ಅವಿವೇಕತನ ಬಿಟ್ಟು ಈಗಲಾದರೂ ಕಮಲ ಹಾಸನ್ ಕನ್ನಡಿಗರ ಕ್ಷಮೆಯಾಚಿಸಲಿ: ಬಿ.ವೈ.ವಿಜಯೇಂದ್ರ
ಬೆಂಗಳೂರು: ಅವಿವೇಕತನ ಬಿಟ್ಟು ಈಗಲಾದರೂ ಕಮಲ ಹಾಸನ್ ಕನ್ನಡಿಗರ ಕ್ಷಮೆಯಾಚಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ, ನಗರದಲ್ಲಿ ಮಾತನಾಡಿದ ಅವರು, ಕಮಲ ಹಾಸನ್ ಒಬ್ಬ ಖ್ಯಾತ ನಟ, ತಮಿಳು ಭಾಷೆ ಬಗ್ಗೆ ಅವರ ಪ್ರೀತಿ ನಮಗೆ ಅರ್ಥ ಆಗುತ್ತೆ.
ಆದರೆ ಅದರ ನೆಪದಲ್ಲಿ ಕನ್ನಡಕ್ಕೆ ಅಪಮಾನ ಮಾಡೋದನ್ನ ನಾವು ಖಂಡಿತ ಒಪ್ಪೋದಿಲ್ಲ. ಅದು ಸರಿಯಲ್ಲ. ಈಗಲೂ ಕಾಲ ಮಿಂಚಿಲ್ಲ, ಅವಿವೇಕತನ ಬಿಟ್ಟು ಈಗಲಾದರೂ ಕಮಲ ಹಾಸನ್ ಕನ್ನಡಿಗರ ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದ್ದಾರೆ.
ಇನ್ನೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವಷ್ಟು ದೊಡ್ಡ ಮನುಷ್ಯರು ನಾವಲ್ಲ. ಆದರೆ, ಸರ್ಕಾರದ ಗೂಂಡಾ ವರ್ತನೆ, ಇವರ ಸೊಕ್ಕನ್ನು ಮುರಿಯುವ ಶಕ್ತಿ ಬಿಜೆಪಿಗೆ ಇದೆ. ನಮ್ಮ ಕಾರ್ಯಕರ್ತರಿಗೆ ಇದೆ. ಅದನ್ನು ಮುಂದಿನ ದಿನಗಳಲ್ಲಿ ತೋರಿಸುತ್ತೇವೆ ಎಂದರು.