ಅವನು ಅವಳನ್ನು ಅವೈಡ್ ಮಾಡಿದ್ದು ಅವಳಿಗಾಗಿಯೇ…! ಕೇವಲ 26 ವರ್ಷಕ್ಕೆ ಇಹಲೋಕ ತ್ಯಜಿಸಿದ ಪ್ರೇಮಿ ಕಥೆ..!

Date:

ಅವನು ಅವಳನ್ನು ಅವೈಡ್ ಮಾಡಿದ್ದು ಅವಳಿಗಾಗಿಯೇ…! ಕೇವಲ 26 ವರ್ಷಕ್ಕೆ ಇಹಲೋಕ ತ್ಯಜಿಸಿದ ಪ್ರೇಮಿ ಕಥೆ..!

ಅವನು ಚಿಕ್ಕಂದಿನಿಂದ ಕಷ್ಟದಲ್ಲೇ ಬೆಳೆದ. ಅಪ್ಪ ಅಮ್ಮ ಸಾಲ ಮಾಡಿ ಅವನನ್ನು ಓದಿಸಿದರು. ಕಿತ್ತು ತಿನ್ನುವ ಬಡತನದ ನಡುವೆ ತನ್ನನ್ನು ಓದಿಸಿದ ತಂದೆ-ತಾಯಿ ನಂಬಿಕೆಯನ್ನು ಅವನು ಸುಳ್ಳಾಗಿಸಲಿಲ್ಲ. ಚೆನ್ನಾಗಿ ಓದಿದ . ಡಿಗ್ರಿ ಮುಗಿಯುತ್ತಿದ್ದಂತೆ ಪಾರ್ಟ್ ಟೈಮ್ ಕೆಲಸ ಮಾಡುತ್ತಾ ಓದು ಮುಂದುವರೆಸಿದ. ಬಿ.ಕಾಂ ನಲ್ಲಿ ಇಡೀ ಕುವೆಂಪು ವಿವಿಗೆ ಮೊದಲ ರ್ಯಾಂಕ್ ಪಡೆದ.
ನಂತರ ಮಂಗಳೂರು ವಿವಿಯಲ್ಲಿ ಎಂಬಿಎಗೆ ಸೇರಿದ.
ಇನ್ನೆರಡು ವರ್ಷ ಕಷ್ಟಪಟ್ಟು ಓದಿದರೆ ಗೆದ್ದಂತೆ, ಒಳ್ಳೆಯ ಕೆಲಸಕ್ಕೆ ಸೇರಿ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಭವಿಷ್ಯದ ಕನಸಿನೊಂದಿಗೆ ಚೆನ್ನಾಗಿ ಓದಿದ. ಕಷ್ಟ ಪಟ್ಟಿದ್ದೂ ಸಾರ್ಥಕ ಆಯಿತು. ಮೊದಲ ರ್ಯಾಂಕ್ ನೊಂದಿಗೆ ಎಂಬಿಎ ಪದವೀಧರನಾಗಿ ವಿವಿಯಿಂದ ಹೊರಬಂದ. ಜೊತೆಗೆ
ಅವನ ರ್ಯಾಂಕ್ ಮತ್ತು ಬುದ್ಧಿವಂತಿಕೆ, ಜ್ಞಾನ ಅವನ ಕೈ ಬಿಡಲಿಲ್ಲ. ಓದು ಮುಗಿಯುತ್ತಿದ್ದಂತೆ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ಬೆಂಗಳೂರತ್ತ ಪಯಣ ಬೆಳೆಸಿದ. ಅಲ್ಲಿಯವರೆಗೂ ಅವನ ಪ್ರೀತಿಯನ್ನು ಅವಳಲ್ಲಿ ನಿವೇಧಿಸಿಕೊಂಡಿರಲಿಲ್ಲ. ಅವಳಿಗೆ ಪ್ರಪೋಸ್ ಮಾಡಿ, ಅವಳು ಅದಕ್ಕೇ ಗ್ರೀನ್ ಸಿಗ್ನಲ್ ಕೊಟ್ಟು ಹತ್ತು ತಿಂಗಳಾಗಿತ್ತು. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹಚ್ಚಿಕೊಂಡಿದ್ದರು. ಆದರೆ, ಅವನು ಅವಳೊಡನೆ ಬೇಕೆಂದು ಜಗಳವಾಡಿದ, ಅವಳನ್ನು ದೂರ ಮಾಡಿದ. ಅವಳನ್ನು ದೂರವಿಟ್ಟು ಒಂದು ತಿಂಗಳೊಳಗೆ ಅವನು ಇಹಲೋಕದಿಂದಲೇ ದೂರಾದ..! ಹೋಗುವ ಮುನ್ನ ಗೆಳೆಯನಿಗೆ ಅಪ್ಪ ಅಮ್ಮನನ್ನು ನೋಡಿಕೊಳ್ಳಬೇಕು ಎಂದು ಮನವಿ ಮಾಡಿ ಎಲ್ಲರನ್ನೂ ಅವನು ಅಗಲುವಾಗ ಅವನ ವಯಸ್ಸು ಕೇವಲ 26…ವರ್ಷ!

ಅವನು ಗಾಯನ್. ಶಿವಮೊಗ್ಗ ಜಿಲ್ಲೆಯ ಒಂದು ಕುಗ್ರಾಮದ ಹುಡುಗ. ಬಡತನದಲ್ಲಿ ಬೆಳೆದು ಎಂಬಿಎ ಪದವೀಧರನಾದವ. ಅವನ ಹತ್ತಿರದ ಸಂಬಂಧಿ ಗಾನವಿ ಮೇಲೆ ಚಿಕ್ಕಂದಿನಿಂದಲೂ ಜೀವ ಇಟ್ಟುಕೊಂಡಿದ್ದ. ಬೇಸಿಗೆ ರಜೆಯಲ್ಲಿ ಮಾತ್ರ ಅವರ ಭೇಟಿ. ಅದೂ ನೆಂಟರ ಮನೆಯಲ್ಲಿ. (ಗಾಯನ್ ನ ಅಮ್ಮನ ತಂಗಿ ಗಂಡ, ಅಂದರೆ ಗಾಯನ್ ನ ಚಿಕ್ಕಪ್ಪ ಗಾನವಿಗೆ ಸೋದರ ಮಾವ. ಅವರ ಮನೆಯಲ್ಲಿ ಇವರ ಭೇಟಿ)
ಹೆಚ್ಚು ಕಡಿಮೆ ಪಿಯುಸಿ ಓದುವಾಗ ಗಾಯನ್ ಗೆ ಅವಳ ಮೇಲೆ ಲವ್ ಶುರುವಾಗಿತ್ತು.


ಮನೆಯಲ್ಲಿನ ಕಷ್ಟದ ಅರಿವಿತ್ತಾದ್ದರಿಂದ ಎಂಬಿಎ ಮುಗಿದರೂ ಪ್ರೀತಿ ನಿವೇಧಿಸಿ ಕೊಂಡಿರಲಿಲ್ಲ.
ಎಂಬಿಎ ಮುಗಿಸಿ ಕೆಲಸ ಸಿಕ್ಕ ಮೇಲೆ ಪ್ರೀತಿ ನಿವೇದಿಸಿಕೊಂಡ. ಅವಳು ಅವನ ಪ್ರೀತಿಯನ್ನು ಒಪ್ಪಿಕೊಂಡಳು. ಅವಳು ಆಗಿನ್ನೂ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ. ಅವಳ ಓದು ಮುಗಿದು ಕೆಲಸ ಸಿಕ್ಕ ಮೇಲೆ ಮನೆಯಲ್ಲಿ ಮಾತನಾಡೋದು ಅಂತ ಇಬ್ಬರೂ ಡಿಸೈಡ್ ಮಾಡಿದ್ರು. ಕೆಲಸ ಸಿಕ್ಕಿ ದೊಡ್ಡ ಮೊತ್ತದ ಸಾಲವನ್ನೆಲ್ಲಾ ಒಂದೊಂದಾಗಿಯೇ ತೀರಿಸುತ್ತಾ ಬಂದಿದ್ದ ಗಾಯನ್. ಇನ್ನೇನು ನಾಲ್ಕೈದು ತಿಂಗಳಲ್ಲಿ ಎಲ್ಲಾ ಸಾಲವು ತೀರುತ್ತಿತ್ತು. ಕೆಲಸಕ್ಕೆ ಸೇರಿ. ಎರಡು ವರ್ಷ ಮುಗಿಯುವುದರೊಳಗೆ ಎಲ್ಲಾ ಸಾಲ ತೀರಿದ ಹಾಗೆ ಆಗುತ್ತಿತ್ತು. (ಫುಲ್ ಟೈಮ್ ಕೆಲಸದ ಜತೆ ಪಾರ್ಟ್ ಮ್ ಕೆಲಸವನ್ನೂ ಮಾಡುತ್ತಿದ್ದ) ಆಮೇಲೆ ಮನೆಯಲ್ಲಿ ಮಾತನಾಡಿ ಗಾನವಿಯನ್ನು ಮದುವೆಯೂ ಆಗಬಹುದಿತ್ತು. ಆದರೆ, ಇದ್ದಕ್ಕಿದ್ದಂತೆ ಅವಳೊಡನೆ ಸಣ್ಣ ಪುಟ್ಟ ವಿಷಯಕ್ಕೂ ಜಗಳ ಮಾಡಿದ. ನಾವು ಹತ್ತಿರದ ಸಂಬಂಧಿಗಳು. ನಮ್ಮಿಂದಾಗಿ ನಮ್ಮ ಮನೆಯವರು ಮುಖ ಕೆಡಿಸಿಕೊಳ್ಳೋದು ಬೇಡ ಎಂದೂ ಸಹ ಹೇಳಿ ಅವಳಿಂದ ದೂರಾಗುವ ಪ್ರಯತ್ನ ಮಾಡಿದ. ಅವಳನ್ನು ದೂರವಿಟ್ಟ..!


ಅಷ್ಟೇ ಅಲ್ಲ ಬಾಲ್ಯದ ಗೆಳೆಯನನ್ನು ಭೇಟಿಯಾಗಿ, ಮಗಾ ನಾನಿಲ್ಲದಿದ್ದರೂ ನನ್ನ ಅಪ್ಪ ಅಮ್ಮನ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅವನ ಹತ್ತಿರ ಭಾಷೆ ತೆಗೆದುಕೊಂಡ. ಅವನ.ಗೆಳೆಯನಿಗೆ ಅರ್ಥ ಆಗಲಿಲ್ಲ. ಸರಿ, ಗೆಳೆಯ ನಾನಿಲ್ಲದೇ ಹೋದರೆ ನೀ ನನ್ನ ಅಪ್ಪ ಅಮ್ಮನ ನೋಡಿಕೊಳ್ಳಬೇಕು ಎಂದು ಅವನೂ ಗಾಯನ್ ಹತ್ತಿರ ಮಾತು ತೆಗೆದುಕೊಂಡ..!
ಕೆಲವು ದಿನಗಳ ನಂತರ ಗಾಯನ್ ವಿಧಿವಶನಾದ. ಆ ದೇವರು ತುಂಬಾ ಕ್ರೂರಿ ಅನಿಸುತ್ತೆ…? ಗಾಯನ್ ಸಾವಿಗೆ ಬ್ಲಡ್‌ ಕ್ಯಾನ್ಸರ್ ಕಾರಣ…!
ಒಮ್ಮೆ ಬ್ಲಡ್‌ ವಾಮಿಟ್ ಆದಲ್ಲಿಂದಲೇ ಅನುಮಾನದಿಂದ ಗಾನವಿಯನ್ನು ದೂರವಿಟ್ಟಿದ್ದ ಗಾಯನ್, ಕ್ಯಾನ್ಸರ್  ಕನ್ಫರ್ಮ್ ಆಗುತ್ತಿದ್ದಂತೆ ಗೆಳೆಯನನ್ನು ಭೇಟಿ ಮಾಡಿ ತಂದೆ ತಾಯಿಯನ್ನು ನೋಡಿಕೊಳ್ಳುವಂತೆ ಹೇಳಿದ್ದ.

ಕಷ್ಟಪಟ್ಟು ಬೆಳೆದ ಯುವಕ ಕನಸು ನನಸಾಗುವ ಹೊತ್ತಿಗೆ ಮರೆಯಾದ..! ಈ ಸಾವು ನ್ಯಾಯವೇ? ಜೀವನ ಪರ್ಯಂತಾ ಅವನ ಅಪ್ಪ ಅಮ್ಮನಿಗೆ ಬಡತನದ ಕಷ್ಟ ಕೊಟ್ಟಿದ್ದ ಆ ದೇವರು ಇಂಥಾ ದೊಡ್ಡ ಕಷ್ಟವನ್ನು ಕೊಟ್ಟಿದ್ದು ಸರಿಯೇ?

 

 

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...