ಬೆಳಗಾವಿ: ಬೆಳಗಾವಿಯ ಕಂಗ್ರಾಳ ಗಲ್ಲಿಯಲ್ಲಿ ಆಟವಾಡುತ್ತ ಸಂಪ್ ಗೆ ಬಿದ್ದು 2 ವರ್ಷದ ಕಂದಮ್ಮ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಸಾಯೀಶಾ ಮೃತಮಗುವಾಗಿದ್ದು, ಆಟವಾಡುತ್ತಿದ್ದ ಮಗು ಕಣ್ಮರೆಯಾಗಿದ್ದು, ಪೋಷಕರಿಗೆ ತೀವ್ರ ಹುಡುಕಾಟ ನಡೆಸಿದ್ದಾರೆ.

ಎಷ್ಟೇ ಹುಡುಕಿದರೂ ಮಗು ಕಾಣದಿದ್ದಾಗ ಸಂಪ್ ತೆರೆದು ನೋಡಿದಾಗ ಮಗು ಬಿದ್ದಿರುವುದು ಕಂಡಿದೆ. ಕೂಡಲೇ ಮಗುವನ್ನು ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ಕರೆತರುವ ಮುನ್ನವೇ ಮಗು ಸಾವಿಗೀಡಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಖಡೇ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.






