ಅಶ್ಲೀಲ ಹೇಳಿಕೆ: ವಿವಾದ ಭುಗಿಲೆದ್ದ ಬಳಿಕ ಸಮಂತಾ ಬಳಿ ಕ್ಷಮೆ ಕೇಳಿದ ಸುರೇಖಾ

Date:

ಅಶ್ಲೀಲ ಹೇಳಿಕೆ: ವಿವಾದ ಭುಗಿಲೆದ್ದ ಬಳಿಕ ಸಮಂತಾ ಬಳಿ ಕ್ಷಮೆ ಕೇಳಿದ ಸುರೇಖಾ!

ತೆಲಂಗಾಣ ಅರಣ್ಯ ಸಚಿವೆ ಕೊಂಡ ಸುರೇಖಾ ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಸಮಂತಾ ರುತ್ ಪ್ರಭು, ನಾಗಾರ್ಜುನ ಮತ್ತು ನಾಗ ಚೈತನ್ಯ ಅವರ ಬಗ್ಗೆ ತೀರಾ ಅಸಭ್ಯ ರೀತಿಯಲ್ಲಿ ಅವರು ಮಾತನಾಡಿದ್ದಾರೆ. ಸಾರ್ವಜನಿಕವಾಗಿ ಕೊಂಡ ಸುರೇಖಾ ಆಡಿರುವ ಮಾತುಗಳಿಗೆ ಎಲ್ಲರಿಂದ ತೀವ್ರ ವಿರೋಧ್ಯ ವ್ಯಕ್ತವಾಗುತ್ತಿದೆ. ಕೆ.ಟಿ. ರಾಮ ರಾವ್ ಅವರನ್ನು ವಿರೋಧಿಸುವ ಭರದದಲ್ಲಿ ಸುರೇಖಾ ಅವರು ಇಲ್ಲಸಲ್ಲದ ವಿಚಾರಗಳನ್ನು ಎಳೆದು ತಂದಿದ್ದಾರೆ. ಇದರ ಬೆನ್ನಲ್ಲೇ ಅಶ್ಲೀಲ ಹೇಳಿಕೆ ನೀಡಿದ ವಿವಾದ ಜೋರಾಗುತ್ತಿದ್ದಂತೆ ತೆಲಂಗಾಣ ಸಚಿವೆ ಕೊಂಡ ಸುರೇಖಾ ಅವರು ಸಮಂತಾ ಬಳಿ ಕ್ಷಮೆಯಾಚಿಸಿದ್ದಾರೆ.
ತೆಲಂಗಾಣ ಅರಣ್ಯ ಸಚಿವೆ ಕೊಂಡಾ ಸುರೇಖಾ ಅವರು ನಟಿ ಸಮಂತಾ ಬಗ್ಗೆ ನೀಡಿದ್ದ ಹೇಳಿಕೆಗೆ ಸಂಬಂಧಿಸಿ ಕ್ಷಮೆ ಕೇಳಿದ್ದಾರೆ. ಅವರು ತಮ್ಮ ಉದ್ದೇಶವನ್ನು ಹೇಳಿ ಮಾತನ್ನು ಹಿಂಪಡೆದಿದ್ದಾರೆ. ಎನ್ ಕನ್ವೆಷನ್ ಹಾಲ್ ಉಳಿಸಿಕೊಳ್ಳಲು ಸಮಂತಾ ಅವರನ್ನು ಕಳುಹಿಸುವಂತೆ ನಾಗಾರ್ಜುನ ಬಳಿ ಕೆಟಿಆರ್ ಕೇಳಿದ್ದರು. ಆ ಬಳಿಕ ನಾಗಾರ್ಜುನ ಅವರು ಸಮಂತಾ ಬಳಿ ಹೋಗಿ ಈ ಡೀಲ್ ಬಗ್ಗೆ ಮಾತನಾಡಿದ್ದರು. ಆದರೆ, ಇದಕ್ಕೆ ಒಪ್ಪದ ಸಮಂತಾ ಪತಿ ನಾಗ ಚೈತನ್ಯ ಇಂದ ವಿಚ್ಛೇದನ ಪಡೆದರು’ ಎಂದು ಸುರೇಖಾ ಹೇಳಿಕೆ ನೀಡಿದ್ದರು.
ಜೊತೆಗೆ ನಟಿಯರ ಫೋನ್ನ ಕೆಟಿ ರಾಮ್ ರಾವ್ ಟ್ಯಾಪ್ ಮಾಡಿ ನಂತರ ಬ್ಲ್ಯಾಕ್ಮೇಲ್ ಮಾಡುತ್ತಿದ್ದರು ಎಂದು ಕೂಡ ಹೇಳಿದ್ದರು. ಮಹಿಳೆಯರ ಬಗ್ಗೆ ಆ ನಾಯಕ ಹೊಂದಿರುವ ಕೀಳು ಮನೋಭಾವವನ್ನು ತೋರಿಸುವುದು ಮಾತ್ರ ನನ್ನ ಉದ್ದೇಶ ಆಗಿತ್ತೇ ಹೊರತು, ಸಮಂತಾ ಅವರ ಭಾವನೆಗೆ ದಕ್ಕೆ ತರೋದಲ್ಲ. ನೀನು ಸ್ವಶಕ್ತಿಯಿಂದ ಬೆಳೆದು ಬಂದ ಬಗ್ಗೆ ನನಗೆ ಅಭಿಮಾನ ಇದೆ. ಅದು ಆದರ್ಶವೂ ಹೌದು’ ಎಂದು ಕೊಂಡಾ ಸುರೇಖಾ ಟ್ವೀಟ್ ಮಾಡಿದ್ದಾರೆ.

Share post:

Subscribe

spot_imgspot_img

Popular

More like this
Related

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ ಇತಿಹಾಸದುದ್ದಕ್ಕೂ...

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ಮಂಗಳೂರು: ಮಹೇಶ್...

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ ಬೆಂಗಳೂರು:-ಕಲ್ಯಾಣ...

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್ ಚಿಕ್ಕಮಗಳೂರು: ಶೃಂಗೇರಿ...