ಹೆಡ್ ಲೈನ್ ನೋಡಿದಾಗ ಒಂದು ಸಲ ಆಶ್ಚರ್ಯವಾಗಿರಬಹುದು. ಆದರೆ, ಇದು ನೂರಕ್ಕೆ ನೂರು ಸತ್ಯವಾದ ಸುದ್ದಿ. ಬೆಂಗಳೂರಿನ ನ್ಯೂಸ್.
ಡಾಕ್ಟರ್ ನಿರ್ಲಕ್ಷ್ಯದಿಂದ, ಯಡವಟ್ಟಿನಿಂದ ಜೂಲಿ ಎನ್ನುವ ಬೀದಿ ನಾಯಿಯೊಂದು ಮೃತಪಟ್ಟಿದೆ. ಪ್ರಾಣಿಪ್ರಿಯೆ ನೆವಿನಾ ಕಾಮತ್ ಎನ್ನುವವರು ಇದನ್ನು ಸೀರಿಯಸ್ ಆಗಿ ತೆಗೆದುಕೊಂಡು ಡಾಕ್ಟರ್ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ. ಕೇವಲ ಡಾಕ್ಟರ್ ವಿರುದ್ಧ ಮಾತ್ರವಲ್ಲ ಜೂಲಿ ನಾಯಿಯನ್ನು ಸಂತಾನ ಹರಣ ಚಿಕಿತ್ಸೆಗೆ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಸುಷ್ಮಾ ಎಂಟರ್ಪ್ರೈಸಸ್ ಎಂಬ ಎನ್ಜಿಒ ವಿರುದ್ಧವೂ ದೂರು ನೀಡಿದ್ದಾರೆ. ಡಾಕ್ಟರ್ ಮತ್ತು ಎನ್ಜಿಒ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಯಿಗೆ ಸಂತಾನ ಹರಣ ಚಿಕಿತ್ಸೆ ನೀಡುವಾಗ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದಾಗಿ ನಾಯಿ ಮೃತಪಟ್ಟಿದೆ ಎಂಬುದು ದೂರುದಾರರಾದ ನೆವಿನಾ ಕಾಮತ್ ಅವರ ಮಾತು.
ಕೆಲವೊಮ್ಮೆ ಸುಮ್ಮನೇ ಯೋಚನೆ ಮಾಡುತ್ತಾ ಹೋದರೆ ಮನುಷ್ಯರ ಜೀವಕ್ಕೆ ಇರುವ ಬೆಲೆ ಮೂಕಪ್ರಾಣಿಗಳ ಪ್ರಾಣಕ್ಕಿಲ್ಲ. ಇದೇ ಕಾರಣಕ್ಕೆ ಕೆಲವರು ಮನುಷ್ಯತ್ವ ಮರೆತು ಮೆರೆಯುತ್ತಾರೆ. ಅಂತವರಿಗೆ ಶಿಕ್ಷೆ ಆಗಬೇಕು. ನೆವಿನಾ ಕಾಮತ್ ಅಂತವರು ಇಂಥಾ ವಿಚಾರದಲ್ಲಿ ಸ್ಫೂರ್ತಿ.ಮನುಷ್ಯರಿಗೆ ಹೇಗೆ ಬದುಕುವ ಹಕ್ಕಿದೆಯೋ ಅದೇರೀತಿ ಪ್ರಾಣಿಗಳಿಗೂ ಈ ಭೂಮಿ ಮೇಲೆ ಬದುಕುವ ಹಕ್ಕಿದೆ. ಅದನ್ನು ಪ್ರತೊಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಬೀದಿನಾಯಿ ಜೂಲಿ ಸಾವಿಗೆ ಕಾರಣಾಗಿದ್ದಾರೆ ಎನ್ನಲಾದವರ ಮೇಲೆ ಎಫ್ಐಆರ್ ದಾಖಲಾಗಿದ್ದು ಒಳ್ಳೆಯದೇ ಆಗಿದೆ.
ಅರೆರೆ ಇದೇನಿದು ಬೀದಿ ನಾಯಿ ಸತ್ತಿದ್ದಕ್ಕೆ ಡಾಕ್ಟರ್ ವಿರುದ್ಧ ಎಫ್ಐಆರ್..!
Date: