ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!
ಬೆಂಗಳೂರು:- ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್ ಕೊಡಲಾಗಿದೆ.
ಮೊದಲೆಲ್ಲ ಬೆಳ್ಳಗ್ಗೆ 6.30ಕ್ಕೆ ಕಸದ ಆಟೋಗಳು ಕಸ ಸಂಗ್ರಹಕ್ಕೆ ಮನೆ ಮುಂದೆ ಬರುತ್ತಾ ಇದ್ದವು ಈಗ ಸಮಯವನ್ನ ಬದಲಾವಣೆ ಮಾಡಿ ಬೆಳ್ಳಗ್ಗೆ 5.30ಕ್ಕೆ ಮನೆ ಮನೆಗೆ ಆಟೋ ತೆರಳುವಂತೆ ಆದೇಶ ಮಾಡಿದೆ. ಆದರೂ ಕೂಡ ಕಸದ ಆಟೋಗೆ ಕಸ ನೀಡದೇ ಬೆಂಗಳೂರಿಗರು ನಿರ್ಲಕ್ಷ್ಯ ತೋರಿದ್ದಾರೆ.
ಕಸದ ಆಟೋಗಳಿಗೆ ಕಸ ನೀಡದ ಮನೆಗಳಿಗೆ ನೋಟಿಸ್ ನೀಡಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ನಿರ್ಧಾರ ಮಾಡಿದೆ. ಕಸ ನೀಡದ ಮನೆಗಳಿಗೆ ನೋಟಿಸ್ ನೀಡಲಿದೆ ಜೊತೆಗೆ ಕಟ್ಟಡ ನಿರ್ಮಾಣದ ಆವಶೇಗಳನ್ನ ಎಲ್ಲೆಂದರಲ್ಲೆ ಬಿಸಾಡುತ್ತಿದ್ದರು. ಈಗ ಕಟ್ಟಡದ ಆವಶೇಷಗಳನ್ನ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ದಿಂದಲೇ ವಿಲೇವಾರಿ ಮಾಡಲು ಚಿಂತಿಸಿದೆ. ವಿಲೇವಾರಿ ವೆಚ್ಚವನ್ನ ಕಟ್ಟಡ ಮಾಲೀಕರು ಭರಿಸಬೇಕಿದೆ ಎಂದು ವರದಿ ತಿಳಿಸಿದೆ.