ಅವರು ಧೋನಿಗೆ ಇಂಥಾ ಅವಮಾನ ಮಾಡ್ತಾರೆ ಅಂತ ಯಾರೂ ಕನಸು ಮನಸ್ಸಲ್ಲೂ ಎಣಿಸಿರಲಿಲ್ಲ..!

Date:

ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರಿಗೆ ಮುಂಬೈ ಇಂಡಿಯನ್ಸ್ ತಂಡ ಇಂಥಾ ಅವಮಾನ ಮಾಡುತ್ತೆ ಅಂತ ಯಾರೂ ಕನಸು ಮನಸ್ಸಲ್ಲೂ ಎಣಿಸಿರಲಿಲ್ಲ. ಬಹುಶಃ ಆ ತಂಡದ ನಾಯಕ ರೋಹಿತ್ ಶರ್ಮಾ ಅವರೂ ಅದನ್ನು ಎಣಿಸಿರಲಿಲ್ಲ. ರೋಹಿತ್​ ಗೆ ಹೀಗಾಗುತ್ತೆ ಎಂದು ಗೊತ್ತೇ ಇರಲಿಲ್ಲವೇನೋ?
ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ ಎರಡು ವರ್ಲ್ಡ್​ಕಪ್​ ತಂದುಕೊಟ್ಟ ನಾಯಕ. 2007ರಲ್ಲಿ ಟಿ20, 2011ರಲ್ಲಿ ಏಕದಿನ ವಿಶ್ವಕಪ್ ಧೋನಿ ನಾಯಕತ್ವದಲ್ಲಿ ಭಾರತಕ್ಕೆ ಒಲಿದು ಬಂದಿತ್ತು. ಧೋನಿ ಇಲ್ಲದ ಟೀಮ್ ಅನ್ನು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಧೋನಿ ಮುಂದಾಳತ್ವದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್​ನಲ್ಲಿ ಒಳ್ಳೆಯ ಪ್ರದರ್ಶನವನ್ನು ನೀಡುತ್ತಿದೆ. ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಧೋನಿ ಸಾರಥ್ಯದ ಚೆನ್ನೈ ವಿರುದ್ಧ ಗೆದ್ದು ಫೈನಲ್ ಪ್ರವೇಶ ಮಾಡಿದೆ. ಆದರೆ, ಧೋನಿ ಬಳಗಕ್ಕೆ ಇನ್ನೂ ಅವಕಾಶವಿದೆ. ಇಂದು ಡೆಲ್ಲಿ, ಹೈದರಾಬಾದ್​ ನಡುವಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ ಅವರೊಡನೆ ಸೆಣೆಸಿ ಫೈನಲ್ ಪ್ರವೇಶಿಸುವ ಅವಕಾಶ ಧೋನಿ ಬಳಗಕ್ಕೆ ಇದೆ.
ಈ ಹೊತ್ತಲ್ಲಿ ಧೋನಿಗೆ ಮುಂಬೈಗೆ ಅವಮಾನ ಮಾಡಿರುವ ಪೋಸ್ಟ್ ಒಂದು ಎಲ್ಲಾ ಕಡೆ ವೈರಲ್ ಆಗುತ್ತುದೆ. ಮಹೇಂದ್ರ ಸಿಂಗ್ ಧೋನಿ ಅವರನ್ನು ಕೂಲ್ ಕ್ಯಾಪ್ಟನ್ ಎಂದು ಇಡೀ ಕ್ರಿಕೆಟ್ ಜಗತ್ತೇ ಕರೆಯುತ್ತದೆ. ಇದೇ ವಿಚಾರದಲ್ಲಿ ಮುಂಬೈ ಇಂಡಿಯನ್ಸ್ ಧೋನಿಗೆ ಅವಮಾನ ಮಾಡಿದೆ. ರೋಹಿತ್ ಶರ್ಮಾ ಅವರಿಗೆ ಕೂಲ್ ಕ್ಯಾಪ್ಟನ್ ಅಂತ ಕರೆದು ಟ್ವೀಟ್ ಮಾಡಿರುವ ಮುಂಬೈ ಇಂಡಿಯನ್ಸ್ ಟೀಕೆಗೆ ಗುರಿಯಾಗಿದೆ. ರೋಹಿತ್​ ಗೆ ಕೂಲ್​ ಕ್ಯಾಪ್ಟನ್ ಬಿರುದು ನೀಡಿ ಮುಂಬೈ ಕರೆದಿರುವುದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ. ಧೋನಿ ಬಿಟ್ಟರೆ ಬೇರೆ ಯಾರಿಗೂ ಕೂಲ್ ಕ್ಯಾಪ್ಟನ್ ಎನ್ನಬಾರದು ಎಂದು ಅಭಿಮಾನಿಗಳು ಆಕ್ರೋಶವ್ಯಕ್ತಪಡಿಸಿದ್ದಾರೆ. ತಮ್ಮ ತಂಡ ತನಗೆ ಕೂಲ್ ಕ್ಯಾಪ್ಟನ್ ಎಂದು ಬಿರುದು ನೀಡಿ ಪೋಸ್ಟ್ ಮಾಡುತ್ತದೆ ಎಂದು ರೋಹಿತ್ ಶರ್ಮಾ ಅವರಿಗೂ ಗೊತ್ತಿರಲಿಲ್ಲ ಇರಬೇಕು. ಒಂದು ವೇಳೆ ಹಿಟ್ ಮ್ಯಾನ್ ರೋಹಿತ್​ ಗೆ ಮೊದಲೇ ಈ ವಿಷಯ ಗಮನಕ್ಕೆ ಬಂದಿದ್ದರೆ ಬೇಡ ಎನ್ನುತ್ತಿದ್ದರೇನೋ? ಆ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

Share post:

Subscribe

spot_imgspot_img

Popular

More like this
Related

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..?

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..? ಮನೆಯ ಅಂಗಳದಲ್ಲಿ ಬೆಳೆದ ತುಳಸಿ...

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...