೆ ಸೂಚಿಸಿದ್ದಾರೆ.
ಮೇಖ್ರಿ ವೃತ್ತದಿಂದ LRDE ಜಂಕ್ಷನ್ವರೆಗೆ ಬಳ್ಳಾರಿ ರಸ್ತೆ ಬಳಸಬೇಕು. ಅರಮನೆ ರಸ್ತೆಯಲ್ಲಿ ಸಂಚರಿಸುವವರು ಜಯಮಹಲ್ ರಸ್ತೆ ಬಳಸಬೇಕು. ಪ್ಯಾಲೆಸ್ ರಸ್ತೆ, ಎಂ.ವಿ.ಜಯರಾಂ ರಸ್ತೆ, ಸಿ.ವಿ.ರಾಮನ್ ರಸ್ತೆ, ವಸಂತ ನಗರ ರಸ್ತೆ, ಜಯಮಹಲ್ ರಸ್ತೆ, ರಮಣ ಮಹರ್ಷಿ ರಸ್ತೆ, ನಂದಿ ದುರ್ಗ ರಸ್ತೆ, ಬಳ್ಳಾರಿ ರಸ್ತೆ, ಮೌಂಟ್ ಕಾರ್ಮಲ್ ರಸ್ತೆ ಬಳಿ ವಾಹನ ನಿಲುಗಡೆಗೆ ನಿರ್ಬಂಧಿಸಲಾಗಿದೆ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌ ಸೇರಿ 70 ಮಂದಿಗೆ ಗೌರವ

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌...

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ ಕಲಬುರಗಿ: ಚಿತ್ತಾಪುರದಲ್ಲಿ ನವೆಂಬರ್...

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ...

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ ಬೆಂಗಳೂರು:...