ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!

Date:

ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!

ಪ್ರಯತ್ನ ಬೇಕು ನಿಜ, ಜೊತೆಗೆ ಅದೃಷ್ಟನೂ ಬೇಕು..! ಈ ಲೈಫು ಯಾವಾಗ ಹೆಂಗೆಲ್ಲಾ ಟರ್ನ್ ಆಗುತ್ತಂತ ಹೇಳೋದು ಸಾಧ್ಯನೇ ಇಲ್ಲ ರೀ.! ಕೋಟ್ಯಧಿಪತಿ ಭಿಕ್ಷುಕನಾಗ್ಬಹುದು ,ಭಿಕ್ಷುಕ ಕೋಟ್ಯಧಿಪತಿ ಆಗ್ಬಹುದು..!
ಕೂಲಿ ಒಡೆಯನಾಗಬಹುದು…ಅಂತೆಯೇ ರಾಜು ಜಾದವ್ ಮುಂಬೈ ನಿವಾಸಿ ಕಥೆ..!
ರಾಜು ಜಾದವ್ ಚಿಕ್ಕ ವಯಸ್ಸಲ್ಲಿ ಅಪ್ಪ-ಅಮ್ಮನನ್ನೂ ಕಳೆದು ಕೊಂಡು ಅನಾಥರಾಗ್ತಾರೆ. ತನ್ನ ಆರನೇ ವಯಸ್ಸಲ್ಲಿ ದೂರದ ಸಂಭದಿಕರ ಜೊತೆಗೆ ಮುಂಬೈಯಲ್ಲಿ ವಾಸ..! ಹೊಟ್ಟೆಪಾಡಿಗಾಗಿ ಸಿಗ್ನಲ್ಸ್ ಗಳಲ್ಲಿ ಭಿಕ್ಷೆ ಬೇಡ್ತಾರೆ.. ಒಂದು ವಯಸ್ಸಿನ ನಂತರ ಭಿಕ್ಷೆ ಬೇಡೊದನ್ನು ಬಿಟ್ಟು ಚಿಂದಿ ಆಯ್ದು ಜೀವನ ನಡೆಸ್ತಾರೆ..! ಹೀಗೆ ಚಿಂದಿ ಆಯ್ದು ಹಂಗೋ ಹಿಂಗೋ ಹೊಟ್ಟೆಪಾಡು ನೋಡಿಕೊಳ್ತಿದ್ದ ರಾಜು ಜಾದವ್ ಗೆ ಅದ್ಯಾರೊ ಪುಣ್ಯಾತ್ಮನ ಪರಿಚಯವಾಗುತ್ತೆ..! ಅವನ ಪರಿಚಯವೇ ರಾಜು ಬದುಕಿನ ಮೊದಲ ಟರ್ನಿಂಗ್ ಪಾಯಿಂಟ್.! ಆ ವ್ಯಕ್ತಿಗೆ ರಾಜುನನ್ನು ನೋಡಿ ಅದೇನು ಅನಿಸಿತೋ ಗೊತ್ತಿಲ್ಲ..! ನೀನು ಚಿಂದಿ ಆಯುವುದನ್ನು ಬಿಟ್ಟು ನನ್ನ ಚಹಾ ಅಂಗಡಿಯಲ್ಲಿ ಚಹಾ ಮಾರುತ್ತೀಯಾ ಅಂತ ಕೇಳ್ತಾನೆ..! “ಚಿಂದಿ ಬದುಕು” ಸಾಕಾಗಿದ್ದ ರಾಜುಗೆ ಚಹಾ ಮಾರುವುದೇ ಒಳ್ಳೇದು ಅಂತ ಅನಿಸಿ ತಡಮಾಡದೆ ಕೆಲಸಕ್ಕೆ ಹಾಜುರಾಗಿಯೇ ಬಿಡ್ತಾರೆ..! ಹೀಗೆ ಚಹಾ ಮಾರುತ್ತಿರಬೇಕಾದರೆ ಒಮ್ಮೆ ಒಂದಷ್ಟು ಜನ ಏನೋ ಕಸರತ್ತು ಮಾಡ್ತಾ ಇದ್ದುದನ್ನು ಕಂಡು ತಾನೂ ಆ ಕಸರತ್ತು ಕಲಿಬೇಕೆಂದು ಬಯಸ್ತಾರೆ ರಾಜು ..! ಆ ಕಸರತ್ತಿನ ಹೆಸರು ಮಾರ್ಷಲ್ ಆರ್ಟ್ ಅಂತಾನೂ ರಾಜುಗೆ ಗೊತ್ತಿರಲಿಲ್ಲ..! ಮಾರ್ಷಲ್ ಆರ್ಟ್ ಬಗ್ಗೆ ಆಸಕ್ತಿ ಮೂಡಿದ ಮೇಲೆ ಬಿಡುವಿನ ಸಮಯದಲ್ಲಿ ಅದನ್ನು ಕಲೀತಾರೆ..! ಇವರು ಮಾರ್ಷಲ್ ಆರ್ಟ್ನಲ್ಲಿ ಪ್ರಾವೀಣ್ಯತೆ ಪಡೆಯುವಷ್ಟರಲ್ಲಿ ಒಬ್ಬ ಹುಡುಗ, ನನಗೂ ಮಾರ್ಷಲ್ ಆರ್ಟ್ ಕಲಿಸಿಕೊಡಿ ಅಂತ ಕೇಳಿಕೊಳ್ತಾನೆ..! ಅವತ್ತಿಂದ ರಾಜು ಮಾರ್ಷಲ್ ಆರ್ಟ್ ಟೀಚರ್ ಆಗ್ತಾರೆ..! ಇವತ್ತು ದಿನ ಸಂಜೆ ಸುಮಾರು 70 ಮಂದಿಗೆ ಮಾರ್ಷಲ್ ಆರ್ಟ್ ತರಬೇತಿ ನೀಡುತ್ತಿದ್ದಾರೆ ..! ಅಷ್ಟೊ ಇಷ್ಟೊ ದುಡ್ಡನ್ನೂ ಮಾಡಿಕೊಂಡಿದ್ದಾರೆ..!

 

source : humans of bombay

ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!

ವಿಶ್ವದ ಅತ್ಯಂತ ಹೆಚ್ಚು ಬೆಲೆಯ ಹಣ್ಣು ಯಾವುದು? ಈ ಹಣ್ಣಿನ ಬೆಲೆ 154019.39 ರೂಪಾಯಿಗಳು!

ಮಹೇಶ್ ಬಾಬು ‘ಸರ್ಕಾರಿ ವಾರಿ ಪಾಟ’ ಸಿನಿಮಾದಲ್ಲಿ ನಟಿಸುವ ಸ್ಯಾಂಡಲ್ ವುಡ್ ಸ್ಟಾರ್  ಸುದೀಪ್ ಅಲ್ಲ ..! ಮತ್ಯಾರು?

ಇದು ಬೆಂಗಳೂರಿನ ಉಬರ್ ನಂದಿನಿ ಯಶೋಗಾಥೆ!

ಯಾವ ರಾಶಿ, ನಕ್ಷತ್ರದಲ್ಲಿ ನಡೆಯಲಿದೆ ಸೂರ್ಯಗ್ರಹಣ? ಗ್ರಹಣ ಕಾಲದಲ್ಲಿ ಏನ್ಮಾಡ್ಬೇಕು? ರಾಶಿಗಳ ಫಲಾಫಲಗಳೇನು?

ಸಾಮಾನ್ಯ ಕುಟುಂಬದ ವ್ಯಕ್ತಿ 4ಸಾವಿರ ಕೋಟಿ ಮೌಲ್ಯದ ಕಂಪನಿ ಒಡೆಯ ಆಗಿದ್ದೇಗೆ?

17ನೇ ವಯಸ್ಸಿಗೆ ಕಾಲೇಜು ಡ್ರಾಪ್ಔಟ್; 22ರಲ್ಲಿ ಕೋಟಿ ಕೋಟಿ ಒಡೆಯ!

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...