ಅಸ್ಟ್ರಲ್ ಪೇಜಂಟ್‌ಸ್ 9ನೇ ಆವೃತ್ತಿಗೆ ಅದ್ಭುತ ಆರಂಭ !
ಮಿಸ್ ಮತ್ತು ಮಿಸೆಸ್ ಇಂಡಿಯಾ ಅಸ್ಟ್ರಲ್ 2025ರ ಬಹು ನಿರೀಕ್ಷಿತ ಜರ್ನಿ ಅದ್ದೂರಿಯಾಗಿ ಆರಂಭವಾಗಿದೆ. ಈ ವರ್ಷದ ಸ್ಪರ್ಧಾರ್ಥಿಗಳು ರಾಜಮನೆತನದ ನೀಲಿ ಬಣ್ಣದ ಆಕರ್ಷಕ ಉಡುಪುಗಳಲ್ಲಿ ಆಗಮಿಸಿ ನಕ್ಷತ್ರಗಳಂತೆ ಕಂಗೊಳಿಸಿದರು. ಈ ಕಾರ್ಯಕ್ರಮ ಅದ್ಭುತ ಶೈಲಿಯಲ್ಲಿ ಆರಂಭಗೊಂಡಿತು.
ಕಾರ್ಯಕ್ರಮ ಟಫ್ ಟಾಸ್ಕ್ ನ ರೀತಿ ವೈಯಕ್ತಿಕ ಸಂದರ್ಶನ ಸುತ್ತಿನಿಂದ ಆರಂಭವಾಯಿತು. ಇಲ್ಲಿ ಸ್ಪರ್ಧಾರ್ಥಿಗಳು ತಮ್ಮ ವ್ಯಕ್ತಿತ್ವ, ಆತ್ಮವಿಶ್ವಾಸ ಮತ್ತು ಕನಸುಗಳನ್ನು ಜಡ್ಜಸ್ ಗಳ ಮುಂದೆ ಪ್ರದರ್ಶಿಸಿದರು.

ಜಡ್ಜಸ್ ಗಳಾಗಿ ಪ್ರಭು ಮೇಥಿಮಠ್ –A2 ಫೌಂಡರ್ ಮತ್ತು ಡೈರೆಕ್ಟರ್, ಕಾಸ್ಟಿಂಗ್ ಹೌಸ್ ,ರಘು ಭಟ್ – ನಟ ಹಾಗೂ ಸಿಇಒ, ದಿ ನ್ಯೂ ಇಂಡಿಯಾ ಟೈಮ್ಸ್ , ಪ್ರಗತಿ ಅನುನ್ – ಎಲೈಟ್ ಮಿಸೆಸ್ ಅರ್ಥ್ ಇಂಟರ್‌ನ್ಯಾಷನಲ್ ಟೂರಿಸಂ 2024 ,ಶುಭ್ರಾ – ಉದ್ಯಮಿ ಹಾಗೂ ಫೌಂಡರ್.



ಪ್ರಸಿದ್ಧ ರಂಗಭೂಮಿ ಕಲಾವಿದ, ನಟ ಹಾಗೂ ನಿರ್ದೇಶಕ ರಾಜು ವೈವಿದ್ಯ ನಡೆಸಿದ ಚುರುಕು ಅಭಿನಯ ಕಾರ್ಯಾಗಾರದಲ್ಲಿ ಮೆರಗು ನೀಡಿತು. ಸಂಜೆ ವೈಭವದಿಂದ ಕೂಡಿದ ಪ್ರತಿಭಾ ಪ್ರದರ್ಶನದೊಂದಿಗೆ ಕಾರ್ಯಕ್ರಮ ಅಂತ್ಯವಾಯಿತು.ವೈವಿಧ್ಯಮಯ ಕೌಶಲ್ಯಗಳ ಅದ್ಭುತ ಸಂಭ್ರಮ. ಬೆಂಕಿ ಇಲ್ಲದ ಅಡುಗೆ, ಅಭಿನಯ, ಸೀಟಿಯಿಂದ ಹಾಡುವುದು, ನೃತ್ಯ, ಚಿತ್ರಕಲೆ, ಶುದ್ಧ ಒಡಿಸ್ಸಿ ನೃತ್ಯದ ಲಾಲಿತ್ಯ ಮತ್ತು ಸಿಪಿಆರ್ ಕಲಿಸುವ ಮಹತ್ವದ ಕಾರ್ಯದವರೆಗೆ ಪ್ರತಿಯೊಂದು ಪ್ರದರ್ಶನವೂ ಹುಮ್ಮಸ್ಸು ಮತ್ತು ವೈಯಕ್ತಿಕತೆಯನ್ನು ಪ್ರತಿಬಿಂಬಿಸಿತು. ಈ ಪ್ರತಿಭಾ ಪ್ರದರ್ಶನವನ್ನು ಗಣ್ಯರಾದ ಸುನೆತ್ರಾ ಪಂಡಿತ್ ಮತ್ತು ಸ್ಮಿತಾ ಪ್ರಕಾಶ್ ಸಿರ್ಸಿ ತೀರ್ಪು ನೀಡಿದರು. ಪ್ರತಿಭಾ ಸೌಂಶಿಮಠ್, ಅಸ್ಟ್ರಲ್ ಪೇಜಂಟ್‌ಸ್ ಫೌಂಡರ್ ಮತ್ತು ಡೈರೆಕ್ಟರ್, ಈಗಾಗಲೇ ನಡೆದ ಕಾರ್ಯಕ್ರಮದ ಜರ್ನಿಯನ್ನು ಹಂಚಿಕೊಂಡರು.
ಅಸ್ಟ್ರಲ್ ಪೇಜಂಟ್‌ಸ್ 9ನೇ ಆವೃತ್ತಿಯು ಡ್ರೀಮ್ ಪರಂಪರೆಯಾಗಿ ರೂಪಾಂತರಗೊಳ್ಳುವಂತಿದೆ.