ಮನುಷ್ಯರು ಜಾಸ್ತಿ ನೀರು ಕುಡಿಷ್ಟು ಮೂತ್ರವೂ ಹೆಚ್ಚು ಬಾರಿ ಮಾದಬೇಕು ಇದು ಆರೋಗ್ಯಕರ. ಆದ್ರೆ ಕಲೆವರು ಕೆಲಸದ ಒತ್ತಡದಿಂದಲೋ ಅಥವಾ ಟ್ರಾವಲ್ ಮಾಡ್ತಿದ್ರೆ ಪದೇ ಪದೇ ಮುತ್ರಕ್ಕೆ ಹೋಗುವುದಿಲ್ಲ. ಆದ್ರೆ ಇಂಥಹ ಅಭ್ಯಸಗಳು ಮುಂದೆ ಜೀವಕ್ಕೆ ಆಪತ್ತು ತರುತ್ತೆ.
ಹೌದು.. ಮೂತ್ರಕ್ಕೆ ಅರ್ಜೆಂಟ್ ಆದ ಕೂಡಲೇ ಹೋಗುವುದು ತುಂಬಾ ಒಳಿತು. ಅದನ್ನು ಬಿಟ್ಟು ಕೆಲಸ, ಟ್ರಾವಲ್ ಮಾಡ್ತಿದ್ದೀವಿ ಅಂತಾ ಮೂತ್ರವನ್ನ ತಡೆಹಿಡಿದ್ರೆ ಆರೋಗ್ಯ ಹದಗೆಟ್ಟು ಹೋಗೋದು ಗ್ಯಾರೆಂಟಿ. ದೇಹಕ್ಕೆ ಅಪಾಯ ಹೆಚ್ಚು. ಮೂತ್ರವನ್ನು ತಡೆಹಿಡಿಯುತ್ತಿದ್ದರೆ ಕಿಡ್ನಿಯಲ್ಲಿ ಕಲ್ಲಾಗುತ್ತೆ. ದೇಹದಲ್ಲಿ ಹೆಚ್ಚಿನ ಸೋಡಿಯಂ ಮತ್ತು ಕ್ಯಾಲ್ಶಿಯಂ ಉತ್ಪತ್ತಿಯಾಗಿ ಕಿಡ್ನಿ ಸ್ಟೋನ್ಗೆ ಕಾರಣವಾಗುತ್ತದೆ. ಇದು ವಿಪರೀತ ಎನ್ನುವಷ್ಟು ಹೊಟ್ಟೆನೋವು ತರುತ್ತದೆ. ಅಷ್ಟೇ ಅಲ್ಲಾ ಮೂತ್ರಕೋಶದಲ್ಲಿ ಕೇವಲ 15 ಔನ್ಸ್ಗಳಷ್ಟು ಮಾತ್ರ ಮೂತ್ರ ಹಿಡಿದಿಡಲು ಸಾಧ್ಯ. ದಿನದಲ್ಲಿ 8 ಗ್ಲಾಸ್ ನೀರು ಕುಡಿದರೆ ಅದರ ಸಾಮರ್ಥ್ಯ 64 ಔನ್ಸ್ ಆಗುತ್ತದೆ. ಇದರ ಕಾಲು ಭಾಗದಷ್ಟನ್ನು ಕಂಟ್ರೋಲ್ ಮಾಡುವ ಸಾಮರ್ಥ್ಯವೂ ಮೂತ್ರಕೋಶಕ್ಕೆ ಇಲ್ಲ. ಹಾಗಾಗಿ ಮೂತ್ರವನ್ನ ಹೆಚ್ಚು ತಡೆ ಹಿಡಿದ್ರೆ ಮೂತ್ರ ವಿಸರ್ಜನೆ ಮಾಡುವಾಗ ಉರಿ ಕಾಣಿಸಿಕೊಳ್ಳುತ್ತೆ. ಮೂತ್ರನಾಳದಲ್ಲಿ ಬ್ಯಾಕ್ಟೀರಿಯಾ ಹೆಚ್ಚಾಗಿ ಅದು ದೇಹಕ್ಕೆ ಹರಡಿ ನಂತರ ಜ್ವರ ಬರುವ ಸಂಭವವಿರುತ್ತೆ. ಇದ್ರಿಂದ ಹೊಟ್ಟೆ ನೋವು, ವಿಪರೀತ ನೋವು, ಆತಂಕ ಮೊದಲಾದ ಸಮಸ್ಯೆಗಳು ಕಾಣಿಸಿಕೊಂಡು ಆರೋಗ್ಯ ಹಾಳು ಮಾಡುತ್ತದೆ.
ಅದೇ ಬ್ಯುಸಿ ಇರಲಿ ಅಥವಾ ಟ್ರಾವಲ್ ಮಾಡುತ್ತಿರಲಿ ಮೂತ್ರಕ್ಕೆ ಅರ್ಜೆಂಟ್ ಆದಾಗ ಹೋದ್ರೆ ಆರೋಗ್ಯ ಚನ್ನಾಗಿ ಇರುತ್ತೆ. ಹೆಚ್ಚಾಗಿ ನೀರು ಕುಡಿದು ಹೆಚ್ಚು ಬಾರಿ ಮೂತ್ರಕ್ಕೆ ಹೋದ್ರೆ ಆರೋಗ್ಯದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ.
ಅರ್ಜೆಂಟ್ ಆದಾಗ ಮೂತ್ರ ಮಾಡಲಿಲ್ಲ ಅಂದ್ರೆ ಖತಂ!
Date: