ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ವಿಚಿತ್ರ..!

Date:

ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ಜಪಾನಿಗರ ಬಾಡಿಗೆ ಪ್ರೀತಿ..!

ಇದು ಮೊದಲೇ ಬಾಡಿಗೆ ಕಾಲ. ಬಾಡಿಗೆ ತಾಯಂದೀರಿಂದ ಹಿಡಿದು ಎಲ್ಲಾ ಬಾಡಿಗೆಗೆ ಸಿಗುತ್ತದೆ. ಆದರೆ ಜಪಾನಿನಲ್ಲಿ ಏನೆಲ್ಲಾ ಬಾಡಿಗೆಗೆ ಸಿಗುತ್ತದೆ ಎಂಬುದನ್ನು ಕೇಳಿದರೆ ನೀವು ಆಶ್ಚರ್ಯವಾಗುತ್ತೀರಿ. ಏಕೆಂದರೆ ಜಪಾನ್ ನಲ್ಲಿ ಬಾಡಿಗೆಗೆ ಸಿಗದ ವಸ್ತುಗಳೇ ಇಲ್ಲ. ಇಷ್ಟಕ್ಕೂ ಜಪಾನ್ ನಲ್ಲಿ ಬಾಡಿಗೆಗೆ ಸಿಗುವ 10 ವಿಚಿತ್ರ ವಸ್ತುಗಳು ಇಲ್ಲಿವೆ ನೋಡಿ.

1. ಜಪಾನ್ ನಲ್ಲಿ ಪಾರ್ಟಿ ಮಾಡೋಕೆ ಸ್ನೇಹಿತರಿಲ್ವಾ..? ಅದಕ್ಕೆ ಚಿಂತೆಯೇ ಬೇಡ. ಅಲ್ಲಿ ಬಾಡಿಗೆಗೆ ಸ್ನೇಹಿತರು ಸಿಗುತ್ತಾರೆ. ಪಾರ್ಟಿ, ಟ್ರಿಪ್ ಅಂತ ಎಂಜಾಯ್ ಮಾಡಬಹುದು. ಆದರೆ ನಿಮ್ಮ ಜೇಬು ಖಾಲಿಯಾಗುತ್ತದಷ್ಟೇ..!

2. ಮಕ್ಕಳಿಗೆ ಹೋಮ್ ವರ್ಕ್ ಮಾಡುವುದು ಕಷ್ಟ. ಅಲ್ಲದೇ ಅದು ತಲೆ ನೋವಿನ ಕೆಲಸವೂ ಹೌದು ಆದರೆ ಜಪಾನ್ ನಲ್ಲಿ ಈ ಚಿಂತೆ ಇಲ್ಲ. ಹೋಮ್ ವರ್ಕ್ ಮಾಡುವವರೂ ಬಾಡಿಗೆಗೆ ಸಿಗುತ್ತಾರೆ.

3. ಮದುವೆ ಸಮಾರಂಭ ಎಂದರೆ ಜನಜಂಗುಳಿ ಇದ್ದರೇನೇ ಚೆಂದ. ಆದರೆ ಹೆಚ್ಚಿನ ಜನರು ಬರದೇ ಹೋದರೆ ಏನು ಮಾಡುವುದು. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ಬಾಡಿಗೆಗೆ ಜನರನ್ನು ಕರೆಸಿದರೆ ಸಾಕು..!

4. ಕೆಲವರಿಗೆ ವಿಚಿತ್ರ ಆಸೆಗಳಿರುತ್ತವೆ. ಹುಡಗಿ(ಗ)ಯ ಜೊತೆ ಕೈ ಕೈ ಹಿಡುದುಕೊಂಡು ಪಾರ್ಕ್ ಸುತ್ತಬೇಕು ಅನ್ನೋ ಆಸೆ ಇರುತ್ತದೆ. ಇನ್ನೂ ಕೆಲವರು ಫಾರಿನ್ ಹುಡುಗ-ಹುಡುಗಿಯರ ಜೊತೆ ಸುತ್ತಬೇಕು ಅನ್ನೋ ಆಸೆ ಇರುತ್ತೆ. ಆದರೆ ಜಪಾನ್ ನಲ್ಲಿ ಇದು ಅತ್ಯಂತ ಸುಲಭ. ಏಕೆಂದರೆ ಅಲ್ಲಿ ಬಾಡಿಗೆಗೆ ಹುಡುಗ-ಹುಡುಗಿಯರು ಸಿಗುತ್ತಾರೆ. ಅಲ್ಲದೇ ಫಾರಿನ್ ಫ್ರೆಂಡ್ಸ್ ಕೂಡಾ ಸಿಗುತ್ತಾರೆ.

5. ಹೊಸ ಕಂಪನಿಗಳಿಗೆ ಜಾಹೀರಾತಿನದ್ದೇ ಚಿಂತೆ. ಎಲ್ಲೆಲ್ಲಿ ಜಾಹೀರಾತು ಹಾಕಿಸಬೇಕು ಎಂಬುದು ಮತ್ತೊಂದು ಚಿಂತೆ. ಆದರೆ ಜಪಾನಿಗರು ಕಾಲು, ಕೈ, ಬೆನ್ನಿನ ಮೇಲೆಯೇ ಜಾಹೀರಾತು ಫಲಕ ಹಾಕಿಕೊಂಡು ಪ್ರಚಾರ ನೀಡುತ್ತಾರೆ.

6. ಛೇ ಎಂಥಾ ಯಡವಟ್ಟಾಯಿತು, ಅವರ ಹತ್ತಿರ ನಾನು ಕ್ಷಮೆ ಕೇಳಬೇಕಲ್ಲ. ಆದರೂ ಮುಖ ತೋರಿಸುವ ಹಾಗಿಲ್ಲವಲ್ಲ ಎಂಬ ಚಿಂತೆ ಇದ್ದರೆ, ಬಾಡಿಗೆಗೆ ಸಾರಿ ಕೇಳುವವರನ್ನು ಕರೆ ತಂದರಾಯ್ತು ಅಷ್ಟೇ. ಹೌದು ಮಾರಾಯ್ರೇ ಜಪಾನಿನಲ್ಲಿ ಇಂಥದ್ದಕ್ಕೂ ಬಾಡಿಗೆ ಮಂದಿ ಸಿಗುತ್ತಾರೆ.

7. ಅಪ್ಪ-ಅಮ್ಮ ಇಲ್ಲ, ಅಣ್ಣ ತಂಗಿಯೂ ಇಲ್ಲ ಎಂಬ ಕೊರಗು ಕೆಲವರಿಗೆ ಕಾಡುತ್ತಲೇ ಇರುತ್ತದೆ. ಆದರೆ ಜಪಾನಿನಲ್ಲಿ ಬಾಡಿಗೆಗೆ ಅಪ್ಪ-ಅಮ್ಮ, ಅಣ್ಣ-ತಂಗಿ ಅಗತ್ಯ ಬಿದ್ದರೆ ಚಿಕ್ಕಪ್ಪ ದೊಡ್ಡಪ್ಪ, ಅಳಿಯ, ಮಾವ, ಅತ್ತೆ, ಸೊಸೆ ಎಲ್ಲರೂ ಸಿಗುತ್ತಾರೆ.

8. ಛೇ.. ಒಂದು ವೆಬ್ ಸೈಟ್ ನಲ್ಲಿ ಹೆಂಡತಿಯರೂ ಬಾಡಿಗೆಗೆ ಸಿಗುತ್ತಾರಂತೆ..!

9. ದುಃಖವಾದಾಗ ಅಳಬೇಕು ಅನ್ನಿಸುತ್ತದೆ. ಆ ಸಮಯದಲ್ಲಿ ಸಾಂತ್ವನ ಹೇಳುವವರೊಬ್ಬರು ಜೊತೆಗಿದ್ದರೆ ಚೆನ್ನಾಗಿತ್ತು ಎನಿಸಿದರೆ, ಅವರೂ ಬಾಡಿಗೆಗೆ ಸಿಗುತ್ತಾರೆ.

10. ಇದೆಲ್ಲಾ ಇರಲಿ, ಒಂದು ಕಂಪನಿ ಒಳ ಉಡುಪುಗಳನ್ನೂ ಬಾಡಿಗೆಗೆ ನೀಡುತ್ತದೆ ಗೊತ್ತಾ..?!

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...